ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಮಧೇನು ರಕ್ಷಣೆಗೆ ನೀವು ಹೇಗೆ ಕೈಜೋಡಿಸಬಹುದು?

ನಾಡಿನ ಸಮಸ್ತ ಗೋಪ್ರೇಮಿಗಳು ಸೇರಿ ಗೋವಂಶವನ್ನು ಉಳಿಸಲು ಪ್ರತಿ ತಿಂಗಳು ಸ್ವ ಇಚ್ಛೆಯಿಂದ ತಮಗೆ ಹೊರೆಯಾಗದಷ್ಟು ಹಣವನ್ನು ಗೋರಕ್ಷಣೆಗಾಗಿ ಕಾಣಿಕೆ ನೀಡಬಹುದು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಕೇಳಿದ್ದನ್ನೆಲ್ಲ ಕೊಡುವ ಕಾಮಧೇನುವಾದ ಗೋವು ಭಾರತೀಯರ ಪಾಲಿನ ಆರಾಧ್ಯ ದೈವ. ಅದಕ್ಕೆಂದೇ ಗೋವಿನಲ್ಲಿ 33 ಕೋಟಿ ದೇವತೆಗಳೂ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಆದರೆ ಇಂದು ದೇಶದ ಹಲವು ರಾಜ್ಯಗಳು ಭೀಕರ ಬರ ಎದುರಿಸುತ್ತಿರುವಾಗ, ಮೇವಿಲ್ಲದೆ ಸಾಯುತ್ತಿರುವ ಗೋವುಗಳ ಮೌನ ರೋದನ ಯಾರಿಗೆ ಕೇಳೀತು?

ಗೋವು ವಿಶ್ವದ ಮಾತೆ ಎನ್ನುವ ನಾವು, ಗೋವಿನ ರಕ್ಷಣೆಗಾಗಿ ಅಳಿಲು ಸೇವೆಯನ್ನಾದರೂ ಮಾಡುವುದಕ್ಕೆ ಸಾಧ್ಯವಿಲ್ಲವೇ? ಸಾಧ್ಯವಿದೆ ಎಂಬುದನ್ನು ತೋರಿಸುವುದಕ್ಕಾಗಿಯೇ ಗೋ ರಕ್ಷಣೆಯಲ್ಲಿ ಸದಾ ಮುಂದಿರುವ ರಾಮಚಂದ್ರಾಪುರ ಮಠ ಆನ್ ಲೈನ್ ಅಭಿಯಾನವೊಂದನ್ನು ಆರಂಭಿಸಿರುವುದನ್ನು ನೀವು ಈಗಾಗಲೇ ಒನ್ ಇಂಡಿಯಾದಲ್ಲಿ ಓದಿದ್ದೀರಿ. ಈ ಅಭಿಯಾನದಲ್ಲಿ ಭಾಗಿಯಾಗುವುದು ಹೇಗೆ? ಈ ಸೇವಾಕಾರ್ಯಕ್ಕೆ ಕೈಜೋಡಿಸುವುದು ಹೇಗೆ ಎಂಬ ಮಾಹಿತಿ ನಿಮಗಾಗಿ ಇಲ್ಲಿದೆ.

ತ್ಯಾಗೇನೈಕೇ ಅಮೃತತ್ವ ಮಾನಶುಃ ಹೀಗಂದರೆ - ಅಮೃತತ್ವ ಪ್ರಾಪ್ತಿಗೆ ಇರುವ ಒಂದೇ ಮಾನದಂಡ ಅಂದ್ರೆ ಅದು ತ್ಯಾಗ ಎಂದು. ನಾವು ಪ್ರತಿದಿನ ಮಾಡುವ ಊಟದಲ್ಲಿ, ಆಗಾಗ ಮಾಡುವ ದುಬಾರಿ ಶಾಪಿಂಗಗಳಲ್ಲಿ,‌ ಸಂಭ್ರಮಾಚರಣೆಗಾಗಿ ದುಂದುವೆಚ್ಚ ಮಾಡುವ ಹಣದಲ್ಲಿ ಒಂದು ಸಣ್ಣ ಪಾಲನ್ನು ತ್ಯಾಗ ಮಾಡಿದರೆ ನಮ್ಮ ಜೀವಕ್ಕೇನೂ ಆಪತ್ತು ಬರುವುದಿಲ್ಲ‌. ಆದರೆ ಹೀಗೆ ಉಳಿಸಿದ ಹಣದಿಂದ ಮತ್ತೊಂದು ಜೀವವನ್ನು ರಕ್ಷಿಸುವುದಕ್ಕೆ ಸಾಧ್ಯ ಎನ್ನುತ್ತದೆ ಶ್ರೀಮಠ.[ಉಪವಾಸವಿರುವ ಗೋರಕ್ಷಣೆಗಾಗಿ ಒಪ್ಪೊತ್ತಿನ ಊಟ ಬಿಡಿ]

U too can donate to save cow..!

ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಭಿಯಾನ ಮೇವಿಲ್ಲದೆ ಸಾಯುತ್ತಿರುವ ಲಕ್ಷ ಲಕ್ಷ ಗೋವುಗಳನ್ನು ರಕ್ಷಿಸುವ ಹೊಣೆ ಹೊತ್ತಿದೆ.

ನಾಡಿನ ಸಮಸ್ತ ಗೋಪ್ರೇಮಿಗಳು ಸೇರಿ ಗೋವಂಶವನ್ನು ಉಳಿಸಲು ಪ್ರತಿ ತಿಂಗಳು ಕಿರುಕಾಣಿಕೆಯನ್ನುಸಮರ್ಪಿಸುವ ಈ ಯೋಜನೆಯಲ್ಲಿ ಯಾರು ಬೇಕಾದರೂ ಸ್ವ ಇಚ್ಛೆಯಿಂದ ತಮಗೆ ಹೊರೆಯಾಗದಷ್ಟು ಹಣವನ್ನು ಗೋರಕ್ಷಣೆಗಾಗಿ ಕಾಣಿಕೆ ನೀಡಬಹುದು. 100 ರೂ. ನಿಂದ 1000 ರೂ. ವರೆಗೂ ಕಾಣಿಕೆ ನೀಡಬಹುದು. ಒಂದು ವರ್ಷದ ಕಾಣಿಕೆಯನ್ನು ಒಟ್ಟಿಗೇ ನೀಡಬಹುದು.
ಸುಮಾರು 10,000 ದಾನಿಗಳಿಂದ ಪ್ರತಿ‌ ತಿಂಗಳಿಗೆ ಕನಿಷ್ಠ 10 ಲಕ್ಷ ರೂ. ಸಂಗ್ರಹಿಸುವ ಗುರಿ ಮಠಕ್ಕಿದೆ.

ನೀವೂ ಕಾಣಿಕೆ ನೀಡಬಹುದು
ಕಾಮದುಘಾ ವಿಭಾಗದ ಈ ಕೆಳಗಿನ ಖಾತೆಗೆ ಪ್ರತಿ ತಿಂಗಳ 10 ನೇ‌ ತಾರೀಖಿನ ಒಳಗೆ ಕಾಣಿಕೆ ನೀಡಬಹುದು.
ಬ್ಯಾಂಕ್ ವಿವರ: Kamadugha, A/c # 0992500101611901, IFSC: KARB0000099 Karnataka Bank, Srinagar, Bengaluru.

UPI/BHIM ಮೂಲಕವೂ ಕಾಣಿಕೆ ನೀಡಬಹುದು.

ಆನ್ ಲೈನ್ ನಲ್ಲಿ ಕಾಣಿಕೆ ನೀಡುವರು account + IFSC code ಬಳಸಬಹುದು.
ಪ್ರತಿ ಬಾರಿ ಕಾಣಿಕೆ‌ ಸಮರ್ಪಿಸಿದ ನಂತರ ಈ ಗೂಗಲ್ ಲಿಂಕಿನಲ್ಲಿ ವಿವರಗಳನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ತಾವು ನೀಡಿದ ದೇಣಿಗೆಗೆ ಪಾವತಿಯನ್ನೂ ಇಲ್ಲಿ ಪಡೆಯಬಹುದು.
ದಾನಿಗಳು ನೀಡುವ ಕಾಣಿಕೆಗೆ 80 ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯತಿ ದೊರಕುತ್ತದೆ.

ಈ ಅಭಿಯಾನದ ಕುರಿತು ಪ್ರತಿಯೊಬ್ಬ ಗೋಪ್ರೇಮಿಗಳೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಪ್ರಚಾರ ನೀಡಿ, ಗೋ ರಕ್ಷಣೆಗೆ ಪಣತೋಡಬೇಕು ಎಂದು ರಾಮಚಂದ್ರಾಪುರ ಮಠದ ಭಕ್ತರು ಕೋರಿದ್ದಾರೆ.

English summary
To save cows from drought and to provide fodder to them, Ramachandrapura math has started an online campaign under hashtag GiveUpAMeal. The math requested to give up a meal and give that saved money to provide fodder to the cows. Here is the details on the campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X