ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ನಲ್ಲಿ ಇನ್ಮುಂದೆ ಕನ್ನಡದಲ್ಲೇ ಹುಡುಕಾಟ ನಡೆಸಿ!

By Mahesh
|
Google Oneindia Kannada News

ಬೆಂಗಳೂರು, ಫೆ.18: ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಸಮರ ಹೇಗೆಲ್ಲ ಪರಿಣಾಮ ಬೀರಬಹುದು ಎಂಬುದಕ್ಕೆ ಟ್ವಿಟ್ಟರ್ ತಂದಿರುವ ಹೊಸ ಸೌಲಭ್ಯವನ್ನು ಉದಾಹರಿಸಬಹುದು. ಈಗ ಕನ್ನಡ ಹ್ಯಾಶ್ ಟ್ಯಾಗ್ ಬಳಸಬಹುದಾಗಿದೆ.

ವಿಶ್ವಕಪ್ ಪಂದ್ಯದ ವೇಳೆ ದೇವನಾಗರಿ ಲಿಪಿಯಲ್ಲಿ ಜೈ ಹಿಂದ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಮಾಡಿದ ಟ್ವೀಟ್ ಸಕತ್ ಟ್ರೆಂಡಿಂಗ್ ಆಗಿತ್ತು. ಇದನ್ನು ಗಮಿಸಿದ ಟ್ವಿಟ್ಟರ್ ಈಗ ಕನ್ನಡ ಸೇರಿದಂತೆ 11 ಭಾರತೀಯ ಭಾಷೆಗಳಲ್ಲಿ ಹ್ಯಾಶ್ ಟ್ಯಾಗ್ ಬಳಸುವ ಅವಕಾಶವನ್ನು ಮೈಕ್ರೋ ಬ್ಲಾಗರ್ಸ್ ಗಳಿಗೆ ನೀಡುತ್ತಿದೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹ್ಯಾಶ್ ಟ್ಯಾಗ್ (#) ಇದ್ದರೆ ಹುಡುಕಾಟ ಸುಲಭ. ಬಹುತೇಕ ಇಂಗ್ಲೀಷ್ ಭಾಷೆ ಟ್ಯಾಗ್ ಬಳಕೆಯಲ್ಲಿತ್ತು. ಜೊತೆಗೆ ಟ್ವೀಟ್ ಗಳು ಕೂಡಾ ಆರಂಭದಲ್ಲಿ ಇಂಗ್ಲೀಷ್ ನಲ್ಲಿ ಇರುತ್ತಿತ್ತು. [ಖಾತೆ ಓಪನ್ ಮಾಡಿ ಟ್ವೀಟ್ ಮಾಡದಿರೇ ಎಂತಯ್ಯ!]

ಅದರೆ, ಬೇಡಿಕೆ, ಬಳಕೆ ಹೆಚ್ಚಿದಂತೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಟ್ವೀಟ್ ಮಾಡುವ ಸೌಲಭ್ಯವನ್ನು ಟ್ವಿಟ್ಟರ್ ಒದಗಿಸಿತ್ತು. ಈಗ ಕನ್ನಡ ಹ್ಯಾಶ್ ಟ್ಯಾಗ್ ಬಳಸಿ (ಉದಾ: #ಕನ್ನಡ, #ಬೆಂಗಳೂರು) ಸುಲಭವಾಗಿ ನಿಮ್ಮ ನೆಚ್ಚಿನ ವಿಷಯದ ಬಗ್ಗೆ ನಡೆದಿರುವ ಚರ್ಚೆ, ಮಾಹಿತಿಯನ್ನು ಪಡೆದುಕೊಳ್ಳಬಹುದು.[ಟ್ವಿಟ್ಟರ್ ಬಳಸಿ ಹಣ ರವಾನಿಸಿ]

ಫೆ. 15ರಂದು ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಜನಪ್ರಿಯಗೊಂಡ ಹಿಂದಿ ಭಾಷೆಯ ದೇವನಾಗರಿ ಲಿಪಿಯ ಹ್ಯಾಶ್ ಟ್ಯಾಗ್ ಈಗ 11 ಭಾಷೆಗೂ ವಿಸ್ತರಿಸಲಾಗಿದೆ. ಹಿಂದಿ, ನೇಪಾಳ, ಮರಾಠಿ, ಸಂಸ್ಕೃತ), ಕನ್ನಡ, ಬೆಂಗಾಲಿ, ಗುಜರಾತಿ, ಪಂಜಾಬಿ, ಓರಿಯಾ, ತಮಿಳು, ಮಲಯಾಳಂ, ತೆಲುಗುಗಳಲ್ಲಿ ಹ್ಯಾಶ್ ಸೌಲಭ್ಯ ನೀಡಲಾಗಿದೆ.[ಟ್ವಿಟ್ಟರ್‌ನಲ್ಲಿನ್ನು ವಿಡಿಯೋ, ಗ್ರೂಪ್ ಮೆಸೇಜ್]

ಹ್ಯಾಶ್ ಟ್ಯಾಗ್ ಏಕೆ ಬಳಸಬೇಕು

ಹ್ಯಾಶ್ ಟ್ಯಾಗ್ ಏಕೆ ಬಳಸಬೇಕು

ಒಂದು ವೇಳೆ ಹ್ಯಾಶ್ ಟ್ಯಾಗ್(#ಕನ್ನಡ) ಬಳಸದಿದ್ದರೂ ನೀವು ಮಾಡಿರುವ ಟ್ವೀಟ್ ನಲ್ಲಿ ಕನ್ನಡ ಎಂಬ ಪದ ವಿದ್ದರೆ ಬೇರೆಯವರು ಹುಡುಕಿದಾಗ ಸಿಗುತ್ತದೆ. ಅದರೆ, # ಬಳಸುವುದರಿಂದ ಹುಡುಕಾಟ ಸುಲಭವಾಗುತ್ತದೆ. ನಿಮ್ಮ ಸಂದೇಶ ಹೆಚ್ಚು ಜನಕ್ಕೆ ಸುಲಭವಾಗಿ ತಲುಪುತ್ತದೆ.

ಕನ್ನಡದ ಹಿರಿಮೆ ಗರಿಮೆ ಸಾರುವ ಟ್ವೀಟ್ ಗಳು

ಕನ್ನಡದ ಹಿರಿಮೆ ಗರಿಮೆ ಸಾರುವ ಟ್ವೀಟ್ ಗಳು ಹರಿದಾಡುತ್ತಿವೆ, ವಚನ, ತ್ರಿಪದಿ, ಕವನಗಳನ್ನು ಟ್ವೀಟ್ ಮಾಡುತ್ತಿದ್ದಾರೆ.

ಎಲ್ಲರೂ #ಕನ್ನಡ ಬಳಸಲು ಸ್ವಯಂ ಕರೆ ನೀಡುತ್ತಿದ್ದಾರೆ

ಎಲ್ಲರೂ #ಕನ್ನಡ ಬಳಸಲು ಸ್ವಯಂ ಕರೆ ನೀಡುತ್ತಿದ್ದಾರೆ

ಬೇರೆ ಜಾಲ ತಾಣಗಳಲ್ಲಿ ಪರಿಸ್ಥಿತಿ ಹೇಗೆ?

ಬೇರೆ ಜಾಲ ತಾಣಗಳಲ್ಲಿ ಪರಿಸ್ಥಿತಿ ಹೇಗೆ?

ಫೇಸ್‍ಬುಕ್, ಗೂಗಲ್ ಪ್ಲಸ್, ಇನ್‍ಸ್ಟಾಗ್ರಾಂ, ಟ್ವಿಟರ್ ಸಾಮಾಜಿಕ ತಾಣಗಳಲ್ಲಿ # ಸೇರಿಸಿ ಟ್ಯಾಗ್ ಮಾಡಬಹುದಾಗಿದೆ. ಉದಾ: #wednesday #india #ಕನ್ನಡ #ಬೆಂಗಳೂರು ಆದರೆ, ಇನ್ಸ್ಟಾ ಗ್ರಾಂ ನಲ್ಲಿ ಹೆಚ್ಚು ಬಳಕೆ ಇಲ್ಲ. ಹೆಚ್ಚೆಚ್ಚು ಕನ್ನಡ ಲಿಪಿ ಬಳಸಿದ್ದಷ್ಟು ಸಂಸ್ಥೆಗಳು ತಾವಾಗೇ ನಿಮಗೆ ಈ ರೀತಿ ಸೌಲಭ್ಯ ನೀಡುತ್ತವೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.

ತಮಿಳ್ ವಾಳ್ಗೆ ಎಂಬ ಟ್ಯಾಗ್ ಇವತ್ತು ಟ್ರೆಂಡಿಂಗ್

ತಮಿಳ್ ವಾಳ್ಗೆ ಎಂಬ ಟ್ಯಾಗ್ ನಿನ್ನೆ ಭಾರತದಲ್ಲಿ ನಂ,1 ಟ್ರೆಂಡಿಂಗ್ ಇತ್ತು. ಇವತ್ತು ಬೆಂಗಳೂರಿನ ಟ್ರೆಂಡಿಂಗ್ ಪಟ್ಟಿಯಲ್ಲೂ ಮುಂದಿದೆ.

ಏನಾದರೂ ಬರೀರಿ ಕನ್ನಡ ಪದ ಬಳಕೆ ಮಾಡಿ

ಏನಾದರೂ ಬರೀರಿ ಕನ್ನಡ ಪದ ಬಳಕೆ ಮಾಡಿ ತಪ್ಪದೇ #ಕನ್ನಡ ಟ್ಯಾಗ್ ಬಳಸಿ ಕನ್ನಡ ಪ್ರೇಮ ತೋರಿಸಿ

ಕವಿಗಳ ಸಾಲುಗಳು ಟ್ವಿಟ್ಟರ್ ಲೋಕಕ್ಕಿಳಿದಿವೆ

ಕವಿಗಳ ಸಾಲುಗಳು ಟ್ವಿಟ್ಟರ್ ಲೋಕಕ್ಕಿಳಿದಿವೆ ಪಣ ತೊಟ್ಟಂತೆ ಕೆಲ ಕನ್ನಡಿಗರು ಖ್ಯಾತ ಕವಿಗಳ ಸಾಲುಗಳನ್ನು ಜಗಕ್ಕೆ ತೋರಿಸುತ್ತಿದ್ದಾರೆ.

English summary
Twitter rolls out #hashtags in 11 other Indian languages Twitter is yet to officially announce hashtag inclusion for more scripts, tweets can be hashtagged in the following Indian scripts/languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X