ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಲ್ಮಾನ್ ಶಿಕ್ಷೆ ಟ್ವಿಟ್ಟರ್ ನಲ್ಲಿ ಜನತೆ ಕೊಟ್ಟ ತೀರ್ಪೇನು?

By Mahesh
|
Google Oneindia Kannada News

ಬೆಂಗಳೂರು, ಮೇ.6: ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟ ಸಲ್ಮಾನ್ ಖಾನ್ ಅವರು 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಅಪರಾಧಿ ಎಂದು ಮುಂಬೈ ಸೆಷನ್ಸ್ ಕೋರ್ಟ್ ನಲ್ಲಿ ಘೋಷಣೆಯಾಗುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಎಷ್ಟು ವರ್ಷ ಶಿಕ್ಷೆ ಎಂಬ ಚರ್ಚೆ ಆರಂಭವಾಯಿತು. 'ಬೀಯಿಂಗ್ ಹ್ಯೂಮನ್' ಸಲ್ಮಾನ್ ಖಾನ್ ಪರ ವಿರೋಧ ಟ್ವೀಟ್ ಗಳ ರಾಶಿಯಲ್ಲಿ ಒಂದಷ್ಟು ಟ್ವೀಟ್ ಹೆಕ್ಕಿ ತೆಗೆದು ಇಲ್ಲಿ ನೀಡಲಾಗಿದೆ.

ಐಪಿಸಿ ಸೆಕ್ಷನ್ 304 II ಅಡಿಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದ ಕಾರಣ ಸಲ್ಮಾನ್ ಖಾನ್ ಅವರು 10 ವರ್ಷ ಶಿಕ್ಷೆ ಭೀತಿಯಲ್ಲಿದ್ದರು. ಅದರೆ, ಸಲ್ಮಾನ್ ಪರ ವಕೀಲ ಶ್ರೀಕಾಂತ್ ಶಿವಾಡೆ ಮಂಡಿಸಿದ ವಾದ ಅವರ ಶಿಕ್ಷೆ ಪ್ರಮಾಣ ತಗ್ಗಿ 5 ವರ್ಷಕ್ಕೆ ಇಳಿದಿದೆ.[ಗುದ್ದೋಡು ಕೇಸ್ ತೀರ್ಪು: ಸಲ್ಮಾನ್ ದೋಷಿ ]

ನಿರೀಕ್ಷೆಯಂತೆ ಬಾಲಿವುಡ್ ಮಂದಿ ಸಲ್ಮಾನ್ ಪರ ಟ್ವೀಟ್ ಮಾಡಿದರೆ, ಜನ ಸಾಮಾನ್ಯರು ಸಂತ್ರಸ್ತರಿಗೆ ಸರಿಯಾದ ನೆರವು ಸಿಕ್ಕಿದೆಯೇ ಎಂಬುದನ್ನು ಕೋರ್ಟ್ ಗಮನಹರಿಸಿದರೆ ಪ್ರಕರಣದ ತೀರ್ಪಿಗೂ ಬೆಲೆ ಬರುತ್ತದೆ ಎಂಬ ಟ್ವೀಟ್ ಮಾಡಿದ್ದಾರೆ. [ಸಲ್ಮಾನ್ ಖಾನ್ ಪ್ರಕರಣದ ತೀರ್ಪು ಅಪ್ಡೇಟ್ಸ್]

ಸಲ್ಮಾನ್ ಗೆ ಶಿಕ್ಷೆ ಬಗೆ ಬಗೆ ಟ್ವೀಟ್

ಸಲ್ಮಾನ್ ಗೆ ಶಿಕ್ಷೆ ಬಗೆ ಬಗೆ ಟ್ವೀಟ್

ಹಿಟ್ ಅಂಡ್ ರನ್ ಕೇಸಿನಲ್ಲಿ ಜೈಲಿಗೆ ತೆರಳುತ್ತಿರುವ ಸಲ್ಮಾನ್ ಖಾನ್ ಅವರು ಈಗ ಹೈಕೋರ್ಟ್ ನಲ್ಲಿ ಎರಡು ಅರ್ಜಿ ಸಲ್ಲಿಸಬೇಕಿದೆ. ಸೆಷನ್ಸ್ ಕೋರ್ಟ್ ಆದೇಶ ರದ್ದು ಹಾಗೂ ಜಾಮೀನು ನೀಡುವಂತೆ ಕೋರಬೇಕಿದೆ. ಸೆಷನ್ಸ್ ಕೋರ್ಟ್ ಆದೇಶ ಪ್ರತಿ ಸಂಜೆ ಸಿಗುವುದರಿಂದ ನಾಳೆ (ಮೇ.7) ಹೈಕೋರ್ಟ್ ನತ್ತ ಸಲ್ಮಾನ್ ಪರ ವಕೀಲ ಶ್ರೀಕಾಂತ್ ಶಿವಾಡೆ ತೆರಳಲಿದ್ದಾರೆ.

ಗಾಯಕ ಅಭಿಜಿತ್ ಟ್ವೀಟ್ ಗೆ ಪ್ರತಿಕ್ರಿಯೆ

ಫುಟ್ ಪಾತ್ ಮೇಲೆ ಮಲಗುವವರನ್ನು ನಾಯಿಗೆ ಹೋಲಿಸಿದ ಗಾಯಕ ಅಭಿಜಿತ್ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿರಣ್ ಬೇಡಿ ಟ್ವೀಟ್

ಕಿರಣ್ ಬೇಡಿ ಟ್ವೀಟ್ ಮಾಡಿ ಇಂಥ ಪ್ರಕರಣಗಳನ್ನು ವರ್ಷಾನುಗಟ್ಟಲೆ ಎಳೆದಾಡುವುದರಲ್ಲಿ ಅರ್ಥವಿಲ್ಲ. ಸರಿಯಾದ ನಿರ್ಣಯ ಸಿಗಬೇಕಾದರೆ ತ್ವರಿತವಾಗಿ ತೀರ್ಪು ಸಿಗುವ ವ್ಯವಸ್ಥೆಯಾಗಬೇಕು ಎಂದಿದ್ದಾರೆ.

ಪುರು ರಾಜ್ ಕುಮಾರ್ ಹೇಗೆ ಬಚಾವಾದ

ಪುರು ರಾಜ್ ಕುಮಾರ್(ಹಿಂದಿ ಮೇರುನಟ ರಾಜ್ ಕುಮಾರ್ ಪುತ್ರ) ಹೇಗೆ ಬಚಾವಾದ. ಇದೇ ರೀತಿ ಪ್ರಕರಣದಲ್ಲಿ 30 ಸಾವಿರ ರು ನೀಡಿ ಆರಾಮವಾಗಿ ಜೈಲುಶಿಕ್ಷೆ ತಪ್ಪಿಸಿಕೊಂಡ.

ಅರ್ನಾಬ್ ಗೋಸ್ವಾಮಿಗೆ ಅಪೀಲ್ ಮಾಡಿ

ಅರ್ನಾಬ್ ಗೋಸ್ವಾಮಿಗೆ ಅಪೀಲ್ ಮಾಡಿ ತಕ್ಷಣವೇ ಶಿಕ್ಷೆ ಪ್ರಮಾಣ ಕಡಿಮೆ ಮಾಡಿಸುತ್ತಾರೆ.

English summary
Ever since the Mumbai Sessions Court announced the verdict that Salman Khan will have to serve 5 years in jail in connection with 2002 Hit and Run case, Twitter has been flooded with various opinions on this important verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X