ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ನಾಪತ್ತೆಯಾಗಿದ್ದೇಕೆ? ಟ್ವಿಟ್ಟರಿನಲ್ಲಿ ರಹಸ್ಯ ಲೀಕ್

By Mahesh
|
Google Oneindia Kannada News

ಬೆಂಗಳೂರು, ಏ.16: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಗುಪ್ತವಾಗಿ ದೇಶದಿಂದ ಹೊರಕ್ಕೆ ಹಾರಿ, ಮತ್ತೆ ಮರಳಿರುವ ಸುದ್ದಿ ಈಗಾಗಲೇ ಎಲ್ಲೆಡೆ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಂತೂ #Rahulreturns ಫುಲ್ ಟ್ರೆಂಡಿಂಗ್ ನಲ್ಲಿದೆ. ಇಷ್ಟು ದಿವಸ ಎಲ್ಲಿ ಇದ್ದೆ? ಎಲ್ಲಿಂದ ಬಂದೆ? ಕೇಳ್ಬಹುದಾ? ಕೇಳ್ಬರ್ದಾ ಎಂದು ಅಣ್ತಮ್ಮ ಯಶ್ ಸ್ಟೈಲಿನಲ್ಲಿ ರಾಹುಲ್ ಮುಂದೆ ರಾಗವಾಗಿ ಹಾಡೋ ಧೈರ್ಯ ಯಾರೂ ಮಾಡಿಲ್ಲ.

ಫೆ.20ರಂದು ಪ್ರವಾಸಕ್ಕೆ ತೆರಳಿದ್ದ ರಾಹುಲ್ ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಮಾಹಿತಿಯನ್ನು ಕಾಂಗ್ರೆಸ್ ಗೌಪ್ಯವಾಗಿಟ್ಟಿದ್ದೇಕೆ? ಪ್ರವಾಸ ಸಂದರ್ಭದಲ್ಲಿ ರಾಹುಲ್ ಏನು ಕಲಿತರು? ಎಂಬೆಲ್ಲ ಪ್ರಶ್ನೆಗಳಿಗೆ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಥರಾವರಿ ಉತ್ತರಗಳು ಸಿಗುತ್ತವೆ.

ರಾಹುಲ್ ಅವರು ವಿಯೆಟ್ನಾಂ, ಮ್ಯಾನ್ಮಾರ್, ಥೈಲ್ಯಾಂಡ್, ಯುರೋಪ್, ಭೂತನ್, ಉತ್ತರಾಖಂಡ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿಹರಿಸುತ್ತಿದ್ದರು ಎಂಬ ಸುದ್ದಿ ಹಬ್ಬಿತ್ತು. ಇದೇ ನಿಜವಾದರೆ ಪ್ರವಾಸೋದ್ಯಮದ ಬಗ್ಗೆ ರಾಹುಲ್ ಬುಕ್ ಬರೆಯಬಹುದು.[ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ತೆ]

'ಯಾರಿಗೂ ತಿಳಿಯದಂತೆ ನಾಪತ್ತೆಯಾಗುವುದು ಹೇಗೆ?' ಎಂಬುದನ್ನು ರಾಹುಲ್ ಯಾವಾಗಾದರೂ ಬಹಿರಂಗ ಪಡಿಸುತ್ತಾರೆ ಎಂಬ ಆಶಯ ಎಲ್ಲರಲ್ಲೂ ಇದೆ. ಸದ್ಯಕ್ಕಂತೂ ರಾಹುಲ್ ನಾಪತ್ತೆಯಾಗಿದ್ದೇಕೆ ಎಂಬ ರಹಸ್ಯಕ್ಕೆ ಉತ್ತರ ಟ್ವಿಟ್ಟರ್ ನಲ್ಲಿ ಸಿಕ್ಕಿದೆ. ರಾಹುಲ್ ಪುನರ್ ಆಗಮನದ ಬಗ್ಗೆ ಬಂದಿರುವ ಆಯ್ದ ಫನ್ನಿ ಟ್ವೀಟ್ಸ್ ಗಳ ಸಂಗ್ರಹ ಮುಂದಿದೆ ತಪ್ಪದೇ ಓದಿ...

ಹೇಳದೇ ಕೇಳದೆ ನಾಪತ್ತೆಯಾಗಿದ್ದ ರಾಹುಲ್ ರಿಟರ್ನ್ಸ್

ಹೇಳದೇ ಕೇಳದೆ ನಾಪತ್ತೆಯಾಗಿದ್ದ ರಾಹುಲ್ ರಿಟರ್ನ್ಸ್

ಹೇಳದೇ ಕೇಳದೆ ನಾಪತ್ತೆಯಾಗಿದ್ದ ರಾಹುಲ್ ವಾಪಸ್ ಬಂದಿದ್ದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಹಜವಾಗಿ ಸಂತಸ ತಂದಿದೆ. ದೆಹಲಿಯ ಕಾಂಗ್ರೆಸ್ ಕಚೇರಿ, ನಂ.7, ಜನಪಥ್ ನಿವಾಸದ ಎದುರು ಪಟಾಕಿ ಸಿಡಿಸಿ, ಸಂಭ್ರಮದಿಂದ ಸಿಹಿ ಹಂಚಲಾಗಿದೆ.

ಚಹಾ ಮಾಡುವುದನ್ನು ಕಲಿತ ರಾಹುಲ್

ಚಹಾ ಮಾಡುವುದನ್ನು ಕಲಿಯಲು ರಾಹುಲ್ ಗಾಂಧಿ ಅವರು ಸುಮಾರು ಎರಡು ತಿಂಗಳುಗಳ ಕಾಲ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಮುಂದೆ ಒಂದು ದಿನ ಮೋದಿ ಅವರಂತೆ 'ಚಹಾವಾಲ ಬನ್ ಗಯಾ ಪ್ರಧಾನಿ' ಎನಿಸಿಕೊಳ್ಳಲು ರಾಹುಲ್ ಯತ್ನಿಸುತ್ತಿದ್ದಾರೆ

ಪೋಗೋ ಚಾನೆಲ್ ರಿಚಾರ್ಜ್ ಮಾಡಿಸಿದ ಸೋನಿಯಾ

ಮಗ ಮನೆಗೆ ವಾಪಸ್ ಬಂದ ಖುಷಿಯಲ್ಲಿ ಕಾರ್ಟೂನ್ ಚಾನೆಲ್ ಪೋಗೋ ರಿಚಾರ್ಜ್ ಮಾಡಿಸಿದ ಸೋನಿಯಾ Laughing

ಐಐಎನ್ ನಿಂದ ಪದವಿ ಪಡೆದುಕೊಂಡ ರಾಹುಲ್

ಐಐಎನ್ ನಿಂದ ರಾಜ್ಯಶಾಸ್ತ್ರ ಮಾಸ್ಟರ್ಸ್ ಪಡೆದುಕೊಳ್ಳಲು ರಾಹುಲ್ ಗಾಂಧಿ ನಾಪತ್ತೆಯಾಗಿದ್ದರಂತೆ.

ಮಣಿಶಂಕರ್ ಅಯ್ಯರ್ ಪರೋಡಿ ಅಕೌಂಟ್

ಮಣಿಶಂಕರ್ ಅಯ್ಯರ್ ಪರೋಡಿ ಅಕೌಂಟ್ ನಲ್ಲಿ ಕಂಡು ಬಂದ ಟ್ವೀಟ್

ಹೊಟ್ಟೆ ಉರಿಯುತ್ತೆ ಕಣ್ರಿ

ಹೊಟ್ಟೆ ಉರಿಯುತ್ತೆ ಕಣ್ರಿ ಈ ರೀತಿ ಯಾವ ಕಂಪನಿಯೂ ರಜೆ ನೀಡುವುದಿಲ್ಲ

ಇದೇನು ಪಾರ್ಟ್ ಟೈಂ ಕೆಲಸನಾ?

ರಾಜಕೀಯ ಎಂದರೆ ಏನು ಪಾರ್ಟ್ ಟೈಂ ಕೆಲಸನಾ? ರಾಹುಲ್ ಗಾಂಧಿಗೆ ಪ್ರಶ್ನೆ ಎಸೆದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ.

ಸತೀಶ್ ಆಚಾರ್ಯ ಅವರಿಂದ ಕಾರ್ಟೂನ್

ರಾಹುಲ್ ರಿಟರ್ನ್ಸ್ ಗಾಗಿ ಸತೀಶ್ ಆಚಾರ್ಯ ಅವರಿಂದ ಕಾರ್ಟೂನ್

ಲೇಖಕ ಚೇತನ್ ಭಗತ್ ಟ್ವೀಟ್

ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿ ರಾಹುಲ್ ಗಾಂಧಿ ಅವರು ತಮ್ಮ ಪಾದರಕ್ಷೆಗಳನ್ನು ಕಳಿಸಬಹುದಿತ್ತು.

ನಾನು ಮೂರು ದಿನ ರಜೆ ಕೇಳಿದ್ದೆ

ನಾನು ಮೂರು ದಿನ ರಜೆ ಕೇಳಿದ್ದೆ ಆದರೆ, ನನ್ನ ರಿಟರ್ನ್ ಟಿಕೆಟ್ ಕ್ಯಾನ್ಸಲ್ ಮಾಡಿದ್ದು ಯಾರು?

English summary
Congress vice-president Rahul Gandhi returned from his sabbatical on Thursday(Apr.16). Twitter was abuzz with reactions following the development
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X