ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಜೈಲಿನಲ್ಲಿ ಶಶಿಕಲಾರನ್ನು ಭೇಟಿ ಮಾಡಿದ ದಿನಕರನ್

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಟಿವಿವಿ ದಿನಕರನ್ ಅವರು ಭೇಟಿ ಮಾಡಿದರು.

By Mahesh
|
Google Oneindia Kannada News

ಬೆಂಗಳೂರು, ಜೂನ್ 05: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಎಐಎಡಿಎಂಕೆ ಮುಖಂಡ ಟಿವಿವಿ ದಿನಕರನ್ ಅವರು ಸೋಮವಾರ (ಜೂನ್ 05) ಭೇಟಿ ಮಾಡಿದ್ದಾರೆ.

ಎಐಎಡಿಎಂಕೆ ಪಕ್ಷಕ್ಕೆ ಎರಡು ಹಸಿರೆಲೆ ಇರುವ ಪಕ್ಷದ ಚಿಹ್ನೆಯನ್ನು ಪಡೆಯುವ ಡೀಲ್ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ದಿನಕರನ್ ಬಂದಿದ್ದಾರೆ. ದೆಹಲಿಯ ತಿಹಾರ್ ಜೈಲಿನಲ್ಲಿ ಎರಡು ತಿಂಗಳುಗಳ ಕಾಲ ನೆಲೆಸಿದ್ದ ದಿನಕರನ್ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.[ಶಶಿಕಲಾರನ್ನು ಜೈಲಿನಿಂದ ಹೊರತರಬಲ್ಲೆ : ಡೀಲರ್]

ಲಂಚ ಪ್ರಕರಣದ ಮತ್ತೊಬ್ಬ ಆರೋಪಿ ಸುಕೇಶ್ ಹಾಗೂ ದಿನಕರನ್ ಇಬ್ಬರನ್ನು ಕೂಡಾ ಮತ್ತೊಮ್ಮೆ ವಿಚಾರಣೆಗೊಳಪಡಿಸುವ ಸಾಧ್ಯತೆಯೂ ಇದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನಿಮ್ಮ ಸಂಬಂಧಿ ಶಶಿಕಲಾ ನಟರಾಜನ್ ರನ್ನು ಬಿಡಿಸುತ್ತೇನೆ ಎಂದು ಟಿವಿವಿ ದಿನಕರನ್ ಗೆ ಸುಕೇಶ್ ಆಶ್ವಾಸನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

TTV Dinakaran to meet VK Sasikala in Bengaluru

ಲಭ್ಯ ಮಾಹಿತಿಯಂತೆ ಟಿವಿವಿ ದಿನಕರನ್ ಹಾಗೂ ಅವರ ಪತ್ನಿ, ಸಂಬಂಧಿಕರು, 11 ಮಂದಿ ಶಾಸಕರು -ಇಂದುದೊರೈ, ಥಾನಾ ತಮಿಳು ಶೆಲ್ವನ್, ವೆಟ್ರಿವೇಲ್, ಪಾರ್ಥಿಬನ್, ಸುಬ್ರಮಣಿಯನ್, ಬಾಲಸುಬ್ರಮಣಿಯನ್, ತಂಗದೊರೈ, ಜಗ್ಗಯನ್, ಏಳುಮಲೈ, ಕದಿರ್ ಗಮು ಹಾಗು ಜಯಂತಿ ಎಲ್ಲರೂ ಪರಪ್ಪನ ಅಗ್ರಹಾರದಲ್ಲಿ ಕಾಣಿಸಿಕೊಂಡಿದ್ದಾರೆ.[ಚುನಾವಣಾ ಆಯೋಗಕ್ಕೆ ಲಂಚ: ಟಿಟಿವಿ ದಿನಕರನ್ ಗೆ ಜಾಮೀನು]


ಪಕ್ಷದ ಚಿಹ್ನೆ, ಅಧಿಕಾರ ಎಲ್ಲವನ್ನೂ ಕಳೆದುಕೊಂಡಿರುವ ದಿನಕರನ್ ತಮ್ಮ ಮುಂದಿನ ನಡೆ ಬಗ್ಗೆ ಶಶಿಕಲಾ ಅವರಲ್ಲಿ ಸಲಹೆ ಪಡೆದುಕೊಳ್ಳುತ್ತಿದ್ದಾರೆ.

English summary
The AIADMK leader TTV Dinakaran meets party general Secretary VK Sasikala on Monday(June 5).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X