ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು

By Mahesh
|
Google Oneindia Kannada News

ಬೆಂಗಳೂರು, ಏ.29: ಕರ್ನಾಟಕ ಬಂದ್ ನಂತರ ಈಗ ಸಾರಿಗೆ ಸಂಸ್ಥೆಗಳ ಬಂದ್ ಗೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಜನತೆ ಅರೆ ಮನಸ್ಸಿನಿಂದ ಸಜ್ಜಾಗುತ್ತಿದ್ದಾರೆ. ನಾಳೆ ರಜೆ ಸಿಕ್ಕರೆ ವೀಕೆಂಡ್ ಟ್ರಿಪ್ ಎಲ್ಲಿಗೆ ಹಾಕುವುದು? ಎಂಬ ಚಿಂತೆಯಲ್ಲಿ ಸಿಲಿಕಾನ್ ಸಿಟಿಯ ವೃತ್ತಿಪರರು ಕೀ ಬೋರ್ಡ್ ಕುಟ್ಟುತ್ತಿದ್ದಾರೆ. ನಾಳೆ ಟ್ಯಾಕ್ಸಿ ಇರುತ್ತಾ ಸಾರ್ ಎಂದು ಬೆಳಗ್ಗಿನಿಂದ ನಮ್ಮ ಕಚೇರಿಗೆ ಕರೆಗಳು ಬರುತ್ತಲೇ ಇವೆ. ನಾಳಿನ ನಿಮ್ಮ ಪ್ರಯಾಣದ ಮಾರ್ಗದರ್ಶಿ ಇಲ್ಲಿದೆ

ಈಗಾಗಲೇ ನಮ್ಮ ಓದುಗರಿಗೆ ತಿಳಿದಿರುವಂತೆ 'ರಸ್ತೆ ಸಾರಿಗೆ ಮತ್ತು ಸಂರಕ್ಷಣಾ ಮಸೂದೆ-2015' ವಿರೋಧಿಸಿ ಸಾರಿಗೆ ಮುಷ್ಕರ ಏ.30ರಂದು ಕರೆಯಲಾಗಿದೆ. ಕೆಎಸ್ಸಾರ್ಟಿಸಿ ಸೇರಿದಂತೆ ದೇಶದ ಅನೇಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿವೆ. [ಮುಷ್ಕರ: ಆಟೋ ಚಾಲಕರು ಹೇಳುವುದೇನು?]

ನೇಪಾಳದ ಭೂಕಂಪದ ನಂತರ ಬಿಹಾರದಲ್ಲೂ ಕಂಪನ ಉಂಟಾದ ಹಿನ್ನೆಲೆಯಲ್ಲಿ ನಾಳೆ ಮುಷ್ಕರ ಹಿಂಪಡೆಯಲಾಗಿದೆ. ಅದರೆ, ಉಳಿದೆಡೆ ಖಾಸಗಿ ವಾಹನಗಳತ್ತ ಮುಖ ಮಾಡುವುದು ಅನಿವಾರ್ಯ. ['KSRTC' ಇನ್ಮುಂದೆ ಕರ್ನಾಟಕದ್ದೇ ಸ್ವತ್ತು!]

Commuters beware, plan your transport for April 30

ಮುಷ್ಕರ ಏಕೆ: ಚಾಲಕರಿಗೆ (ಸರ್ಕಾರಿ ಬಸ್ ಚಾಲಕರೂ ಸೇರಿ) ವಿಪರೀತ ದಂಡ ವಿಧಿಸಲಾಗುತ್ತಿದೆ ಎಂಬ ಆರೋಪವಿದೆ. ಆರ್ ಟಿಸಿ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿಯನ್ನು ಸಂಘಟನೆಗಳು ಸಂಪೂರ್ಣ ವಿರೋಧಿಸುತ್ತಿವೆ. [ಏ. 30ರ ಸಾರಿಗೆ ಮುಷ್ಕರ ಯಾಕೆ? ಏನು?]

ಸಾರಿಗೆ ಸಂಸ್ಥೆಗಳ ಖಾಸಗೀಕರಣ, ವ್ಯಾಪರೀಕರಣ, ವಿದೇಶಿಕರಣ ಹೀಗೆ ನಾನಾ ಕಾರಣಗಳಿವೆ. ಇದು ಜನ ಸಾಮಾನ್ಯರಿಗೆ ಬೇಡದ ವಿಷಯ. ನಾಳೆ ಟ್ಯಾಕ್ಸಿ, ಕ್ಯಾಬ್, ಆಟೋ ಇರುತ್ತಾ? ನಾವು ಆಫೀಸ್ ಗೆ ಹೋಗಬಹುದಾ? ಎಂಬ ಪ್ರಶ್ನೆಗೆ ಉತ್ತರ ಮುಂದಿದೆ.

ಈ ಕೆಳಗಿನ ಆಟೋರಿಕ್ಷಾ ಸಂಘಟನೆ, ಕ್ಯಾಬ್ ಸೇವೆ ನಾಳೆ ಇರುತ್ತದೆ:
* ಆದರ್ಶ ಆಟೋಯೂನಿಯನ್ ಗೆ ಸೇರಿದ ಎಲ್ಲಾ ಆಟೋರಿಕ್ಷಾಗಳು ಎಂದಿನಂತೆ ಸಂಚರಿಸಲಿವೆ: ಅಧ್ಯಕ್ಷ ಮಂಜುನಾಥ್

* ಟೂರಿಸ್ಟ್ ಹಾಗೂ ಟ್ಯಾಕ್ಸಿ ಸರ್ವೀಸ್, ಕರ್ನಾಟಕಕ್ಕೆ ಸೇರಿದ ಎಲ್ಲಾ ಟ್ಯಾಕ್ಸಿಗಳು ಲಭ್ಯವಿರುತ್ತವೆ: ಆರ್ ಕೆ ಹೊಳ್ಳ, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಆಪರೇಟರ್ಸ್ ಯೂನಿಯನ್. [ಸಾರಿಗೆ ಮುಷ್ಕರಕ್ಕೆ ಆಟೋ ಚಾಲಕರ ಬೆಂಬಲ]

* ಬಿಎಂಟಿಸಿ ಬಸ್ ಎಂದಿನಂತೆ ಸಂಚರಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು: ಏಕರೂಪ್ ಕೌರ್, ಬಿಎಂಟಿಸಿ ಎಂಡಿ.

* ಗುರುವಾರ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರದ ಬಗ್ಗೆ ನಿರ್ಧಾರ: ಎಂಡಿ ಆರ್ ಕಠಾರಿಯಾ ಹೇಳಿಕೆ.

ಎಂದಿನಂತೆ ನೆಚ್ಚಿನ ರೇಡಿಯೋ ಟ್ಯಾಕ್ಸಿ ಸರ್ವೀಸ್
* ಟ್ಯಾಕ್ಸಿ ಫಾರ್ ಶ್ಯೂರ್: 080-6060 1010
* ಮೇರು ಕ್ಯಾಬ್: 44 22 44 22
* ಸ್ಟಾರ್ ಸಿಟಿ ಟ್ಯಾಕ್ಸಿ: 080 6555 5559
* ಓಲಾ ಕ್ಯಾಬ್: 080 3355 3355.
* ಈಸಿ ಕ್ಯಾಬ್ಸ್: 080 43 43 43 43
* ಮೆಗಾ ಕ್ಯಾಬ್ಸ್ ಲಿ: 080-47 47 47 47
* ಕೆಎಸ್ ಟಿಡಿಸಿ ಕ್ಯಾಬ್ : 080-44 66 44 66/ 94480 52324
* ಫ್ರೆಂಡ್ಸ್ ಸಿಟಿ ಟ್ಯಾಕ್ಸಿ: 80-2550 9999, +(91)-98864 90020.
* ಹೆಚ್ಚಿನ ಮಾಹಿತಿಗೆ ಜಸ್ಟ್ ಡಯಲ್ ವೆಬ್ ಪುಟಕ್ಕೆ ಭೇಟಿ ಕೊಡಿ

English summary
Transpost Strike: Commuters beware, plan your transport for April 29. People who will be travelling in and outside the city and are depending on the taxi services would be advised to call the taxi services in advance to confirm their ride. Here are the list of taxi, Autorickshaw service providers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X