ಬೆಂಗಳೂರಿನ 12 ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ?

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 06 : ಬೆಂಗಳೂರು ನಗರದ 12 ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ. ನೋ ಪಾರ್ಕಿಂಗ್ ಆದೇಶ ಜಾರಿಗೊಳಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ 12 ರಸ್ತೆಗಳನ್ನು ಸಂಚಾರಿ ಪೊಲೀಸರು ಪಟ್ಟಿ ಮಾಡಿದ್ದಾರೆ. ಈ ರಸ್ತೆಗಳಲ್ಲಿ ನೋ ಪಾರ್ಕಿಂಗ್ ಆದೇಶ ಜಾರಿಗೊಳಿಸಲು ಒಪ್ಪಿಗೆ ನೀಡಿ ಎಂದು ಸರ್ಕಾರ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರಿಗೆ ಮನವಿ ಮಾಡಲಾಗಿದೆ.[ಡಿಸೈನ್ ನಂಬರ್ ಪ್ಲೇಟ್ ಇಟ್ಟುಕೊಂಡ್ರೆ ದಂಡ ಗ್ಯಾರಂಟಿ!]

Traffic police propose to ban parking in 12 roads

12 ಪ್ರಮುಖ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್‌ನಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಲ್ಲದೇ ವಾಹನಗಳನ್ನು ನಿಲ್ಲಿಸುವಾಗ ಮತ್ತು ತೆಗೆಯುವಾಗ ಅಪಘಾತಗಳಾಗುತ್ತಿವೆ ಎಂದು ಪೊಲೀಸರು ತಮ್ಮ ಪಸ್ತಾವನೆಯಲ್ಲಿ ತಿಳಿಸಿದ್ದಾರೆ.[ಎಚ್ಚರ ! ಬಲಿಗಾಗಿ ಕಾದಿವೆ, ಬೆಂಗ್ಳೂರ್ ರಸ್ತೆಗುಂಡಿಗಳು]

ಯಾವ ರಸ್ತೆಗಳು? : ರಮಣ ಮಹರ್ಷಿ ರಸ್ತೆ, ಹಡ್ಸನ್ ವೃತ್ತ, ಬಿಟಿಎಂ ಹೊರವರ್ತುಲ ರಸ್ತೆ, ಬನ್ನೇರುಘಟ್ಟ ರಸ್ತೆ, ಮಹದೇವಪುರ ರಸ್ತೆ, ಹಳೇ ಮದ್ರಾಸ್ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ವೈಟ್‌ಪೀಲ್ಡ್‌ ರಸ್ತೆ, ಬಿಇಎಲ್ ವೃತ್ತ-ಎಫ್‌ಟಿಐ ವೃತ್ತ, ಮಹದೇವಪುರ-ಇಬ್ಬರಲೂರು ಜಂಕ್ಷನ್, ಸಿಟಿಮಾರ್ಕೆಟ್-ಕೆಂಗೇರಿ, ವೆಲ್ಲಾರ ಜಂಕ್ಷನ್-ವೀರಸಂದ್ರ ಜಂಕ್ಷನ್, ಹೊಸೂರು ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗುತ್ತದೆ.

ಈ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲು ಅನುಮತಿ ನೀಡಬೇಕು ಎಂದು ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಚಾರಿ ಪೊಲೀಸರು ಪತ್ರ ಬರೆದಿದ್ದಾರೆ. ಬಿಬಿಎಂಪಿ, ನಗರ ಭೂ ಸಾರಿಗೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆಗಳು ನೋ ಪಾರ್ಕಿಂಗ್ ಜಾರಿಗೆ ಒಪ್ಪಿಗೆ ನೀಡಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru traffic police finalized a list of 12 roads for the no parking rule. The police have submitted proposal to Karnataka chief secretary Arvind Jadhav.
Please Wait while comments are loading...