ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆ ಮೈದಾನದಲ್ಲಿ ನಾಳೆ(ಫೆ.10) ಜೆಡಿಎಸ್ ಮಹತ್ವದ ಸಮಾವೇಶ

By Ananthanag
|
Google Oneindia Kannada News

ಬೆಂಗಳೂರು, ಫೆಬ್ರವರಿ 9: ಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ನಾಳೆ(ಫೆ.10) ಜೆಡಿಎಸ್ ಮಹತ್ವದ ಸಮಾವೇಶವನ್ನು ಅರಮನೆ ಮೈದಾನದಲ್ಲಿ ಆಯೋಜಿಸಿದೆ.

ಅರಮನೆ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾವೇಶ ಪ್ರಾರಂವಾಗಲಿದ್ದು ಜೆಡಿಎಸ್ ರಾಷ್ಟ್ರಿಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪಕ್ಷದ ರಾಜ್ಯಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶವನ್ನು ಚುನಾವಣಾ ಪೂರ್ವ ಸಿದ್ದತೆಗಾಗಿಯೇ ನಡೆಸುತ್ತಿರುವ ಜೆಡಿಎಸ್ ಸಭೆ ಎಂದು ಬಿಂಬಿತವಾಗುತ್ತಿದೆ.[ಜೆಡಿಎಸ್ ಸಮಾವೇಶ, ಜಮೀರ್ ಫೋಟೋ ನಾಪತ್ತೆ!]

Tomorrow (Feb 10) JDS Important meeting in palace ground, bengaluru.

ಜನಬಲ ಮತ್ತು ಹಣ ಬಲ ಇರುವ ಗಟ್ಟಿ ಅಭ್ಯರ್ಥಿಗಳಿಗೆ ಈ ಸಮಾವೇಶ ಮುಖ್ಯ ಭೂಮಿಕೆಯಾಗಿದ್ದು, ಗ್ರಾಮಪಂಚಾಯಿತಿಯಿಂದ ಜಿಲ್ಲಾ, ತಾಲ್ಲೂಕು ಪಂಚಾಯಿತಿ, ನಗರಸಭೆ, ಪುರಸಭೆ ಎಲ್ಲ ಚುನಾಯಿತ ಪ್ರತಿನಿಧಿಗಳು ಪಕ್ಷದ ಪದಾಧಿಕಾರಿಗಳು, ಶಾಸಕರು, ಸಂಸದರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಬೇಕೆಂದಿರುವ ಜೆಡಿಎಸ್ ನಾಳೆ(ಫೆ.10) ಪಕ್ಷದ ನಿಷ್ಠ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಿದೆ. ಮುಂದಿನ ಹೋರಾಟಕ್ಕೂ ಸಜ್ಜಾಗಲು ತಯಾರಿ ನಡೆಸಲಿದೆ. ರಾಜ್ಯಾದ್ಯಂತ ಪಕ್ಷದ ಸಂಘಟನೆಗಾಗಿ ಚುನಾವನೆಗೆ ಕಾರ್ಯಕರ್ತರನ್ನು ಒಗ್ಗೂಡಿಸುವ ಉದ್ದೇಶದಿಂದ ರಾಜ್ಯ ಪ್ರವಾಸದ ಬಗ್ಗೆಯೂ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

English summary
Coming up - 10th Feb, Friday 11 AM : Karnataka JDS mammoth rally in Palace Grounds Bengaluru. A run up to the State Assembly Elections 2018.All Party leaders, all Party workers, all ticket aspirants expected to take part in the Convention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X