ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊರದೇಶದ ವಿದ್ಯಾರ್ಥಿಗಳು ಹಣ ಉಳಿಸಲು ಏನು ಮಾಡಬೇಕು?

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್. 03 : ವಿದ್ಯಾರ್ಥಿಗಳು ಜೀವನದಲ್ಲಿ ತಮ್ಮದೇ ಆದ ಗುರಿಗಳೊಂದಿಗೆ ಸಾಗುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಹೊರದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಪಡೆಯುವ ಹಂಬಲ ಕೆಲವರಿಗೆ ಗಾಢವಾಗಿ ಬೇರೂರಿರುತ್ತದೆ. ಆಗ ಅವರ ಮುಂದೆ ಮೊದಲು ಎದುರಾಗುವುದು ಹೊಳೆಯಂತೆ ಖರ್ಚಾಗುವ ಹಣವನ್ನು ಹೇಗೆ ಉಳಿಸುವುದು?

ಉಳಿತಾಯವೇ ಸರ್ವ ಸಮಸ್ಯೆಗಳಿಗೆ ಮದ್ದು, ಖರ್ಚು-ವೆಚ್ಚ ಸಮತೋಲವಾದಲ್ಲಿ ಉಳಿತಾಯವೂ ಸುಲಭವಾಗಿರುತ್ತದೆ. ಆಗ ಯಾವ ಲೋನ್ ಗೂ ಮೊರೆಹೋಗದೆ, ತಂದೆ-ತಾಯಿಯರಿಗೂ ಹೊರೆಯಾಗದೆ ಸುಲಲಿತವಾಗಿ ಹೊರದೇಶದಲ್ಲಿ ವಿದ್ಯಾಭ್ಯಾಸ ಕೈಗೊಳ್ಳಬಹುದು.[ಶಿಕ್ಷಕರು ಆಧಾರ್ ಕಾರ್ಡ್ ನಂಬರ್ ನೀಡುವುದು ಕಡ್ಡಾಯ]

Tips To Save Money While Studying Abroad

ಹಣ ಉಳಿತಾಯ ಮಾಡುವ ಸರಳ ಸೂತ್ರಗಳು :

* ಮೊದಲು ಅನಾವಶ್ಯಕ ಶಾಂಪಿಂಗ್ ಗಳನ್ನು ಕಡಿಮೆ ಮಾಡಬೇಕು.

* ಯಾರಿಗಾದರೂ, ಯಾವುದಾದರೂ ಬಿಲ್ ಪಾವತಿ ಮಾಡಬೇಕೆಂದಿದ್ದಲ್ಲಿ ಸರಿಯಾದ ಸಮಯಕ್ಕೆ ಹಣವನ್ನು ಪಾವತಿಸಿ,

* ಇಬ್ಬರು ಅಥವಾ ಮೂವರು ಸೇರಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಿ. ಆಗ ಮನೆ ಬಾಡಿಗೆ ಸೇರಿದಂತೆ ಎಲ್ಲವೂ ಶೇರ್ ಆಗುವುದರಿಂದ ಖರ್ಚು ಸ್ವಲ್ಪ ಮಟ್ಟಿಗೆ ತಗ್ಗುವುದು.

* ನಿಮ್ಮ ಮೊಬೈಲ್ ಗಳಿಗೆ ಹಣವನ್ನು ಹೆಚ್ಚು ವ್ಯಯಿಸದೆ ಫ್ರೀ ಎಸ್‌ಎಮ್‌ಎಸ್, ಅನ್‌ಲಿಮಿಟೆಡ್ ಕರೆಗಳ ಮೊರೆ ಹೋದರೆ ಒಳ್ಳೆಯದು.

* ಸಾಮಾನ್ಯವಾಗಿ ವಿದ್ಯಾರ್ಥಿಗಳಿಗಾಗಿ ಹಲವಾರು ಡಿಸ್ಕೌಂಟ್ ಗಳು ಇದ್ದೇ ಇರುತ್ತದೆ. ಇವುಗಳ ಮೂಲಕ ನಿಮಗೆ ಬೇಕಾದ ವಸ್ತುಗಳನ್ನು ಕೊಂಡು ಹಣ ಉಳಿತಾಯ ಮಾಡಬಹುದು.

* ದೇಹ ಕಟ್ಟು ಮಸ್ತಾಗಿ, ಸ್ಲಿಮ್ ಇರಬೇಕು ಎಂದಾದಲ್ಲಿ ನಿಮ್ಮ ಕಾಲೇಜಿನಲ್ಲಿರುವ ಜಿಮ್ ತರಗತಿಗಳಿಗೆ ತೆರಳಿ, ಬೇರೆ ಸಂಸ್ಥೆಗಳು ನಡೆಸುವ ಜಿಮ್ ತರಗತಿಗಳಿಗೆ ಸೇರಿಕೊಂಡು ಹಣ ಖರ್ಚು ಮಾಡಿಕೊಳ್ಳಬೇಡಿ.

* ಪುಸ್ತಕಗಳನ್ನು ಕಾಲೇಜು ಗ್ರಂಥಾಲಯದಿಂದ ಪಡೆದುಕೊಳ್ಳಿ. ಅನಾವಶ್ಯಕವಾಗಿ ಪುಸ್ತಕಗಳನ್ನು ಕೊಂಡುಕೊಳ್ಳಬೇಡಿ.

* ಫ್ರೀ ಇರುವ ಅವಧಿಯಲ್ಲಿ ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಣ್ಣ ವೃತ್ತಿಯನ್ನು ಕೈಗೊಂಡು ನಿಮ್ಮ ಹಣವನ್ನು ನೀವು ಸಂಪಾದಿಸಿಕೊಳ್ಳಿ.

* ಬ್ಯಾಂಕಿನಲ್ಲಿ ನಿಮ್ಮ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆಗೆದು, ಅದರಲ್ಲಿ ಹಣವನ್ನು ಉಳಿಸುತ್ತಾ ಬನ್ನಿ. ವರ್ಷದ ಕೊನೆಯಲ್ಲಿ ಸಾಕಷ್ಟು ಹಣ ನಿಮ್ಮ ಕೈ ಸೇರುತ್ತದೆ.

* ನಿಮ್ಮ ವಿದ್ಯಾಭ್ಯಾಸದ ಹೊರತಾಗಿ ಅನಾವಶ್ಯಕವಾಗಿ ಬ್ಯಾಂಕಿನಲ್ಲಿ ಲೋನ್ ಪಡೆಯಬೇಡಿ.

English summary
Most college students live on a budget. Without a limited budget, as students you are likely to get yourself into a cycle of debt.Here are a few tips on money-saving for international students, during your stay overseas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X