ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಸಿಎಸ್ಇ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 200 ತಪ್ಪುಗಳು!

ಮಾರ್ಚ್ 23 ರಂದು ನಡೆದ ಐಸಿಎಸ್ಇ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಕನಿಷ್ಠವೆಂದರೂ 200 ತಪ್ಪುಗಳು ಕಾಣಿಸಿಕೊಂಡು ಪರೀಕ್ಷಾ ಮಂಡಳಿಯ ವಿಶ್ವಾಸಾರ್ಹತೆಯ ಬಗ್ಗೆಯೇ ಸಂಶಯ ಹುಟ್ಟುವಂತಾಯಿತು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 25: ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಅವಾಂತರದಿಂದ ಪರದಾಡುವ ಸನ್ನಿವೇಶ ಈಗಲೂ ಕಡಿಮೆಯಾಗಿಲ್ಲ. ಮಾರ್ಚ್ 23 ರಂದು ನಡೆದ ಐಸಿಎಸ್ಇ (ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್) ಪಠ್ಯಕ್ರಮದ 10 ನೇ ತರಗತಿಯ ದ್ವಿತಿಯ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆ ನೋಡುತ್ತಿದ್ದ ವಿದ್ಯಾರ್ಥಿಗಳು ಕ್ಷಣಕಾಲ ಇದು ತಮ್ಮದೇ ಪ್ರಶ್ನೆ ಪತ್ರಿಕೆಯಾ ಎಂದು ಕ್ಷಣಕಾಲ ಗಾಬರಿ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಏರ್ಪಟ್ಟಿತ್ತು.

ಪ್ರಶ್ನೆಪತ್ರಿಕೆಯಲ್ಲಿ ಕನಿಷ್ಠವೆಂದರೂ 200 ತಪ್ಪುಗಳು ಕಾಣಿಸಿಕೊಂಡು ಪರೀಕ್ಷಾ ಮಂಡಳಿಯ ವಿಶ್ವಾಸಾರ್ಹತೆಯ ಬಗ್ಗೆಯೇ ಸಂಶಯ ಹುಟ್ಟುವಂತಾಯಿತು. ಕನ್ನಡ ವಿಷಯಕ್ಕೆ ಯಾರೂ 75 (100) ಕ್ಕಿಂತ ಹೆಚ್ಚು ಅಂಕ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಪ್ರಶ್ನೆ ಪತ್ರಿಕೆಯೇ ತಪ್ಪಾಗಿರುವಾಗ ಉತ್ತರ ಬರೆಯುವುದು ಹೇಗೆ ಅನ್ನೋದು ವಿದ್ಯಾರ್ಥಿಗಳ ಪ್ರಶ್ನೆ.[ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರಿಗೆ ಜೈಲು ಶಿಕ್ಷೆ!]

There are more than 200 mistakes in ICSE question paper

ಪ್ರಶ್ನೆಪತ್ರಿಕೆಯ 11 ನೇ ಪುಟದಲ್ಲಂತೂ ಕೆಲವು ಪದಗಳೇ ಬಿಟ್ಟುಹೋಗಿದ್ದು, ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೇ ಅರ್ಧ ಗಂಟೆ ಹಿಡಿಯುವಂತಾಯಿತು.[ಪರೀಕ್ಷೆಗೆ ತೆರಳುವ ಮುನ್ನ ಈ 15 ಅಂಶಗಳನ್ನು ಮರೆಯದಿರಿ]

ಈ ಬಗ್ಗೆ ಮಾತನಾಡಿದ ಸಾಹಿತಿ ಮತ್ತು ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ, ಇದು ನಿಜಕ್ಕೂ ಪರೀಕ್ಷಾ ಮಂಡಳಿಯ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿ. ಈ ಬಗ್ಗೆ ನಾವು ಹೆಚ್ಚಿನ ಮಾಹಿತಿ ಕಲೆಹಾಕಿ, ಮುಂದಿನ ಕ್ರಮಕೈಗೊಳ್ಳುತ್ತೇವೆ' ಎಂದಿದ್ದಾರೆ.

ಕನ್ನಡ ಮಾತೃಭಾಷೆಯಾಗಿರುವ ಕರ್ನಾಟಕದಲ್ಲೇ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಅಸಂಖ್ಯ ತಪ್ಪುಗಳು ಕಾಣಿಸಿಕೊಂಡು, ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷಾ ಮಂಡಳಿಗೆ ಹಿಡಿಶಾಪ ಹಾಕುವಂತಾಗಿದ್ದು ನಿಜಕ್ಕೂ ಶೋಚನೀಯ ಸಂಗತಿ.[1203 ಸರ್ಕಾರಿ ಪಿಯು ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಮಾರ್ಚ್ 10 ರಿಂದ ಆರಂಭವಾಗಿರುವ ಐಸಿಎಸ್ಇ ಪರೀಕ್ಷೆ 80 ಅಂಕದ್ದಾಗಿದ್ದು, ಈ ವರ್ಷ 1.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಏಪ್ರಿಲ್ 21 ರವರೆಗೂ ನಡೆಯಲಿರುವ ಈ ಪರೀಕ್ಷೆಯಲ್ಲಿ, ಮಾರ್ಚ್ 23 ರಂದು ಅಸ್ಸಾಮಿ, ಗುಜರಾತಿ, ಬಂಗಾಳಿ ಸೇರಿದಂತೆ ದ್ವಿತೀಯ ಭಾಷೆಯ ಪರೀಕ್ಷೆಗಳು ನಡೆದಿದ್ದವು.

English summary
There are more than 200 mistakes in ICSE Kannada question paper, creates tension among the students. The ICSE (Indian Certificate of Secondary Education) examinations have started from March 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X