ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಅತೀದೊಡ್ಡ ಮೆಟ್ರೋ ನಿಲ್ದಾಣ, ನಮ್ಮ ಕೆಂಪೇಗೌಡ ಮೆಟ್ರೋ ನಿಲ್ದಾಣ!

|
Google Oneindia Kannada News

ಬೆಂಗಳೂರು, ಜೂನ್ 15: ಬೆಂಗಳೂರಿನ ಲಕ್ಷಾಂತರ ಜನರು ಯಾವುದೋ ಮಹತ್ವದ ಹಬ್ಬವನ್ನು ಎದುರು ನೋಡುತ್ತಿರುವಷ್ಟು ಸಂಭ್ರಮದಲ್ಲಿದ್ದಾರೆ! ಈ ಸಂಭ್ರಮಕ್ಕೆ ಕಾರಣ, ಜೂನ್ 17 ರಂದು ಉದ್ಘಾಟನೆಗೊಂಡು ಜೂನ್ 18 ರಂದು ಸಾರ್ವಜನಿಕ ಸಂಚಾರಕ್ಕೆ ಲಭ್ಯವಾಗಲಿರುವ 'ನಮ್ಮ ಮೆಟ್ರೋ'!

ಪೂರ್ವ-ಪಶ್ಚಿಮ ಅಂದರೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ (ಪರ್ಪಲ್ ಲೈನ್)ಮತ್ತು ಉತ್ತರ-ದಕ್ಷಿಣ ಅಂದರೆ ನಾಗಸಂದ್ರದಿಂದ ಯಲಚೇನಹಳ್ಳಿ (ಗ್ರೀನ್ ಲೈಲ್)ವರೆಗಿನ ನಮ್ಮ ಮೆಟ್ರೋ ಮೊದಲ ಹಂತ ಸಂಪೂರ್ಣ ಮುಕ್ತಾಯಗೊಂಡಿದ್ದು ಪ್ರತಿದಿನ ಸುಮಾರು ಐದು ಲಕ್ಷ ಜನರು ಉಭಯ ಮಾರ್ಗಗಳ ಉಪಯೋಗ ಪಡೆಯಲಿದ್ದಾರೆಂದು ಅಂದಾಜಿಸಲಾಗಿದೆ.

ಕೊಚ್ಚಿ ಮೆಟ್ರೋ V/s ನಮ್ಮ ಮೆಟ್ರೋ: ಒಂದು ಹೋಲಿಕೆಕೊಚ್ಚಿ ಮೆಟ್ರೋ V/s ನಮ್ಮ ಮೆಟ್ರೋ: ಒಂದು ಹೋಲಿಕೆ

ಗ್ರೀನ್ ಲೈನ್ ನಿಂದ ಪರ್ಪಲ್ ಲೈನ್ ಗೆ ಇಂಟರ್ ಚೇಂಜ್ ಮಾಡಿಕೊಳ್ಳಬೇಕಾದವರು ಮೆಜೆಸ್ಟಿಕ್ ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಮಾರ್ಗ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಭಾರತದಲ್ಲೇ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ.

ಭಾರತದ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣ

ಭಾರತದ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣ

ಮೆಜೆಸ್ಟಿಕ್ ನ ಕೆಂಪೇಗೌಡ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ ಭಾರತದಲ್ಲೇ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಉದ್ಯಾನ ನಗರಿಯ ಹಿರಿಮೆಗೆ ಇನ್ನೊಂದು ಗರಿ ಮೂಡಿಸಿದೆ.

ಒಂದು ಲಕ್ಷ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ

ಒಂದು ಲಕ್ಷ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ

ನಮ್ಮ ಮೆಟ್ರೊ ಇಂಟರ್ ಚೇಂಜ್ ನಿಲ್ದಾಣ ಏಕಕಾಲದಲ್ಲಿ ಒಂದು ಲಕ್ಷ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಹೊಂದಿದೆ!

ಬೆಂಗಳೂರು ಮೆಟ್ರೋ ರೈಲು ಎಂಬ ಅದ್ಭುತ ಜಗತ್ತು, ಅಪರಿಚಿತ ಮುಖಗಳು....ಬೆಂಗಳೂರು ಮೆಟ್ರೋ ರೈಲು ಎಂಬ ಅದ್ಭುತ ಜಗತ್ತು, ಅಪರಿಚಿತ ಮುಖಗಳು....

ಬಸ್ ನಿಲ್ದಾಣದಿಂದ 500 ಮೀ. ದೂರ

ಬಸ್ ನಿಲ್ದಾಣದಿಂದ 500 ಮೀ. ದೂರ

ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್)ದಿಂದ ಕೇವಲ 500 ಮೀ. ದೂರದಲ್ಲಿ ಮೆಟ್ರೊ ನಿಲ್ದಾಣವಿದೆ. 12 ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದ್ದು ಜನಜಂಗುಳಿಯನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ. ಇದರೊಟ್ಟಿಗೆ 24 ಎಸ್ಕಲೇಟರ್ ಮತ್ತು 4 ಲಿಫ್ಟ್ ಸಹ ಅಳವಡಿಸಲಾಗಿದೆ. ತುರ್ತು ನಿರ್ಗಮನ ಮತ್ತು ಅಗ್ನಿಶಾಮಕ ಬಳಕೆಗೆ 18 ಕಡೆ ಮೆಟ್ಟಿಲು ನಿರ್ಮಿಸಲಾಗಿದೆ.

ಇಂಟರ್ ಚೇಂಜ್ ಮಾಡುವವರಿಗೆ ಪ್ರತ್ಯೇಕ ಟೋಕನ್ ಬೇಕೆ?

ಇಂಟರ್ ಚೇಂಜ್ ಮಾಡುವವರಿಗೆ ಪ್ರತ್ಯೇಕ ಟೋಕನ್ ಬೇಕೆ?

ಪರ್ಪಲ್ ಲೈನ್ ನಿಂದ ಗ್ರೀನ್ ಲೈನ್ ಅಥವಾ ಗ್ರೀನ್ ಲೈನ್ ನಿಂದ ಪರ್ಪಲ್ ಲೈನ್ ಗೆ ಇಂಟರ್ ಚೇಂಜ್ ಮಾಡಿಕೊಳ್ಳುವವರು ಪ್ರತ್ಯೇಕ ಟೋಕನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಮ್ಮೆ ಟೋಕನ್ ತೆಗೆದುಕೊಂಡರೆ ಕೊನೆಯ ನಿಲ್ದಾಣದಲ್ಲಿ ಇಳಿಯುವವರೆಗೂ ಮತ್ತೆ ಟೋಕನ್ ಕೊಳ್ಳುವ ಅಗತ್ಯವಿಲ್ಲ. ಆದರೆ ಟಿಕೇಟ್ ಗೆ ಎರಡು ಗಂಟೆ ಮಾತ್ರವೇ ವ್ಯಾಲಿಡಿಟಿ ಇರುತ್ತದೆ.

ನಮ್ಮ ಮೆಟ್ರೋ ಟಿಕೆಟ್, ಸ್ಮಾರ್ಟ್ ಕಾರ್ಡ್ ಬಗ್ಗೆ ಉಪಯುಕ್ತ ಮಾಹಿತಿನಮ್ಮ ಮೆಟ್ರೋ ಟಿಕೆಟ್, ಸ್ಮಾರ್ಟ್ ಕಾರ್ಡ್ ಬಗ್ಗೆ ಉಪಯುಕ್ತ ಮಾಹಿತಿ

English summary
Bengaluru people are eagerly waiting for Namma metro green line, which will be inaugurated on June 17th. The happiest thing is that, Namma metro Kempegowda (majestic) stop is the largest metro station in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X