ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾಕ್ಟರೇಟ್ ಪ್ರದಾನಕ್ಕೆ ಹೊಸ ಮಾನದಂಡ ಸೂಚಿಸಿದ ರಾಜ್ಯಪಾಲರು

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್,09: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡುವ ಗೌರವ ಡಾಕ್ಟರೇಟ್ ಪ್ರದಾನ ಮಾನದಂಡಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕಾಗಿ ಮಾನದಂಡ ಬದಲಾವಣೆ ಮಾಡಿ ಪರಿಷ್ಕೃತ ಆದೇಶ ಜಾರಿ ಮಾಡಿದ್ದಾರೆ.

ಗೌರವ ಡಾಕ್ಟರೇಟ್ ಪ್ರದಾನ ಮಾಡಲು ವಿಶ್ವವಿದ್ಯಾನಿಲಯಗಳು ಅನುಸರಿಸುತ್ತಿರುವ ಮಾನದಂಡದ ಬಗ್ಗೆ ಅಸಮಾಧಾನಗೊಂಡಿರುವ ರಾಜ್ಯಪಾಲರು, ಯಾವುದೇ ಮಾನದಂಡಗಳನ್ನು ಅನುಸರಿಸದೆ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.[ಜಂಟಿ ಅಧಿವೇಶನ : ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು]

Vajubhai vala

ಈ ಕುರಿತು ವಿವಿಯ ವಿಸಿಗಳಿಗೆ ತರಾಟೆ ತೆಗೆದುಕೊಂಡ ರಾಜ್ಯಪಾಲ ವಜುಭಾಯಿ ವಾಲಾ ಅವರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಡಾಕ್ಟರ್ ನೀಡಲಾಗಿದೆ. ಆದರೆ ಅವರ ಸೇವೆಯಿಂದ ಸಮಾಜಕ್ಕೇನು ಕೊಡುಗೆ? ಯಾವ ಆಧಾರದ ಮೇಲೆ ಅವರಿಗೆ ಡಾಕ್ಟರೇಟ್ ಕೊಡಲಾಗಿದೆ. ಡಾಕ್ಟರೇಟ್ ನೀಡುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ ಎಂದು ಕಿಡಿ ಕಾರಿದರು.[ನಿಶ್ಚಿತ ಗುರಿಯೊಂದಿಗೆ ಬದುಕು ಕಟ್ಟಿಕೊಳ್ಳಿ: ವಜುಭಾಯಿ ವಾಲಾ]

ಡಾಕ್ಟರೇಟ್ ಪ್ರದಾನಕ್ಕೆ ಹೊಸ ಮಾನದಂಡಗಳು:

* ಡಾಕ್ಟರೇಟ್ ಪ್ರದಾನ ಮಾಡುವ ವಿವಿಗಳು ವಿವಿಯ ಸಿಂಡಿಕೇಟ್ ನಿಂದ ಗಣ್ಯರ ಹೆಸರು ಶಿಪಾರಸ್ಸಾಗಬೇಕು.

* ಒಂದು ಬಾರಿಗೆ ಮೂರಕ್ಕಿಂತ ಹೆಚ್ಚು ಗಣ್ಯರ ಹೆಸರು ಶಿಫಾರಸ್ಸು ಬೇಡ.

* ರಾಜ್ಯಪಾಲರಿಂದಲೇ ನೂತನ ಪರಿಶೀಲನಾ ಸಮಿತಿ ರಚನೆಯಾಗಲಿದೆ,

* ಪರಿಶೀಲನಾ ಸಮಿತಿ ಘಟಿಕೋತ್ಸವವಕ್ಕೆ 45ದಿನ ಇರುವಂತೆಯೇ ಗಣ್ಯರ ಪಟ್ಟಿ ಅಂತಿಮಗೊಳಿಸಬೇಕು.

* ಪರಿಶೀಲನಾ ಸಮಿತಿಯ ಶಿಪಾರಸ್ಸಿನಂತೆ ಗಣ್ಯರ ಹೆಸರು ಡಾಕ್ಟರೇಟ್ ಗೆ ಅಂಗೀಕಾರವಾಗಲಿದೆ.

English summary
The governor Vajubhai vala has suggested a new benchmark for doctorate on Wednesday, March 09th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X