ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರ ತಡೆಗೆ ಸರ್ಕಾರ ಯಾವ ನಿಯಮ ಅನುಸರಿಸಬೇಕು?

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 06 : ದೆಹಲಿಯ ನಿರ್ಭಯ ಪ್ರಕರಣ, ಉಬರ್ ಟ್ಯಾಕ್ಸಿ ಚಾಲಕನಿಂದಲೇ ಅತ್ಯಾಚಾರಕ್ಕೆ ಒಳಗಾದ ಬಹುರಾಷ್ಟ್ರೀಯ ಕಂಪನಿಯ ಮಹಿಳಾ ಉದ್ಯೋಗಿಯ ಪ್ರಕರಣಗಳು ಮಾಸಿಲ್ಲ. ಅಷ್ಟರಲ್ಲೇ ಬೆಂಗಳೂರಿನ ಕಾಲ್ ಸೆಂಟರ್ ಉದ್ಯೋಗಿಯೊಬ್ಬಳು ಕ್ಯಾಬ್ ಚಾಲಕ ಹಾಗೂ ಆತನ ಸ್ನೇಹಿತರಿಂದ ಮಡಿವಾಳದ ಸಮೀಪ ಅಕ್ಟೋಬರ್ 3ರ ಶನಿವಾರದಂದು ಗ್ಯಾಂಗ್ ರೇಪ್ ಗೆ ಒಳಗಾಗಿದ್ದು, ಪೊಲೀಸರು ಶಂಕಿತ ಮೂವರು ಆರೋಪಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಭವಿಸಿದ ಈ ದುರ್ಘಟನೆ ಹಿನ್ನೆಲೆಯಲ್ಲಿ ಸರ್ಕಾರ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಏನೆಲ್ಲಾ ಕ್ರಮಗಳನ್ನು ಅನುಸರಿಸಿದರೆ ಒಳಿತು, ಅತ್ಯಾಚಾರ ಘಟನೆಗಳಿಗೆ ಏನೆಲ್ಲಾ ಕಾರಣ ಇರಬಹುದೆಂಬ ಸಣ್ಣದೊಂದು ಮುನ್ನೊಟ ಇಲ್ಲಿದೆ ನೋಡಿ.[ಬೆಂಗಳೂರು : ಕಾಲ್ ಸೆಂಟರ್ ಉದ್ಯೋಗಿ ಮೇಲೆ ಗ್ಯಾಂಗ್ ರೇಪ್ ]

The government should follow the some rules to prevent rape

ನಗರ ಎಂದಾಕ್ಷಣ ಲಕ್ಷಾಂತರ ಉದ್ಯೋಗ ಅವಕಾಶಗಳು, ವೈಭವ ಜೀವನ, ಸುಸಜ್ಜಿತ ಸಾರಿಗೆ ಸಂಚಾರ, ವಿಭಿನ್ನ ರಾಜ್ಯ, ದೇಶ ಜನರ ಒಡನಾಡಿಗಳ ಪರಿಚಯ, ಬದುಕಿನಲ್ಲಿ ಯಶಸ್ಸು ಸಾಧಿಸಿ ಉತ್ತಮ ಬಾಳು ಕಂಡುಕೊಳ್ಳಲು ಒಳ್ಳೆಯ ಅವಕಾಶಗಳಿರುತ್ತವೆ ಎಂದು ಬದುಕಿನ ಕಷ್ಟ ನೀಗಿಸಿಕೊಳ್ಳಲು ಮಹಿಳೆಯರು ಸೇರಿದಂತೆ ಸಾಕಷ್ಟು ಮಂದಿ ನಗರದ ಕಡೆ ಹೆಜ್ಜೆ ಹಾಕುತ್ತಾರೆ.

ಕೆಲಸ ದೊರೆತ ಮೇಲೆ ಪ್ರತಿಯೊಬ್ಬರೂ ಕಚೇರಿಯ ನಿಬಂಧನೆಗಳನ್ನು ಪಾಲಿಸಲೇ ಬೇಕಾಗುತ್ತದೆ. ಕೆಲವೊಮ್ಮೆ ಕಚೇರಿಯಲ್ಲಿ ಯಥೇಚ್ಛ ಕೆಲಸವಿದ್ದರೆ ರಾತ್ರಿ ಸ್ವಲ್ಪ ತಡವಾಗುವ ಸಾಧ್ಯತೆಗಳು ಇರುತ್ತವೆ. ಅಂತಹ ಸಮಯದಲ್ಲಿ ಮಹಿಳೆಯರಿಗೆ ಕೆಲವು ಕಚೇರಿಯಿಂದ ಕ್ಯಾಬ್ ವ್ಯವಸ್ಥೆ ಮಾಡಲಾಗಿರುತ್ತದೆ. ಅಕಸ್ಮಾತ್ ಕ್ಯಾಬ್ ವ್ಯವಸ್ಥೆ ಇಲ್ಲದಿದ್ದರೆ ಮನೆಗೆ ಹೋಗೋದು ಹೇಗಪ್ಪಾ ಎಂದು ಯೋಚಿಸುತ್ತಿರುವಾಗ ನೆನಪಾಗೋದು ಆಟೋ, ಟಿಟಿ, ಕ್ಯಾಬ್ ಗಳು.

ಆದರೆ ಇತ್ತೀಚಿನ ದಿನಗಳಲ್ಲಿ ಆಟೋ, ಟಿಟಿ, ಕ್ಯಾಬ್ ಚಾಲಕರು ಪ್ರಯಾಣಿಕರಿಗೆ ಹೆಚ್ಚಿನ ಪ್ರಯಾಣ ದರ ವಿಧಿಸಿ ಜನರಿಂದ ಹಣ ಕೀಳುವ ದಂಧೆಗೆ ತೊಡಗಿದ್ದರೆ, ಮಹಿಳೆಯರನ್ನು ಅತ್ಯಾಚಾರ ಮಾಡುವ ಪ್ರವೃತ್ತಿಗೆ ಇಳಿದು ಬಿಟ್ಟು ತಮ್ಮ ಪೈಶಾಚಿಕ ಮನೋಭಾವವನ್ನು ತೋರುತ್ತಿದ್ದಾರೆ.[ದೆಹಲಿ: ಅತ್ಯಾಚಾರಿ ಟ್ಯಾಕ್ಸಿ ಚಾಲಕ ಬಂಧನ]

ದಿನಗಳೆದಂತೆ ಕ್ಯಾಬ್ , ಆಟೋ ಟಿಟಿ ಚಾಲಕರ ಅಸಹ್ಯ ಮನೋಭಾವಗಳಿಂದಾಗಿ ಎಷ್ಟೋ ಮಹಿಳೆಯರ ಬದುಕು ಒಡೆದು ಹೋದ ಹಾಲಿನಂತಾಗಿದೆ. ಇವರ ಅಟ್ಟಹಾಸದಿಂದಾಗಿ ಇನ್ನಿತರ ಬದಲಿ ವ್ಯವಸ್ಥೆಯನ್ನು ನೆಚ್ಚಿಕೊಳ್ಳಲು ಸಾವಿರಾರು ಬಾರಿ ಯೋಚಿಸುವಂತಾಗಿದೆ. ಕಚೇರಿಯಲ್ಲೂ ತುರ್ತಿನ ಸಂದರ್ಭಗಳನ್ನು ಒಪ್ಪಿಕೊಂಡು ಕಾರ್ಯ ನಿರ್ವಹಿಸದಂತಾಗಿದೆ.

ಅತ್ಯಾಚಾರ ಪ್ರಕರಣಗಳಿಗೆ ಕಾರಣಗಳು ಏನಿರಬಹುದು?

ಪೊಲೀಸರ ನಿರ್ಲಕ್ಷ:

ಸಂಚಾರ ವ್ಯವಸ್ಥೆಯಲ್ಲಿ ಹೆಚ್ಚಿನ ಮುತುವರ್ಜಿ ತೋರಿಸುವ ನಗರ ಸಂಚಾರಿ ಪೊಲೀಸರು, ನಗರ ಪೊಲೀಸರು ಅತ್ಯಾಚಾರ ಪ್ರಕರಣದ ಕಡೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷಿಗಳು ಬೇಕಿಲ್ಲ. ಒಟ್ಟಿನಲ್ಲಿ ದಿನಾ ಸಾಯೋರಿಗೆ ಅಳುವವರು ಯಾರು ಎಂಬ ನಿಲುವಿಗೆ ಬಂದಂತಿದ್ದಾರೆ.

ರಾಜಕಾರಣಿಗಳೇ ಪರಿಹಾರ ನೀಡುವ ಬದಲು ತಡೆಗೆ ಗಮನ ಕೊಡಿ:

ಅನಾವಶ್ಯಕ ವಿಚಾರಗಳ ಕಡೆಗೆ ಮೂಗು ತೂರಿಸುವ ರಾಜಕಾರಣಿಗಳು ಅತ್ಯಾಚಾರ ಆದ ಮೇಲೆ ಪರಿಹಾರ ನೀಡಲು, ಸಮಾಧಾನ ಮಾಡಲು ಮುಂದಾಗುತ್ತಾರೆ. ಮೊದಲೇ ಘಟನೆ ತಡೆಗೆ, ಮಹಿಳೆಯರ ಸುರಕ್ಷತೆಗೆ ಯಾವುದೇ ವಿಶೇಷ ಗಮನ ಕೊಡುತ್ತಿಲ್ಲ. ಆಟೋ, ಟಿಟಿ, ಕ್ಯಾಬ್ ಚಾಲಕರ ರೌಡಿಸಂ ಪ್ರವೃತ್ತಿಗಳ ತಡೆಗೆ ಗಮನ ಹರಿಸುತ್ತಿಲ್ಲ. ಇದರಿಂದ ರಾಜಕಾರಣಿಗಳು ಮಹಿಳೆಯರ ಮೇಲಿರುವ ತಾತ್ಸಾರ ಮನೋಭಾವ, ಇನ್ನಿತರ ಸಾಮಾಜಿಕ ವಿಷಯಗಳ ಕಡೆಗೆ ಒಲ್ಲವಿರುವುದು ನೇರವಾಗಿ ಗೋಚರಿಸುತ್ತದೆ.[ಟ್ಯಾಕ್ಸಿ ಚಾಲಕರಿಗೆ ಪೊಲೀಸ್ ಇಲಾಖೆ ಸೂಚನೆಗಳೇನು?]

The government should follow the some rules to prevent rape

ಕೆಲವೊಮ್ಮೆ ಮಹಿಳೆಯರೇ ಕಾರಣ :

ನಗರದ ಕಚೇರಿಗಳು ಸಾಧ್ಯವಾದಷ್ಟು ಉದ್ಯೋಗಿಗಳಿಗಾಗಿ ಕ್ಯಾಬ್ ವ್ಯವಸ್ಥೆ ಮಾಡಿರುತ್ತದೆ. ಆದರೆ ಕೆಲವು ಮಹಿಳೆಯರು ಆಫೀಸ್ ನ ಕ್ಯಾಬ್ ಬಿಟ್ಟು ತಮ್ಮ ಸಹೋದ್ಯೋಗಿಗಳ ವಾಹನಗಳನ್ನು ನೆಚ್ಚಿಕೊಂಡು, ನಗರದಾದ್ಯಂತ ಸುತ್ತಾಡಿ ಮನೆಗೆ ರಾತ್ರಿ ತಡವಾಗಿ ಹೋಗುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಮಹಿಳೆಯರು ಸ್ವಯಂ ಸುರಕ್ಷ ಕ್ರಮಗಳನ್ನು ರೂಢಿಸಿಕೊಂಡರೆ ಇಂತಹ ಅನಾಹುತಗಳಿಂದ ದೂರ ಇರಬಹುದು.

ನಿಯಮಗಳನ್ನು ಪಾಲಿಸದ ಕ್ಯಾಬ್, ಟ್ಯಾಕ್ಸಿಗಳು :

ಕ್ಯಾಬ್ ಟ್ಯಾಕ್ಸಿಗಳು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಷರತ್ತುಗಳನ್ನು ಮೀರಿ ಕೆಲವೊಂದು ವಾಹನಗಳು ನಗರದಲ್ಲಿ ಸಂಚರಿಸಿ ಹಲವಾರು ದುರ್ಘಟನೆಗಳಿಗೆ ಕಾರಣವಾಗುತ್ತಿವೆ.

* ವಾಹನದಲ್ಲಿ ಅಸಲಿ ಪರವಾನಗಿ ಪತ್ರ ಇಟ್ಟುಕೊಳ್ಳುವುದು ಕಡ್ಡಾಯ 24 ಗಂಟೆಯೂ ಪ್ರಯಾಣಕರಿಗೆ ಸೇವೆ ನೀಡಬೇಕು.
* ಪ್ರತಿ ಕ್ಯಾಬ್ ಟೆಲಿಫೋನ್ ಅಥವಾ ರೆಡಿಯೋ ಕಂಪನಿಯ ನಿಯಂತ್ರಣಾ ಕೊಠಡಿಯ ಅಧೀನದಲ್ಲಿರಬೇಕು.
* ಚಾಲಕ ಸೇರಿ 5 ಕ್ಕಿಂತ ಹೆಚ್ಚು ಜನ ಸಂಚರಿಸುವಂತಿಲ್ಲ,
* ವಾಹನದ ನಂಬರ್ ಪ್ಲೇಟ್ ಹಳದಿ ಬಣ್ಣದಲ್ಲಿರಬೇಕು
* ಇಲಾಖೆಯ ಪರವಾನಗಿ ಹೊಂದಿರುವ ಎಲೆಕ್ಟ್ರಾನಿಕ್ ಡಿಜಿಟಲ್ ಮೀಟರ್ ಅಳವಡಿಸಿರಬೇಕು.
* ಟಿಂಟೆಡ್ ಗಾಜು ಬಳಸಲು ಅವಕಾಶವಿಲ್ಲ.
* ಚಾಲಕನಿಗೆ ಸಮವಸ್ತ್ರ ಕಡ್ಡಾಯ ವಾಹನದ ಮುಂದೆ ಮತ್ತು ಹಿಂದೆ ಸಿಟಿ ಟ್ಯಾಕ್ಸಿ ಎಂಬ ಬೋರ್ಡ್ ಹಾಕಿರಬೇಕು.

ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆಯಾ?

ಮಹಿಳೆಯರ ಸುರಕ್ಷತೆಗೆ 181 ಸಹಾಯವಾಣಿ ಜಾರಿಗೆ ತಂದಿರುವ ಸರ್ಕಾರ, ಇದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ? ಇದರಿಂದ ಮಹಿಳೆಯರಿಗೆ ಉಪಯೋಗವಾಗುತ್ತಿದೆಯೇ?, ಮಹಿಳಾ ಸಹಾಯವಾಣಿ ಕುರಿತಾಗಿ ಮಾಹಿತಿ ಲಭ್ಯವಿದೆಯೇ? ಎಂಬೆಲ್ಲಾ ಅಂಶಗಳಿಗೂ ಗಮನ ಕೊಡುವ ಅನಿವಾರ್ಯತೆ ಇದೆ. ಮಹಿಳೆಯರ ಸುರಕ್ಷತೆಗಾಗಿ ಕೆಲವು ಖಾಸಗಿ ಸಹಾಯವಾಣಿಗಳು ತಲೆ ತಲೆಎತ್ತಿವೆ.

ಅತ್ಯಾಚಾರ ತಡೆಗಟ್ಟಲು ಸರ್ಕಾರ ಏನು ಮಾಡಬಹುದು?

* ಕಚೇರಿಗಳು ಮೊದಲು ಉತ್ತಮ ಕ್ಯಾಬ್ ಚಾಲಕನನ್ನು ನೇಮಕ ಮಾಡಿಕೊಳ್ಳಬೇಕು. ಅವರ ಪೂರ್ವ ಪರ ತಿಳಿದುಕೊಂಡಿರಬೇಕು.

* ಕೆಲಸದ ವೇಳೆಯಲ್ಲಿ ರಾತ್ರಿ ಮತ್ತು ಹಗಲಿನ ವೇಳೆ ಮಹಿಳೆಯರು ಮನೆಗಳಿಗೆ ಆಫೀಸ್ ಕ್ಯಾಬ್ ನಲ್ಲಿಯೇ ಹೋಗುವ ಕ್ರಮವನ್ನು ಜಾರಿಗೆ ತರುವಂತೆ ಖಾಸಗೀ ಕಚೇರಿಗಳಿಗೆ ತಾಕೀತು ಮಾಡಬೇಕು.

* ನಗರದ ಕ್ಯಾಬ್, ಟಿಟಿ ಆಟೋ ಚಾಲಕರು ನಿಯಮ ಉಲ್ಲಂಘನೆ ಮಾಡಿದ್ದರೆ ಕಠಿಣ ಕ್ರಮ ಜಾರಿಗೊಳಿಸಬೇಕು

* ಮಹಿಳಾ ಸಹಾಯವಾಣಿಯ ಕುರಿತಾಗಿ ಜಾಗೃತಿ ಮೂಡಿಸಬೇಕು,

* ರಾತ್ರಿ ವೇಳೆಯಲ್ಲೂ ಸಂಚಾರಿ ಪೊಲೀಸರು, ನಗರ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಆಜ್ಞೆ ಹೊರಡಿಸಬೇಕು.

English summary
The Government has necessary to take some actions and follow the some rules to prevent rape in Bengaluru and other districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X