ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರಲ್ಲಿ ಸ್ಪಂದಿಸುತ್ತಿರುವ ಬೆಂಗಳೂರು ಪೊಲೀಸರಿಗೆ ಧನ್ಯವಾದ

By Prasad
|
Google Oneindia Kannada News

ಬೆಂಗಳೂರು, ಮೇ 21 : ಸೋಷಿಯಲ್ ಮೀಡಿಯಾದ ಮೂಲಕ, ಶನಿವಾರ ಭಾನುವಾರವೆನ್ನದೆ ನಾಗರಿಕರಿಗೆ ಸ್ಪಂದಿಸುವ, ಮಾಹಿತಿ ಹಂಚುವ, ಜಾಗೃತಿ ಮೂಡಿಸುವ ಕೆಲಸದಲ್ಲಿ ಬೆಂಗಳೂರು ನಗರ ಪೊಲೀಸರು ಅತ್ಯದ್ಭುತ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು.

ಯಾವುದೇ ಸಮಸ್ಯೆಯಿರಲಿ, ಮತ್ತಾವುದೇ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದಾಗ, ಟ್ವಿಟ್ಟರ್ ಮೂಲಕವಾಗಲಿ ಫೇಸ್ ಬುಕ್ ಮುಖಾಂತರವಾಗಲಿ ದೂರು ಕೊಟ್ಟವರಿಗೆ ತಕ್ಷಣ ಉತ್ತರ ನೀಡುವ ಮೂಲಕ ಜನಸ್ನೇಹಿಯಾಗಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.[ಸಾರ್ವಜನಿಕರ ಜಾಗೃತಿಗೆ ವಿಶಿಷ್ಟ ಹಾದಿ ತುಳಿದ ಬೆಂಗಳೂರು ಪೊಲೀಸ್]

ಜೊತೆಗೆ ಆಯಾ ಬಡಾವಣೆಗಳಲ್ಲಿ ಜನರೊಂದಿಗೆ ಆಗಾಗ ಸಂವಾದ ನಡೆಸುವ, ಅವರ ದೂರುದುಮ್ಮಾನಗಳನ್ನು ಆಲಿಸುವ, ಅವಶ್ಯಕತೆ ಬಿದ್ದರೆ ರಾತ್ರಿ ಬೀಟ್ ಹೆಚ್ಚಿಸುವ, ಆಯಾ ಠಾಣೆಯ ದೂರವಾಣಿಯನ್ನು ಬಡಾವಣೆಯಲ್ಲಿ ಪ್ರಕಟಿಸುವ ಕೆಲಸವನ್ನೂ ಪೊಲೀಸ್ ಇಲಾಖೆ ಮಾಡಿದರೆ ಉತ್ತಮ.

ಜೊತೆಗೆ, FindMyPoliceStation App ಡೌನ್ ಲೋಡ್ ಮಾಡಿಕೊಂಡು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಬೆಂಗಳೂರು ನಗರ ಆಯುಕ್ತ ಪ್ರವೀಣ್ ಸೂದ್ ಅವರು ನಾಗರಿಕರನ್ನು ಕೇಳಿಕೊಂಡಿದ್ದಾರೆ. ಈ ಆಪ್ ಹೇಗೆ ಕೆಲಸ ಮಾಡುತ್ತದೆಂದು ತಿಳಿದು ಜನರೂ ಇದರ ಪ್ರಯೋಜನವನ್ನು ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ನೈಜೀರಿಯಾದ ನಾಗರಿಕರ ಮೇಲೆ ಬೆಂಗಳೂರು ಪೊಲೀಸರು ಮುಗಿಬಿದ್ದು ಮಹದುಪಕಾರ ಮಾಡುತ್ತಿದ್ದಾರೆ. ಅಂತಹ ಇತ್ತೀಚಿನ ಸುದ್ದಿಗಳ ಮೆಲುಕು ಇಲ್ಲಿದೆ.[ಹಿರಿಯ ನಾಗರೀಕರ ಸಹಾಯಕ್ಕಾಗಿ ದಿನದ 24 ಗಂಟೆಯೂ ಹೆಲ್ಪ್ ಲೈನ್]

ಮಾದಕ ದ್ರವ್ಯ ಮಾರಾಟಗಾರರ ಮೇಲೆ ಯುದ್ಧ

ಬೆಂಗಳೂರಿನ ಕೆಆರ್ ಪುರಂನಲ್ಲಿ ಅಕ್ರಮವಾಗಿ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ, 25.5 ಲಕ್ಷ ರುಪಾಯಿ ಮೌಲ್ಯದ 219 ಗ್ರಾಂ ಅಂಫಿಟಮೈನ್ ಮತ್ತು 50 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Array

ವಿ ನಾಗರಾಜ್ ಮೇಲೆ ಮತ್ತೆ ಮೂರು ಕೇಸ್

ಕೋಟ್ಯಂತರ ಮೌಲ್ಯದ ಹಳೆಯ ಹಣವನ್ನು ಮನೆಯಲ್ಲಿ ಪೇರಿಸಿಟ್ಟ ಆರೋಪಕ್ಕೆ ಗುರಿಯಾಗಿದ್ದ ವಿ ನಾಗರಾಜ್ ಮೇಲೆ ಪೊಲೀಸರು ಆಯುಧ ಬಳಸಿ ದರೋಡೆ ಮಾಡಿದ ಆರೋಪ ಸೇರಿದಂತೆ ಮತ್ತೆ ಮೂರು ಕೇಸುಗಳನ್ನು ಜಡಿದಿದ್ದಾರೆ. ಪರಾರಿಯಾಗಿದ್ದ ನಾಗರಾಜ್ ತನ್ನ ಮಕ್ಕಳೊಂದಿಗೆ ಕೆಲ ದಿನಗಳ ಹಿಂದೆ ಕೇರಳದಲ್ಲಿ ಸಿಕ್ಕಿಬಿದ್ದಿದ್ದಾನೆ.[ರೌಡಿ ಶೀಟರ್ ನಾಗನ ಮತ್ತೊಂದು ಮನೆ ಶೋಧ; ಮಹತ್ವದ ಡೈರಿ ವಶ]

ನಿಯಮ ಪಾಲಿಸಿ ಎಂದು ಟ್ಯಾಕ್ಸಿ ಚಾಲಕರಿಗೆ ತಾಕೀತು

ಟ್ಯಾಕ್ಸಿ ಡ್ರೈವರುಗಳು ರಸ್ತೆ ಸಂಚಾರ ನಿಯಮ ಪಾಲಿಸುವುದರಲ್ಲಿ ಸ್ವಲ್ಪ ಹಿಂದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂಥ ಸಾವಿರಾರು ಟ್ಯಾಕ್ಸಿ ಚಾಲಕರನ್ನು ಹಿಡಿದು ಅವರು ನಿಯಮ ಪಾಲಿಸುವವರೆಗೆ ಮಾಡಿದ್ದಾರೆ ಬೆಂಗಳೂರು ಪೊಲೀಸರು. ಈ ಕೆಲಸ ದಿನನಿತ್ಯ ನಡೆಯಲಿ ಎಂಬುದು ನಾಗರಿಕರ ಕಳಕಳಿ.

Array

ಸಮವಸ್ತ್ರ ಧರಿಸದ ಟ್ಯಾಕ್ಸಿ ಚಾಲಕರ ವಿರುದ್ಧ ಕ್ರಮ

ಖಾಕಿ ಸಮವಸ್ತ್ರವನ್ನು ಧರಿಸದೆ ಟ್ಯಾಕ್ಸಿ ಚಲಾಯಿಸುತ್ತಿದ್ದ 228 ಟ್ಯಾಕ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 2000ಕ್ಕೂ ಹೆಚ್ಚು ಚಾಲಕರಿಗೆ ದಂಡ ವಿಧಿಸಲಾಗಿದೆ. ಇದು ಬೆಂಗಳೂರು ಪೂರ್ವ ಪ್ರದೇಶದಲ್ಲಿ ಮಾತ್ರ ನಡೆದಿರುವಂಥದ್ದು.[ಮಹಿಳಾ ಸಂರಕ್ಷಣೆಯ ಸುರಕ್ಷಾ ಆಪ್ ಗೆ ಈಗ ಸೆಲೆಬ್ರಿಟಿ ಸಾಥ್]

ನಕಲಿ ಉತ್ಪನ್ನ ಮಾರುತ್ತಿದ್ದವನ ಬಂಧನ

7 ಲಕ್ಷ ರುಪಾಯಿಗೂ ಹೆಚ್ಚು ಲಕ್ಮೆ, ಪಾಂಡ್ಸ್, ಫೇರ್ ಅಂಡ್ ಲವ್ಲಿ ಉತ್ಪನ್ನಗಳನ್ನು ಮಾರುತ್ತಿದ್ದ ಧನರಾಜ್ ಎಂಬಾತನನ್ನು ಪೊಲಿಸರು ಬಂಧಿಸಿ ಅವನಿಂದ ಭಾರೀ ಪ್ರಮಾಣಗಲ್ಲಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ನಡೆದಿರುವ ಸಿಟಿ ಮಾರುಕಟ್ಟೆಯಲ್ಲಿ.

{promotion-urls}

English summary
Thanks to Bengaluru City Police for being active on social media, especially on twitter. They have been putting useful information, sharing tips to users to follow rules, posting stories on crime. Bengaluru residents too should support them to do better.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X