ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಉಚಿತ ಎಳನೀರು! ಹೀಗೂ ಉಂಟೆ?

By Ashwath
|
Google Oneindia Kannada News

ಬೆಂಗಳೂರು, ಮೇ. 7: ನೀವು ಎಲ್ಲಿಯಾದರೂ ಗರ್ಭಿಣಿಯರಿಗೆ, ದೇವರ ಕೆಲಸಗಳಿಗೆ ಉಚಿತವಾಗಿ ಎಳನೀರು ಸಿಗುವುದನ್ನು ಕೇಳಿದ್ದೀರಾ? ಇಲ್ಲ ತಾನೆ. ಹಾಗಾದ್ರೆ ಇಲ್ಲಿ ಕೇಳಿ ಬೆಂಗಳೂರಿನಲ್ಲಿ ಒಂದು ಕಡೆ ಎಳನೀರು ಸಿಗುತ್ತದೆ. ಅದು ಉಚಿತವಾಗಿ!

ಬೇಸಗೆಯಲ್ಲಿ ಬೆಲೆ ಹೆಚ್ಚಾದರೂ ಎಳನೀರಿಗೆ ತುಂಬಾ ಬೇಡಿಕೆ. ಬೇಡಿಕೆ ಹೆಚ್ಚಿದೆ ಎಂದು ತಿಳಿಯುತ್ತಿದ್ದಂತೆ ಎಳನೀರು ಮಾರುವವರು ದುಬಾರಿ ಬೆಲೆಗೆ ಎಳನೀರು ಮಾರುತ್ತಿದ್ದಾರೆ ಎನ್ನುವ ಆರೋಪ ಜನ ಮಾಡಿದ್ದರೂ ಇಲ್ಲೊಬ್ಬರು ಉಚಿತವಾಗಿ ಎಳನೀರನ್ನು ನೀಡುತ್ತಿದ್ದಾರೆ.

ನಗರದ ಹೊರ ವರ್ತು‌ಲ ರಸ್ತೆಯ ಇಬ್ಬಲೂರು ಗೇಟ್‌ನ, ಪೆಟ್ರೋಲ್‌ ಪಂಪ್‌ ಸಮೀಪದದಲ್ಲಿ ಎಳನೀರು ವ್ಯಾಪಾರ ಮಾಡುವ ವೆಂಕಟೇಶ್‌(51) ಗರ್ಭಿಣಿ ಸ್ತ್ರೀಯರಿಗೆ, ಅಂಗವಿಕಲರಿಗೆ, ದೇವಸ್ಥಾನಗಳಿಗೆ ತೆರಳುವ ಭಕ್ತರಿಗೆ ಉಚಿತವಾಗಿ ಎಳನೀರನ್ನು ಸೇವೆಯ ರೂಪದಲ್ಲಿ ನೀಡುತ್ತಿದ್ದಾರೆ.[ಬೆಂಗಳೂರಿಗರಿಗೆ ಕಾದಿದೆ ನೀರಿನ ದರ ಏರಿಕೆ ಶಾಕ್]

ಈ ರೀತಿಯ ಹೊಸ ಎಳನೀರು ಮಾರುಕಟ್ಟೆ ವ್ಯಾಪಾರ ಪ್ರಚಾರ ತಂತ್ರವೆಂದು ಕೆಲ ಜನ ಹೇಳಿದ್ದರೂ, ಇವರು ಮಾತ್ರ ಇದು ಒಂದು ರೀತಿಯ ಸೇವೆ ಎಂದು ಭಾವಿಸಿ ಉಚಿತವಾಗಿ ಎಳನೀರು ವಿತರಿಸುತ್ತಿದ್ದಾರೆ.

Tender coconut free for pregnant women

ಯಾರ ಹೆಸರು ಹೇಳಿಕೊಂಡು ಮೋಸ ಮಾಡಬಹುದಾದರೂ ದೇವರ ಹೆಸರನ್ನು ಹೇಳಿ ಮೋಸ ಮಾಡುವ ಜನರ ಸಂಖ್ಯೆ ಕಡಿಮೆ. ಒಂದು ವೇಳೆ ಮೋಸ ಮಾಡಿದ್ದರೂ ಅವರಿಗೆ ಮೋಸ ಅಗುವುದು ಗ್ಯಾರಂಟಿ ಅಂತಾರೆ ವೆಂಕಟೇಶ್‌.

ಇನ್ನು ಗರ್ಭಿ‌ಣಿ ಸ್ತ್ರೀಯರು ಎಳನೀರು ಸೇವಿಸಿದರೆ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲಿರುವುದರಿಂದ ಅವರಿಗೂ ಉಚಿತವಾಗಿ ನೀಡುತ್ತೇನೆ ಎನ್ನುತ್ತಾರೆ ವೆಂಕಟೇಶ್‌.

ಕನ್ನಡ, ತೆಲುಗು, ತಮಿಳು, ಹಿಂದಿ ಅಲ್ಪ ಸ್ವಲ್ಪ ಇಂಗ್ಲಿಷ್‌ ಮಾತನಾಡುವ ವೆಂಕಟೇಶ್‌ ಅವರ ಎಳನೀರು ಅಂಗಡಿ ಫೇಮಸ್ಸಾಗಿದೆ. ರಾತ್ರಿಯಿಡಿ ಕೆಲಸ ಮಾಡುವ ಟೆಕ್ಕಿಗಳ ಸಂಖ್ಯೆ ಈ ಪ್ರದೇಶದಲ್ಲಿ ಹೆಚ್ಚಿರುವುದರಿಂದ ರಾತ್ರಿಯೂ ಎಳನೀರು ವ್ಯಾಪಾರ ಇಲ್ಲಿ ಜೋರಾಗಿದೆ. ಗ್ರಾಹಕರನ್ನು ಸೆಳೆಯಲು ಬೇರೆ ಬೇರೆ ತಂತ್ರಗಳನ್ನುನಡೆಸುವ ವ್ಯಾಪಾರಿಗಳ ನಡುವೆ ವೆಂಕಟೇಶ್‌ ಅವರ ಹೊಸ ಸೇವೆಯ ತಂತ್ರ ಎಳನೀರು ವ್ಯಾಪಾರದಲ್ಲಿ ಕ್ಲಿಕ್‌ ಆಗಿದೆ.

English summary
Tender coconut free for pregnant women- M Venkatesh of Sai traders, a small occupancy on the road facing corner of a fuel station on Outer Ring Road bears the board "Free for temples, pregnant women, physically challenged,", attracting many passersby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X