ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಯುವಕರಿಗೆ ಬುದ್ಧಿವಾದ ಹೇಳಿದ ಟೆಕ್ಕಿ ಕೊಲೆ

|
Google Oneindia Kannada News

ಬೆಂಗಳೂರು, ಆ. 31 : ಬಿಸಿ ರಕ್ತದ ಯುವಕರ ಕೆಲವು ಕ್ಷಣದ ದುಡುಕಿನ ನಿರ್ಧಾರಕ್ಕೆ ಜೀವವೊಂದು ಬಲಿಯಾಗಿದೆ. ಸಿಗರೇಟ್ ಸೇದಬೇಡಿ ಎಂದು ಬುದ್ಧಿಮಾತು ಹೇಳಿದ ಟೆಕ್ಕಿಯನ್ನು ಯುವಕರ ಗುಂಪು ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಕೊಲೆಯಾದ ಟೆಕ್ಕಿಯನ್ನು ಶಶಾಂಕ್ (25) ಎಂದು ಗುರುತಿಸಲಾಗಿದೆ. ಟೆಕ್ಕಿಯನ್ನು ಕೊಲೆ ಮಾಡಿದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮುಖ್ಯ ಆರೋಪಿ ಡ್ಯಾನಿಯಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

bengaluru

ಘಟನೆ ವಿವರ : ಕೆಲವು ಕ್ಷಣದ ಕೋಪಕ್ಕೆ ಒಂದು ಜೀವವೇ ಬಲಿಯಾದ ಘಟನೆ ಇದು. ಬಿಸಿ ರಕ್ತದ ಯುವಕರ ದುಡುಕಿನ ನಿರ್ಧಾರದಿಂದ ಬಾಳಿ ಬದುಕಬೇಕಾಗಿದ್ದು ಜೀವವೊಂದು ಸಾವನ್ನಪ್ಪಿದೆ. ಸೋಮವಾರ ಮುಂಜಾನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. [ಧೂಮಪಾನಿಗಳೆ ನಿಮಗಿದು ನೆನಪಿರಲಿ]

ಟೆಕ್ಕಿ ಶಶಾಂಕ್ ಸ್ನೇಹಿತರ ಮನೆಯಿಂದ ಇಂದು ಬೆಳಗ್ಗೆ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದರು. ಈ ವೇಳೆ ರಾಮಮೂರ್ತಿ ನಗರದ ಮುಖ್ಯ ರಸ್ತೆಯ ಅಂಗಡಿಯೊಂದರ ಮುಂದೆ ಕಾರು ನಿಲ್ಲಿಸಿದ್ದಾರೆ. ಅಂಗಡಿಗೆ ಸಮೀಪದಲ್ಲಿ ಸುಮಾರು 20 ವರ್ಷ ವಯಸ್ಸಿನ ಯುವಕರ ಗುಂಪು ಸಿಗರೇಟು ಸೇದುತ್ತಾ ನಿಂತಿತ್ತು.

ಯುವಕರನ್ನು ನೋಡಿದ ಶಶಾಂಕ್ ಸಿಗರೇಟ್ ಸೇದಬೇಡಿ, ಅದು ಒಳ್ಳೆಯದಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಡ್ಯಾನಿಯಲ್, ವಾಸುದೇವ್, ಅಜಯ್ ಮುಂತಾದವರು ಚಾಕುವಿನಿಂದ ಇರಿದು ಶಶಾಂಕ್ ಹತ್ಯೆ ಮಾಡಿದ್ದಾರೆ.

20ರ ಆಸುಪಾಸಿನ ಯುವಕರ ಆ ಕ್ಷಣದ ಕೋಪಕ್ಕೆ ಬದುಕಿ ಬಾಳಬೇಕಾಗಿದ್ದ ಜೀವ ಸಾವನ್ನಪ್ಪಿದೆ. ಕೊಲೆ ಮಾಡಿದ ಯುವಕರು ಜೈಲು ಸೇರುತ್ತಾರೆ. ಆದರೆ, ಶಶಾಂಕ್ ಅವರನ್ನು ಕಳೆದುಕೊಂಡ ಕುಟುಂಬದವರು ಮಾತ್ರ ಜೀವನ ಪರ್ಯಂತ ಈ ದುಖಃವನ್ನು ಅನುಭವಿಸಬೇಕಾಗಿದೆ.

ಶಶಾಂಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸುದೇವ್, ಅಜಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ಡ್ಯಾನಿಯಲ್ ಪರಾರಿಯಾಗಿದ್ದು, ಹುಡುಕಾಟ ಮುಂದುವರೆದಿದೆ.

English summary
A 25-year-old software engineer Shashank was stabbed to death by group of youths in Ramamurthy Nagar police station limits, Bengaluru on Monday morning. Shashank advised the youths not to smoke cigarette, for this they killed him. Ramamurthy Nagar police registered the case and arrested 2 accused in connection with murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X