ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿ ಶೋಭಾ ಆತ್ಮಹತ್ಯೆಗೆ ಆಸ್ತಿವಿವಾದ ಕಾರಣವೇ?

ಕಚೇರಿ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಮೂಲದ ಸಾಫ್ಟ್ ವೇರ್ ಉದ್ಯೋಗಿ ಶೋಭಾ ಅವರ ಸಾವಿನ ಕಾರಣ ಬಹುತೇಕ ಸ್ಪಷ್ಟವಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 20: ಕಚೇರಿ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಮೂಲದ ಸಾಫ್ಟ್ ವೇರ್ ಉದ್ಯೋಗಿ ಶೋಭಾ ಅವರ ಸಾವಿನ ಕಾರಣ ಬಹುತೇಕ ಸ್ಪಷ್ಟವಾಗಿದೆ. ಆಸ್ತಿ ವಿವಾದದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಶೋಭಾ ಅವರು ಕಷ್ಟಪಟ್ಟು ಸಾಫ್ಟ್ ವೇರ್ ಸಂಸ್ಥೆಯಲ್ಲಿ ಉದ್ಯೋಗ ಪಡೆದಿದ್ದರು. ಆದರೆ, ಮಂಡ್ಯದಲ್ಲಿ ಆಸ್ತಿ ಹಂಚಿಕೆ ವಿಷಯವಾಗಿ ಸಂಬಂಧಿಕರ ಜತೆ ಕಿತ್ತಾಟ ಮುಂದುವರೆದಿತ್ತು. [ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟ ಮಂಡ್ಯ ಟೆಕ್ಕಿ ಶೋಭಾ]

ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ,ಚಿಕಿತ್ಸೆ ಪಡೆಯುತ್ತಿದ್ದರು. ಇದೇ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ವೈಟ್ ಫೀಲ್ಡ್ ನಲ್ಲಿರುವ ಹರ್ಯಾನ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶೋಭಾ,ಗುರುವಾರದಂದು ತನ್ನ ಕಚೇರಿಗೆ ಎಂದಿನಂತೆ ಹಾಜರಾಗಿ, ಕೆಲಸಕ್ಕೆ ಲಾಗ್ ಇನ್ ಆದ ಕೆಲ ನಿಮಿಷಗಳ ನಂತರ 4ನೇ ಮಹಡಿಯಲ್ಲಿದ್ದ ಕೆಫೆಟೇರಿಯಾಕ್ಕೆ ತೆರಳಿ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಂದೆಯನ್ನು ಕಳೆದುಕೊಂಡ ಶೋಭಾ

ತಂದೆಯನ್ನು ಕಳೆದುಕೊಂಡ ಶೋಭಾ

ಮೂಲತಃ ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದವರು ಶೋಭಾ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ತಂದೆ ಲಕ್ಷ್ಮಿನಾರಾಯಣ್ ಅವರನ್ನು ಕಳೆದುಕೊಂಡರು. ಅನಾರೋಗ್ಯದಿಂದ ನಿಧನರಾದರು. ಬೆಂಗಳೂರಿನ ರಾಜಾನಜಿನಗರದಲ್ಲಿದ್ದ ಅಜ್ಜನ ಮನೆಯಲ್ಲಿ ಶೋಭಾ ಹಾಗೂ ಅವರ ತಾಯಿ ಗೀತಾ ನೆಲೆಸಿದ್ದರು. ಆದರೆ, ಹುಟ್ಟೂರಿನ ಆಸ್ತಿ ವಿವಾದ ತೀರಾ ಇತ್ತೀಚೆಗೆ ಆರಂಭವಾಗಿದ್ದು, ಕೋರ್ಟ್ ಮೆಟ್ಟಿಲೇರಿದೆ.

ನೋವು ತೋಡಿಕೊಂಡಿದ್ದ ಶೋಭಾ

ನೋವು ತೋಡಿಕೊಂಡಿದ್ದ ಶೋಭಾ

ಶೋಭಾ ಅವರ ಅಜ್ಜನ ಹೆಸರಿನಲ್ಲಿ ಹುಟ್ಟೂರಿನಲ್ಲಿರುವ ಜಮೀನು, ಬೆಂಗಳೂರಿನಲ್ಲಿರುವ ಮನೆ ಸೇರಿದಂತೆ ಕೋಟ್ಯಂತರ ರೂಪಾಯಿ ಆಸ್ತಿ ಇದೆ. ಈ ಆಸ್ತಿ ಹಂಚಿಕೆ ವಿಚಾರವಾಗಿ ಶೋಭಾ ಹಾಗೂ ದೊಡ್ಡಪ್ಪ ವರದರಾಜ್ ಅವರ ಮಕ್ಕಳ ನಡುವೆ ವಿವಾದ ಉಂಟಾಗಿತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆ ಶೋಭಾ ಅವರು ಖಿನ್ನತೆಗೆ ಒಳಗಾದರು. ಈ ಬಗ್ಗೆ ಕಚೇರಿಯಲ್ಲಿ ತನ್ನ ಸಹೋದ್ಯೋಗಿಗಳ ಬಳಿ ನೋವು ತೊಡಿಕೊಳ್ಳುತ್ತಿದ್ದರು.

ವೈಟ್‌ಫೀಲ್ಡ್‌ನಲ್ಲಿ ಉದ್ಯೋಗ

ವೈಟ್‌ಫೀಲ್ಡ್‌ನಲ್ಲಿ ಉದ್ಯೋಗ

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ಶೋಭಾ ಅವರು ವೈಟ್‌ಫೀಲ್ಡ್‌ನ 'ಹರ್ಮಾನ್ ಕನೆಕ್ಟೆಡ್ ಸರ್ವೀಸ್ ಆಫ್‌ ಕಾರ್ಪೊರೇಷನ್' ಕಂಪೆನಿ ಕೆಲ್ಸಕ್ಕೆ ಸೇರಿ ನಾಲ್ಕು ವರ್ಷವಾಗಿದೆ. ಕಳೆದ ವರ್ಷ ಉತ್ಪಾದನಾ ವಿಭಾಗದ ಹಿರಿಯ ಇಂಜಿನಿಯರ್ ಆಗಿ ಬಡ್ತಿ ಪಡೆದಿದ್ದರು. ಆದರೆ, ಇತ್ತೀಚೆಗೆ ಅಸ್ತಿ ವಿವಾದದ ಕಾರಣಕ್ಕೆ ತುಂಬಾ ನೊಂದಿದ್ದರು ಎಂದು ಶೋಭಾ ಅವರ ಸಂಬಂಧಿ ಮಹೇಶ್ ಹೇಳಿದ್ದಾರೆ.

ಖಿನ್ನತೆ ಮಾತ್ರ ಕಾರಣವೇ?

ಖಿನ್ನತೆ ಮಾತ್ರ ಕಾರಣವೇ?

ಮಾನಸಿಕ ಖಿನ್ನತೆಗೆ ಒಳಗಾದ ಮೇಲೆ ವೈದ್ಯರ ನೆರವು ಪಡೆದು ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದರು. ಶೋಭಾ ಅವರ ಬ್ಯಾಗಿನಲ್ಲಿ ಸದಾಕಾಲ ಜೀವನ ಮೌಲ್ಯ ಹೆಚ್ಚಿಸುವ ವಿಷಯಗಳ ಕುರಿತ ಪುಸ್ತಕಗಳಿರುತ್ತಿತ್ತು. ಆದರೆ, ಇಲ್ಲಿ ತನಕ ಆತ್ಮಹತ್ಯೆ ಪತ್ರವಾಗಲಿ, ಸೂಸೈಡ್ ಬಗ್ಗೆ ಬಲವಾಗಿ ಹೇಳಿಕೆ ನೀಡಿದ್ದಾಗಲಿ ತಿಳಿದು ಬಂದಿಲ್ಲ.

English summary
Preliminary inquiries revealed that Shobha was having a dispute with her relatives over property, which is in court, and was under depression. She was consulting a psychiatrist, police said, quoting family sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X