ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ತೆರಿಗೆ ಬಾಕಿ ಕಟ್ಟಲು ಮೇಯರ್ ಡೆಡ್ ಲೈನ್

|
Google Oneindia Kannada News

ಬೆಂಗಳೂರು. ನ. 25: ತೆರಿಗೆ ಬಾಕಿ ಇಟ್ಟುಕೊಂಡಿರುವ ವಿವಿಧ ಖಾಸಗಿ ಕಂಪನಿಗಳಿಗೆ ಮೇಯರ್ ಶಾಂತಕುಮಾರಿ 15 ದಿನಗಳ ಡೆಡ್ ಲೈನ್ ನೀಡಿದ್ದಾರೆ. ನಿಗದಿತ ಅವಧಿಯಲ್ಲಿ ತೆರಿಗೆ ಕಟ್ಟದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ತೆರಿಗೆ ಬಾಕಿ ಇಟ್ಟುಕೊಂಡಿದ್ದ ತಿಪ್ಪಸಂದ್ರ ವಾರ್ಡ್ ನಲ್ಲಿರುವ ಬಾಗ್ಮನೆ ಡೆವಲಪರ್ಸ್ ಗೆ ಮೇಯರ್ ಮಂಗಳವಾರ ದಿಢೀರ್ ಭೇಟಿ ನೀಡಿದರು. ಈ ವೇಳೆ ಕಂಪನಿ ಅಧಿಕಾರಿಗಳು ಬಾಕಿ ಇಟ್ಟುಕೊಂಡಿದ್ದ 11 ಕೋಟಿ 60 ಲಕ್ಷ ರೂಪಾಯಿಗಳನ್ನು ಸ್ಥಳದಲ್ಲೇ ಪಾವತಿಸಿದರು.[ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?]

mayor

ಕಳೆದ ವರ್ಷವೇ ತೆರಿಗೆ ನೀಡಬೇಕಿತ್ತು. ಆದರೆ ಕೆಲ ಗೊಂದಲಗಳ ಹಿನ್ನೆಲೆಯಲ್ಲಿ ಕಂಪನಿ ಈ ವರ್ಷ ತುಂಬಿದೆ ಎಂದು ಶಾಂತಕುಮಾರಿ ತಿಳಿಸಿದರು. ಉಳಿದ ಕಂಪನಿಗಳಿಗೂ ಇದೊಂದು ಪಾಠವಾಗಬೇಕು, ಹೀಗೆ ಮುಂದುವರಿದರೆ ಮಾನ್ಯತೆ ರದ್ದು ಮಾಡಲು ಚಿಂತಿಸಲಾಗುವುದು. ಅಲ್ಲದೇ ಬಾಕಿ ಇಟ್ಟುಕೊಂಡವರಿಗೆ ನೊಟೀಸ್ ನೀಡಲಾಗಿದೆ ಎಂದು ತಿಳಿಸಿದರು.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್ ಮಾತನಾಡಿ, ಬಿಬಿಎಂಪಿಗೆ ಪ್ರತಿಯೊಂದು ಕಂಪನಿಗಳು ಖುದ್ದಾಗಿ ಬಾಕಿ ಹಣ ಕಟ್ಟಬೇಕು. ಡಿ. 15ರ ಗಡುವು ನೀ‌ಡಲಾಗಿದೆ. ಅಲ್ಲದೇ ಇ ತೆರಿಗೆ ಪಾವತಿ ವಿಧಾನವೂ ಜಾರಿಗೆ ಬರಲಿದ್ದು ಅಷ್ಟರೊಳಗೆ ಹಣ ಕಟ್ಟದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಹೇಳಿದರು. ಕಂದಾಯ ಉಲಾಖೆ ಉಪ ಆಯುಕ್ತ ವೆಂಕಟಾಚಲಪತಿ ಮತ್ತು ಸ್ಥಾಯಿ ಸಮಿತಿ ಸದಸ್ಯರು ಹಾಜರಿದ್ದರು.[ಬೆಂಗಳೂರಿಗರೇ ಸಮಸ್ಯೆಯೇ 22660000 ಕರೆ ಮಾಡಿ]

ಬಾಕಿ ಉಳಿಸಿಕೊಂಡಿರುವ ಪ್ರಮುಖ ಕಂಪನಿಗಳು
ಮೀನಾಕ್ಷಿ ಮಾಲ್: 1.78 ಕೋಟಿ ರೂ.
ಹರಿಶ್ಚಂದ್ರ ಶೆಟ್ಟಿ: 1.17 ಕೋಟಿ ರೂ.
ಬೆಂಗಳೂರು ಡೆವಲಪರ್ಸ್: 1.04 ಕೋಟಿ ರೂ.

English summary
Bengaluru: Mayor Shantakumari gave a strong statement towards BBMP Tax arrears and she also gave 15 days dead line to fulfill all kind of property taxes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X