ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅಶ್ಲೀಲ ಮಂತ್ರಿ' ಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ: ಪುಟ್ಟಣ್ಣ

ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿಧಾನಸೌಧದ ತನ್ವೀರ್ ಕಚೇರಿಗೆ ಬೀಗ ಜಡಿದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರ

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್, 11 ; ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿಧಾನಸೌಧದ ತನ್ವೀರ್ ಕಚೇರಿಗೆ ಬೀಗ ಜಡಿದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ತನ್ವೀರ್ ಸೇಠ್ ಕಚೇರಿ ಮುಂದೆ ಚಾಪೆ ದಿಂಬು ಇಟ್ಟುಕೊಂಡು ಸಂಜೆ ಐದು ಗಂಟೆ ವರೆಗೆ ಧರಣಿ ಕೂರುವುದಾಗಿ ಪುಟ್ಟಣ ತಿಳಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು" ಇಂತಹ ಶಿಕ್ಷಣ ಸಚಿವರನ್ನು ನಾವು ನೋಡೇ ಇಲ್ಲ, ನಮಗೆ ಅಶ್ಲೀಲ ಮಂತ್ರಿಯ ಅಗತ್ಯವಿಲ್ಲ. ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ, ರಾಜೀನಾಮೆ ನೀಡುವವರೆಗೂ ತನ್ವೀರ್ ಸೇಠ್ ಕಚೇರಿಗೆ ದಿನಕ್ಕೊಂದು ಬೀಗ ಜಡಿದು ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.[ಟಿಪ್ಪು ವೇದಿಕೆಯಲ್ಲೇ ಅರೆ ನಗ್ನ ಚಿತ್ರ ವೀಕ್ಷಿಸಿದ ತನ್ವೀರ್]

puttanna

ವಿಧಾನ ಸೌಧದ ತನ್ವೀರ್ ಸೇಠ್ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರೊಂದಿಗೆ ಜೊತೆಯಾದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಶಿಕ್ಷಣ ಸಚಿವ ತನ್ವೀರ್, ಶಿಕ್ಷಣ ಇಲಾಖೆ ಆಯುಕ್ತ ಅಜಯ್ ಸೇಠ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಕ್ಷಣ ಸಿಎಂ ಸಚಿವರ ರಾಜಿನಾಮೆ ಪಡೆಯಬೇಕು. ಕಳೆದ ಮೂರುವರೆ ವರ್ಷಗಳಲ್ಲಿ ಇವರಿಂದ ಯಾವ ಅಭಿವೃದ್ಧಿ ಕಲೆಸಗಳಾಗಿಲ್ಲ ಎಂದಿದ್ದಾರೆ. ಅಜಯ್ ಸೇಠ್ ಅಧಿಕಾರಕ್ಕೆ ಬಂದ ಮೇಲೆ ದಿನಕ್ಕೆ ಮೂರು ಫೈಲ್ ಪಾಸ್ ಆದ ಉದಾಹರಣೆಗಳಿಲ್ಲ, ಸಚಿವರು ರಾಜಿನಾಮೆ ಕೊಡದೇ ಇದ್ರೆ ರಾಜಿನಾಮೆ ಕೊಡಬೇಕಾದ ವಾತಾವರಣ ಸೃಷ್ಟಿ ಮಾಡಬೇಕಾಗುತ್ತದೆ. ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಸ್ವರೂಫದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.[ತನ್ವೀರ್ ಅರೆನಗ್ನ ಚಿತ್ರ ವೀಕ್ಷಣೆ, ಸಿದ್ದರಾಮಯ್ಯ, ಪರಂ ಗರಂ]

puttnna 2

ಇನ್ನು ಪ್ರತಿಭಟನೆಯಲ್ಲಿ ಅನುದಾನಿತ ಶಾಲಾ ಶಿಕ್ಷಕರ ಸಂಘಟನೆ ಭಾಗಿಯಾಗಿದ್ದು 15 ಕ್ಕೂ ಹೆಚ್ಚು ಶಿಕ್ಷಕರು ಅರೆ ನಗ್ನ ಚಿತ್ರ ವೀಕ್ಷಿಸುತ್ತಿದ್ದ ತನ್ವೀರ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಪ್ರತಿಭಟನೆಯಲ್ಲಿ ಅವರ ವಿರುದ್ಧ ಘೋಷಣೆಯನ್ನೂ ಕೂಗಿದ್ದಾರೆ.

English summary
Tanveer sait Semi-nude video case Jds and Mlc puttanna potest agenest tanveer, and lock his office in vidhana soudha bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X