ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಪುಸ್ತಕ ಕೇಳಿದ ಬಡ ಪಾಲಕರಿಗೆ ಸಿಕ್ಕಿದ್ದು ಜೈಲೂಟ!

By ಮೈತ್ರೇಯಿ ಬರುವಾ
|
Google Oneindia Kannada News

ಬೆಂಗಳೂರು, ಜುಲೈ, 02: ಎಲ್ಲ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಅದರೊಂದಿಗೆ ಗೊಂದಲಗಳು ಹುಟ್ಟಿಕೊಂಡಿವೆ. ಖಾಸಗಿ ಶಾಲೆಯೊಂದರ ವಿರುದ್ಧ ಪ್ರತಿಭಟನೆಯ ಹೋರಾಟ ಆರಂಭಿಸಿದ ಬಡ ಪಾಲಕರಿಬ್ಬರು ಜೈಲು ಸೇರಿದ ಕಥೆಯೂ ಇಲ್ಲಿದೆ.

ಶುಲ್ಕ, ಡೊನೇಶನ್ ಬಗ್ಗೆ ಹೇಳಲೇಬೇಕಾಗಿಲ್ಲ. ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಓದಿಸುವುದು ಅಂದರೆ ದುಡ್ಡಿನ ಮರವನ್ನೆ ನೆಡಬೇಕಾಗುತ್ತದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್ ಟಿಇ) ಬಂದಿದ್ದರೂ ಸಹ ಪಾಲಕರ ಗೋಳಿಗೆ ಮಾತ್ರ ಕೊನೆಯಿಲ್ಲ.['ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಗಳಿಗಿಂತ ಕಡೆ']

bengaluru

ಬೆಂಗಳೂರಿನ ಖಾಸಗಿ ಶಾಲೆಯೊಂದರ ವಿರುದ್ಧ ಪಾಲಕರಿಬ್ಬರು ತಿರುಗಿ ಬಿದ್ದಿದ್ದಾರೆ. ಆದರೆ ಅವರ ಮೇಲೆಯೇ ಆಡಳಿತ ಮಂಡಳೀ ಆರೋಪ ಹೊರಿಸಿದ್ದು ಜೈಲಿಗೆ ಕಳುಹಿಸಿದೆ. ಸುರೇಶ್ ಕುಮಾರ್ (50) ಮತ್ತು ಕೆಂಪೇಗೌಡ (38) ಹೋರಾಟಕ್ಕೆ ಮುಂದಾಗಿ ಪರಪ್ಪನ ಅಗ್ರಹಾರದಲ್ಲಿ ಎರಡು ದಿನ ಕಳೆದ ಪಾಲಕರು.

ಕುರುಬರಹಳ್ಳಿಯ ಸಂಥ ಅಂಥೋಣಿ ಶಾಲೆ ಆಡಳಿತ ಮಂಡಳಿ ದಾಖಲಿಸಿದ ದೂರನ್ನು ಆಧರಿಸಿ ಪೊಲೀಸರು ಪಾಲಕರಿಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.[ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಎಂದರೇನು]

ಆದದ್ದೇನು?
ಶಾಲೆಯ ಶುಲ್ಕ ನೀತಿ ಮತ್ತು ಆರ್ ಟಿ ಇ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದುದನ್ನು ವಿರೋಧಿಸಿ ಶಾಲೆಯ ವಿರುದ್ಧ ಜೂನ್ 15 ರಂದು ಸುರೇಶ್ ಕುಮಾರ್ (50) ಮತ್ತು ನೊಂದ ಪಾಲಕರು ಪ್ರತಿಭಟನೆ ನಡೆಸಿದ್ದರು. ಆದರೆ ಶಾಲೆಯ ಮಹಿಳಾ ಸಿಬ್ಬಂದಿ ಮೇಲೆ ಸುರೇಶ್ ಕುಮಾರ್ ದೌರ್ಜನ್ಯ ನಡೆಸಲು ಮುಂದಾಗಿದ್ದರು ಎಂದು ಆಡಳಿತ ಮಂಡಳಿ ದೂರು ದಾಖಲು ಮಾಡಿತ್ತು.

ಈ ಬಗ್ಗೆ ಒನ್ ಇಂಡಿಯಾದೊಂದಿಗೆ ಮಾತನಾಡಿರುವ ಆರ್ ಟಿ ಇ ಟಾಸ್ಕ್ ಫೋರ್ಸ್ ನ ನಾಗಸಿಂಹ ಜಿ ರಾವ್, ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಪಾಲಕರು ಪ್ರತಿಭಟನೆ ಮಾಡಿದ್ದರು. ಬಡ ಮಕ್ಕಳು ಪುಸ್ತಕ ಮತ್ತು ಸಮವಸ್ತ್ರವನ್ನು ಇನ್ನು ಪಡೆದುಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು ಎಂದು ಹೇಳಿದ್ದಾರೆ.[ಸೋರುತಿಹುದು ಮಚ್ಚರೆ ಶಾಲೆಯ ಮಾಳಿಗೆ, ಪಾಠ ಮಾಡುವುದು ಹೇಗೆ?]

ಏಪ್ರಿಲ್ 1, 2010 ರಿಂದ ಜಾರಿಯಾದ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಶಾಲೆಯಲ್ಲಿ ಶೇ. 25 ರಷ್ಟು ಸೀಟನ್ನು ಸ್ಥಳೀಯರಿಗೆ ಕಾಯ್ದಿರಿಸಬೇಕು.

" ಆರ್ ಟಿಇ ಅಡಿಯಲ್ಲಿ ದಾಖಲಾತಿ ಪಡೆದ ನನ್ನ ಮಗಳು ಕ್ಲಾಸ್ 3 ಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಆದರೆ ಇನ್ನು ಪುಸ್ತಕ ಮತ್ತು ಸಮವಸ್ತ್ರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಕಳೆದ ವರ್ಷ ಸಹ ಆಕೆಗೆ ಪುಸ್ತಕ ಮತ್ತು ಸಮವಸ್ತ್ರ ಲಭ್ಯವಾಗಿರಲಿಲ್ಲ. ಇದೆಲ್ಲವನ್ನು ಖಂಡಿಸಿ ಸುಮಾರು 40 ಜನ ಪಾಲಕರು ಜೂನ್ 15 ರಂದು ಶಾಲೆ ಎದುರುನ ಪ್ರತಿಭಟನೆ ನಡೆಸಿದ್ದೇವು ಎಂದು ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸುರೇಶ್ ಕುಮಾರ್ ಹೇಳುತ್ತಾರೆ.

ಮಕ್ಕಳ ತಾಯಂದಿರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಾವೂ ಯಾರೊಂದಿಗೂ ಅನುಚಿತವಾಗಿ ನಡೆದುಕೊಂಡಿಲ್ಲ. ನಾವು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು 'ಸಮಸ್ಯೆ ಬಗೆಹರಿಸುತ್ತೇವೆ ನೀವು ಸ್ಥಳ ಬಿಟ್ಟು ತೆರಳಿ' ಎಂದು ಹೇಳಿದರು.

ನಂತರ ನನಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬರಲು ಸೂಚನೆ ನೀಡಲಾಯಿತು. ಅಲ್ಲಿಗೆ ತೆರಳಿದ ನಾನು ಮತ್ತು ನನ್ನ ಸ್ನೇಹಿತ ಕೆಂಪೇಗೌಡ ಇಬ್ಬರನ್ನು ಬಂಧಿಸಲಾಯಿತು" ಎಂದು ಸುರೇಶ್ ಕುಮಾರ್ ಘಟನೆಯ ವಿವರ ಬಿಚ್ಚಿಡುತ್ತಾರೆ.

ನನ್ನ ಮಕ್ಕಳು ಸಹ ಬೇರೆ ಶಾಲೆಯಲ್ಲಿ ಆರ್ ಟಿಇ ಅಡಿ ಪ್ರವೇಶ ಪಡೆದಿದ್ದು ಇದೇ ಬಗೆಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕೆಂಪೇಗೌಡ ಹೇಳುತ್ತಾರೆ.

ಕಾನೂನಿನ ಅನ್ವಯ ಶಾಲೆ ಮಕ್ಕಳಿಗೆ ಉಚಿತವಾಗಿ ಪುಸ್ತಕ ಮತ್ತು ಸಮವಸ್ತ್ರ ನೀಡಬೇಕು. ಗ್ರಂಥಾಲಯ ಸೇರಿದಂತೆ ಉಳಿದ ಎಲ್ಲ ಸೌಲಭ್ಯ ನೀಡಬೇಕು. ಆದರೆ ಅದ್ಯಾವುದೂ ಆಗುತ್ತಿಲ್ಲ ಎಂದು ನೊಂದ ಪಾಲಕರು ಹೇಳುತ್ತಾರೆ. ಆದರೆ ಈ ಎಲ್ಲ ಆರೋಪಗಳಿಗೆ ಸಂಥ ಅಂಥೋಣಿ ಶಾಲೆ ಮಂಡಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

English summary
In recent times, the Bengaluru has witnessed several protests staged by various parents' groups against the steep rise in fees announced by private schools for the academic session of 2016-2017. In one such instance two parents-Suresh Kumar (50) and Kempe Gowda (38)-were arrested by the police after they staged a protest in front of a private school in the city on June 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X