ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯೋತ್ಸವಕ್ಕೆ 'ಸ್ವಲ್ಪ ಕನ್ನಡ ಬರುತ್ತೆ' ವಾಟ್ಸ್ ಅಪ್ ಗ್ರೂಪ್

By ಶ್ರೀಶೈಲ್ ದೇಗಿನಾಳ
|
Google Oneindia Kannada News

ಬೆಂಗಳೂರು, ಡಿಸೆಂಬರ್ 26: ಇದೊಂದು ವಿಶಿಷ್ಟ ಕಾರ್ಯಕ್ರಮ. ಎಂಥವರಿಗೂ ಹೆಮ್ಮೆ ಮೂಡಿಸುವಂಥದ್ದು. ಅದೇನು ಕಾರ್ಯಕ್ರಮ ಅಂತೀರಾ? ಬೆಂಗಳೂರಿನ ಹ್ಯಾಪಿಯೆಸ್ಟ್ ಮೈಂಡ್ಸ್ ಕಂಪನಿಯಲ್ಲಿ ಈಚೆಗೆ ಕನ್ನಡ ರಾಜ್ಯೋತ್ಸವ ಆಚರಿಸಿದ್ದೇವೆ. ಆಚರಣೆ ರೀತಿಯೇ ವಿಶಿಷ್ಟವಾಗಿತ್ತು. ಕನ್ನಡಿಗರು-ಕನ್ನಡೇತರರು ಸೇರಿ ಆಚರಿಸಿದ ಹಬ್ಬದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮ ಮಾಡಿದ್ದೆವು. ಅದರಲ್ಲಿ ಇನ್ನೂರೈವತ್ತು ಮಂದಿ ಭಾಗವಹಿಸಿದ್ದರು. ಇನ್ನು ವೇಷ-ಭೂಷಣ ಸ್ಪರ್ಧೆ ಅಂತ ಮಾಡಿ, ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ವಿಶ್ವೇಶ್ವರಯ್ಯ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡ, ಒನಕೆ ಓಬವ್ವ ಮುಂತಾದ ಮಹನೀಯರ ವೇಷ ಧರಿಸಿದ್ದರು. ಅಷ್ಟೇ ಅಲ್ಲ, ಈ ಮಹನೀಯರ ಕೊಡುಗೆಯನ್ನು ತಿಳಿಸಲಾಯಿತು. 'ಕನ್ನಡ ಸ್ವಲ್ಪ ಬರುತ್ತೆ' ಎಂದು ಹೆಸರಿಟ್ಟು, ವಾಟ್ಸಪ್ ಗುಂಪೊಂದನ್ನು ಮಾಡಲಾಯಿತು.[ಕತಾರ್ ರಾಜ್ಯೋತ್ಸವಕ್ಕೆ ರಂಗು ತಂದ ರಂಗೇಗೌಡ, ಶಿವಣ್ಣ]

'Swalpa Kannada Barutte' whats up group on Kannada Rajyotsava

ನಾಡಗೀತೆ ಹಾಡುವ ಸ್ಪರ್ಧೆ, ನೃತ್ಯ, ಬಬ್ರುವಾಹನ ಸಿನಿಮಾ ಸಂಭಾಷಣೆ ಹೇಳುವ ಸ್ಪರ್ಧೆ, ಒಂದು ನಿಮಿಷಗಳ ಕಾಲ ಕರ್ನಾಟಕದ ವಿವಿಧೆಡೆ ಮಾತನಾಡುವ ಕನ್ನಡ ಶೈಲಿಯಲ್ಲಿ ಸಂಭಾಷಣೆ ಹೇಳೋದು, ಹಾಸ್ಯ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಯಿತು.

English summary
Kannada Rajyotsava celebrated recently in Happiest mind company in Bengaluru.'Swalpa Kannada Barutte' whats up group also started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X