ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ್ ಭಾರತ್ ಅಭಿಯಾನ ದೇಶದ ಅತಿ ದೊಡ್ಡ ಹಗರಣ: ಕೆಸಿ ವೇಣುಗೋಪಾಲ್

|
Google Oneindia Kannada News

ಬೆಂಗಳೂರು, ಮೇ 27: ಸ್ವಚ್ಛ ಭಾರತ ಅಭಿಯಾನ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ. ಆದರೆ ಇದರಲ್ಲಿ ಭಾರೀ ಹಗರಣ ನಡೆದಿದೆ ಎಂದು ಎಐಸಿಸಿಸ್ ಪ್ರಧಾನ ಕಾರ್ಯದರ್ಶಿ (ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ) ಕೆಸಿ ವೇಣುಗೋಪಾಲ್ ಆರೋಪ ಆಡಿದ್ದಾರೆ. ಈ ಹಿಂದೆ ದೇಶದಲ್ಲಿ ನಡೆದ ಇತರ ಹಗರಣಗಳಿಗಿಂತ ಇದು ದೊಡ್ಡದು ಎಂದು ಆರೋಪಿಸಿದ್ದಾರೆ.

ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಕೋಟ್ಯಂತರ ರುಪಾಯಿ ಹಣ ಮೀಸಲಿಟ್ಟಿದೆ. ಆದರೆ ಲಕ್ಷಾಂತರ ಶೌಚಾಲಯಗಳ ನಿರ್ಮಾಣವಾಗಿವೆ ಎಂಬುದು ಕಾಗದದ ಮೇಲೆ ಮಾತ್ರ ಇದೆ. ನಾವು ಶೌಚಾಲಯಗಳನ್ನು ನಿರ್ಮಿಸಿದ್ದೇವೆ ಎಂದು ಕೇಂದ್ರ ಹೇಳುತ್ತಿದ್ದರೆ, ಆ ಪೈಕಿ ಹಲವು ರಾತ್ರೋರಾತ್ರಿ ಕಣ್ಮರೆಯಾಗಿವೆ ಎಂದರು.[ಮೈಸೂರಲ್ಲಿ ಶತಾಯುಷಿ ಬೋರಜ್ಜಿಯ ಶೌಚಾಲಯ ಅಭಿಯಾನ...!]

Swachh Bharat is among the biggest scams: K C Venugopal

ಅಂಥ ಘಟನೆ ಕೇರಳದ ಅಲಪುಳದಲ್ಲಿ ಹಲವು ನಡೆದಿವೆ. ಕೇಂದ್ರ ಸರಕಾರ ಹೇಳಿಕೊಳ್ಳುತ್ತಿರುವ ಶೌಚಾಲಯಗಳಲ್ಲಿ ಪೈಕಿ ಎಷ್ಟು ನಿರ್ಮಾಣವಾಗಿವೆ ಹಾಗೂ ಕಣ್ಮರೆಯಾಗಿವೆ ಎಂಬುದನ್ನು ನನ್ನ ಕ್ಷೇತ್ರದಲ್ಲೇ ತೋರಿಸ್ತೀನಿ. ಈ ಯೋಜನೆಯ ಅನುಷ್ಠಾನದ ಬಗ್ಗೆ ಉತ್ತರದಾಯಿತ್ವವೇ ಇಲ್ಲ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.

English summary
Although it has been projected as one of the Centre's flagship schemes, the Congress claimed Swachh Bharat Mission was a "scam". AICC general secretary (Karnataka in-charge) K C Venugopal on Friday said the scheme was bigger than some of the biggest scams the country had witnessed in the recent past.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X