ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೆಮನ್ ನಲ್ಲಿ ಸಿಲುಕಿದ ಪೀಣ್ಯ ರವಿಗಾಗಿ ಉದ್ಯಮ ಬಂದ್

By Mahesh
|
Google Oneindia Kannada News

ಬೆಂಗಳೂರು, ಏ.3: ಯುದ್ಧಪೀಡಿತ ಯೆಮನ್ ನಲ್ಲಿ ಸಿಲುಕಿರುವ ಬೆಂಗಳೂರಿನ ಪೀಣ್ಯ ಉದ್ಯಮಿ ರವಿಕುಮಾರ್ ಅವರನ್ನು ವಾಪಸ್ ಕರೆ ತರಲು ಸರ್ಕಾರ ವಿಳಂಬ ಮಾಡುತ್ತಿದೆ ಏಕೆ? ಎಂದು ಪ್ರಶ್ನಿಸಿ ಪೀಣ್ಯ ಕೈಗಾರಿಕಾ ಘಟಕ ಸಂಪೂರ್ಣ್ ಬಂದ್ ಆಚರಿಸಿದೆ.

ಸುಮಾರು 8,500ಕ್ಕೂ ಅಧಿಕ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕಾ ಘಟಕಗಳು ಗುರುವಾರ ಸಂಪೂರ್ಣ ಬಂದ್ ಆಚರಿಸಿವೆ. ರವಿ ಅವರ ಸುರಕ್ಷತೆಗಾಗಿ ಆಗ್ರಹಿಸಿ ಮೇಣದ ಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. [ಭಾರತಕ್ಕೆ ಹಿಂದಿರುಗಿದ 349 ಜನ ಸಂತ್ರಸ್ತರು]

ಪೀಣ್ಯದ ಟ್ರಿನಿಟಿ ಎನ್ ಡಿಟಿ ಇಂಜಿನಿಯರ್ಸ್ ಸಂಸ್ಥೆಯ ಸಿಇಒ ರವಿ ಕುಮಾರ್ ಅವರು ಮಾ.12ರಂದು ಯೆಮನ್ ನ ಸನಾ ಸಿಟಿಗೆ ತೆರಳಿದ್ದರು. ಸಂಸ್ಥೆಗೆ ಬೇಕಿದ್ದ ಅಗತ್ಯ ತಾಂತ್ರಿಕ ನೆರವು ಹಾಗೂ ತರಬೇತಿಯನ್ನು ಪಡೆದುಕೊಂಡ ರವಿ ಅವರು ಮಾ.26ಕ್ಕೆ ಬೆಂಗಳೂರಿಗೆ ಹಿಂತಿರುಗಬೇಕಿತ್ತು.

ಅದರೆ, ಷಿಯಾ ಹಾಗೂ ಸುನ್ನಿ ಪಂಗಡದ ಕಾದಾಟದಿಂದ ಯೆಮನ್ ಹೊತ್ತಿ ಉರಿಯ ತೊಡಗಿದ್ದರಿಂದ ಸೂಕ್ತ ನೆರವು ಸಿಗದೆ ರವಿ ಪರದಾಟ ನಡೆಸಬೇಕಾಗಿದೆ. [ಭಾರತೀಯರೇ ಹೆದರದಿರಿ, ಏರ್ ಇಂಡಿಯಾ ಬರ್ತಾ ಇದೆ!]

DK Ravi

ರವಿ ಅವರಿಗೆ ಸೂಕ್ತ ನೆರವು ನೀಡಿ ಆದಷ್ಟು ಬೇಗ ಅವರನ್ನು ಬೆಂಗಳೂರಿಗೆ ಕರೆ ತರುವಂತೆ ಆಗ್ರಹಿಸಿ ಪೀಣ್ಯ ಕೈಗಾರಿಕಾ ಅಸೋಸಿಯೇಷನ್ ನ ಅಧ್ಯಕ್ಷ ಡಿಟಿ ವೆಂಕಟೇಶ್ ಅವರು ಕೇಂದ್ರ ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ ಅವರಲ್ಲಿ ಮನವಿ ಮಾಡಿದ್ದಾರೆ.

ಸದ್ಯದ ಲೆಕ್ಕಾಚಾರ ಪ್ರಕಾರ ಸುಮಾರು 349 ಭಾರತೀಯ ನಾಗರೀಕರ ಪೈಕಿ 190 ಜನರನ್ನು ಏರ್ ಫೋರ್ಸ್ ಸಿ17 ಏರ್ ಕ್ರಾಫ್ಟ್ ಮೂಲಕ ಜಿಬೌತಿಯಿಂದ ಮುಂಬೈಗೆ ಕರೆ ತರಲಾಗಿದೆ. [ಯಪ್ಪಾ! ಇದು ಯಾವ ರೀತಿ ವಧುದಕ್ಷಿಣೆ]

Support for Industrialist Ravi kumar Peenya industrial area bandh

ಅದರೆ, ಇನ್ನೂ ಸನಾ ನಗರದಲ್ಲೇ ಇರುವ ರವಿ ಅವರು ತಮ್ಮ ಸೋದರ ಶಿವಕುಮಾರ್ ಜೊತೆ ಮಾತನಾಡಿ, ಸನಾ ನಗರದ ಪರಿಸ್ಥಿತಿ ಕ್ಷಣ ಕ್ಷಣ ಬದಲಾಗುತ್ತಿದೆ. ಭಾರತೀಯ ವಿಮಾನ ಹಾರಾಟಕ್ಕೆ ನೀಡಿರುವ ಅವಧಿ ಸಾಲುತ್ತಿಲ್ಲ ಎಂದಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ತಮ್ಮ ರಾಜ್ಯದವರ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲ ಎಂದು ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಹಾಗೂ ಕೈಗಾರಿಕೆ ಫೆಡರೇಷನ್ ನ ಮಾಜಿ ಅಧ್ಯಕ್ಷ ಜೆ ಕ್ರಾಸ್ಟಾ ದೂರಿದ್ದಾರೆ. ಒಟ್ಟಾರೆ, ರವಿ ಅವರ ಆಗಮನಕ್ಕಾಗಿ ಪೀಣ್ಯ ಜನತೆ ಕಾದಿದ್ದಾರೆ.

English summary
Peenya industrial area in Bengaluru observed total bandh on Thursday(Apr.2) in support of Industrialist Ravi kumar who is struck in worn torn Yemen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X