ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಖೋಯ್ ಸಾಹಸವನ್ನು ಪತ್ನಿಗೆ ಸಮರ್ಪಿಸಿದ ಪೈಲೆಟ್!

By ಡಾ.ಅನಂತ ಕೃಷ್ಣನ್
|
Google Oneindia Kannada News

ಬೆಂಗಳೂರು, ಜುಲೈ 01 : 'ಈ ಸಾಹಸ ನನ್ನ ಪತ್ನಿಗೆ ಸಮರ್ಪಣೆ. ನನ್ನ ಈ ಸಾಧನೆ ನೋಡಿದ್ದರೆ ಅವಳು ಅತ್ಯಂತ ಸಂತೋಷ ಪಡುತ್ತಿದ್ದಳು. ಇದು ನನ್ನ ಜೀವನದ ಅತ್ಯಮೂಲ್ಯ ಘಳಿಗೆ' ಇದು ವಿಂಗ್‌ ಕಮಾಂಡರ್‌ ಪ್ರಶಾಂತ್‌ ನಾಯರ್‌ ಅವರ ಮಾತುಗಳು.

ಜೂನ್ 25 ಭಾರತೀಯ ಸೇನಾ ಪಡೆ ಪಾಲಿಗೆ ಮಹತ್ವದ ದಿನ. ನಾಸಿಕ್ ವಿಮಾನ ನಿಲ್ದಾಣದಲ್ಲಿ ಅಂದು ಬ್ರಹ್ಮೋಸ್ ಕ್ಷಿಪಣಿಯನ್ನು ಹೊತ್ತ ಸುಖೋಯ್ -30 ಯುದ್ಧ ವಿಮಾನ ಸುಮಾರು 45 ನಿಮಿಷಗಳ ಪ್ರಾಯೋಗಿಕ ಹಾರಾಟ ನಡೆಸಿತು. ಅದು ಯಶಸ್ವಿಯೂ ಆಯಿತು. [ಶಿವಮೊಗ್ಗದ ರಾಜಾರಾಮ್ ಆಗಸದಲ್ಲಿ ಹಾರಿದ ಕಥೆ]

sukhoi mki 30

ಕ್ಷಿಪಣಿ ಹೊತ್ತ ಸುಖೋಯ್ ವಿಮಾನ ಹಾರಿಸಿದ್ದು ವಿಂಗ್‌ ಕಮಾಂಡರ್‌ ಪ್ರಶಾಂತ್‌ ನಾಯರ್‌ ಮತ್ತು ಎಂ.ಎಸ್‌. ರಾಜು. ಯಶಸ್ವಿಯಾಗಿ ವಿಮಾನ ಹಾರಿಸಿದ ಬಳಿಕ ಪ್ರಶಾಂತ್‌ ನಾಯರ್‌ ತಮ್ಮ ಅನುಭವನ್ನು ಹಂಚಿಕೊಂಡರು. ಈ ಸಾಹಸವನ್ನು ತಮ್ಮ ಪತ್ನಿಗೆ ಸಮರ್ಪಿಸಿದರು. [ಹಾದಿ ತಪ್ಪಿದ ನಿರ್ಭಯ್ ಕ್ಷಿಪಣಿ, ಪರೀಕ್ಷೆಯಲ್ಲಿ ಫೇಲ್!]

ಪ್ರಶಾಂತ್‌ ನಾಯರ್‌ 2014ರಲ್ಲಿ ಪತ್ನಿ ಡಾ.ರೇಖಾ ಅವರನ್ನು ಕಳೆದುಕೊಂಡರು, ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಪ್ರಶಾಂತ್ ಮತ್ತು ರೇಖಾ ದಂಪತಿಗೆ ಪ್ರಶಾಂತಿ ಎಂಬ ಮುದ್ದಾದ ಮಗುವಿದೆ. ಜೂನ್ 25ರಂದು ಐತಿಹಾಸಿಕ ಸಾಧನೆ ಮಾಡಿದ ಪ್ರಶಾಂತ್ ಪತ್ನಿಯನ್ನು ನೆನೆಪು ಮಾಡಿಕೊಂಡರು. [ಇನ್ಮುಂದೆ ಭಾರತೀಯ ವಾಯುಸೇನೆಯಲ್ಲಿ 'ನಾರಿ ಶಕ್ತಿ']

ಭಾರತೀಯ ವಾಯುಪಡೆಯ ಬೆಂಗಳೂರು ವಿಭಾಗದಿಂದ ಪ್ರಶಾಂತ್‌ ನಾಯರ್‌ ಮತ್ತು ಎಂ.ಎಸ್‌. ರಾಜು ಅವರನ್ನು ವಾಯುಪಡೆಯ ಏರ್‌ಕ್ರಾಫ್ಟ್ ಅಂಡ್ ಸಿಸ್ಟಮ್ಸ ಟೆಸ್ಟಿಂಗ್ ಎಸ್ಟ್ಯಾಬ್ಲಿಷ್‌ಮೆಂಟ್ (ಎಎಸ್‌ಟಿಇ) ವಿಭಾಗಕ್ಕೆ ಟೆಸ್ಟ್ ಪೈಲೆಟ್‌ಗಳಾಗಿ ಕಳಿಸಲಾಗಿತ್ತು. [ಹೆಚ್ಚಿತು ಭಾರತೀಯ ವಾಯು ಸೇನೆಯ 'ತೇಜಸ್ಸು']

ಕೆಲಸದ ಮೇಲೆ ಗಮನ ವಿಟ್ಟಿದ್ದ ಪ್ರಶಾಂತ್ : ಪತ್ನಿಯ ಸಾವಿನ ದುಃಖವಿದ್ದರೂ ಪ್ರಶಾಂತ್ ಕೆಲಸದ ಮೇಲೆ ಹೆಚ್ಚು ಗಮನ ನೀಡಿದ್ದರು. 'ಅವನು ಪೈಲೆಟ್ ಎಂಬುದು ಮಾತ್ರ ಗೊತ್ತಿತ್ತು. ಆದರೆ, ಈ ಯೋಜನೆ ಏನು? ಎಂಬುದು ನಮಗೆ ಕೊನೆ ಕ್ಷಣದ ತನಕ ತಿಳಿದಿರಲಿಲ್ಲ. ಪತ್ನಿಯ ಸಾವಿನ ದುಃಖ ಕಾಣಿಸಿದಂತೆ ಪ್ರಶಾಂತ್ ಕೆಲಸದಲ್ಲಿ ಮಗ್ನರಾಗಿದ್ದರು' ಎನ್ನುತ್ತಾರೆ ಕುಟುಂಬ ಸ್ನೇಹಿತರಾದ ಆರ್.ರಾಜೇಶ್ ಕುಮಾರ್.

ವಿಮಾನ ಹೋದರೆ ತಲೆ ಎತ್ತಿ ನೋಡುತ್ತಿದ್ದರು : 'ದೊಮ್ಮಲೂರಿನ ಬಳಿ ಕ್ರಿಕೆಟ್ ಮತ್ತು ಫುಟ್‌ ಬಾಲ್ ಆಡುತ್ತಿದ್ದೆವು. ತಲೆಯ ಮೇಲೆ ವಿಮಾನ ಹಾರಿ ಹೋದ ತಕ್ಷಣ ಪ್ರಶಾಂತ್ ತಲೆ ಎತ್ತಿ ನೋಡುತ್ತಿದ್ದರು. ಅವರಿಗೆ ವಿಮಾನದ ಬಗ್ಗೆ ಅಷ್ಟು ಆಸಕ್ತಿ ಇತ್ತು. 10ನೇ ತರಗತಿ ಓದುವ ವೇಳೆಗಾಗಲೇ ಪೈಲೆಟ್ ಆಗಬೇಕು ಎಂದು ಅವರು ತಿರ್ಮಾನಿಸಿದ್ದರು' ಎಂದು ಬಾಲ್ಯದ ನೆನಪು ಬಿಚ್ಚಿಡುತ್ತಾರೆ ರಾಜೇಶ್.

ಶಾಲೆಯ ವತಿಯಿಂದ ಸನ್ಮಾನ : 1993ರಲ್ಲಿ ಪ್ರಶಾಂತ್ ಈಸ್ಟ್ ಹುಡ್ ಶಾಲೆಯಲ್ಲಿ ವ್ಯಾಸಂಗ ಮುಗಿಸಿದರು. 'ಶಾಲೆಯಲ್ಲಿ ಅವರು ಶಿಸ್ತಿನಿಂದ ಇರುತ್ತಿದ್ದರು. ನಮ್ಮ ಸ್ನೇಹಿತ ಇಂತಹ ಸಾಧನೆ ಮಾಡಿರುವುದಕ್ಕೆ ಹೆಮ್ಮ ಇದೆ. ಶಾಲೆಯ ವತಿಯಿಂದ ಅವರನ್ನು ಶೀಘ್ರದಲ್ಲೇ ಸನ್ಮಾನಿಸಲಾಗುತ್ತದೆ' ಎನ್ನುತ್ತಾರೆ ಪ್ರಶಾಂತ್ ಸ್ನೇಹಿತರಾದ ಸಿ.ಭುವನೇಶ್.

ಮಧ್ಯಮ ವರ್ಗದ ಕುಟುಂಬದವರು : ಪ್ರಶಾಂತ್ ನಾಯರ್ ಮಧ್ಯಮ ವರ್ಗದ ಕುಟುಂಬದವರು. ಇವರ ತಂದೆ ನಾರಾಯಣ ನಾಯರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿಯಾಗಿದ್ದರು. ಪ್ರಶಾಂತ್ ಅವರ ಸಹೋದರ ವಕೀಲರಾಗಿದ್ದಾರೆ.

ವಾಯುಪಡೆಯ ಅಧಿಕಾರಿಗಳು ಹೇಳುವ ಪ್ರಕಾರ ಪ್ರಶಾಂತ್ 17 ವರ್ಷಗಳಿಂದ ವಾಯುಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಿಗ್-21, ಮಿಗ್ -23 ವಿಮಾನಗಳನ್ನು ಹಾರಿಸಿದ ಖ್ಯಾತಿ ಅವರದ್ದಾಗಿದೆ. ಐದು ವರ್ಷಗಳ ಹಿಂದೆ ಅವರನ್ನು ಎಎಸ್‌ಟಿಇಗೆ ಸೇರಿಸಲಾಗಿತ್ತು. 4 ವರ್ಷಗಳಿಂದ ಅವರು ಬ್ರಹ್ಮೋಸ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

English summary
This one is dedicated to her. She would have been the happiest soul to see me achieve this said Wg Cdr Prashanth Nair. Prashanth created military aviation history on June 25, when he successfully carried out the first flight of frontline fighter Sukhoi (Su-30MKI) fitted with supersonic cruise missile BrahMos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X