ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#SteelFlyoverBeda ಅಭಿಯಾನಕ್ಕೆ 42 ಸಾವಿರ ಜನರಿಂದ ಸಹಿ!

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ಕರ್ನಾಟಕದ ಸರ್ಕಾರ ಉದ್ದೇಶಿತ ಬಹುಕೋಟಿ 'ಉಕ್ಕಿನ ಮೇಲ್ಸೇತುವೆ' ವಿರೋಧಿಸಿ ನಾಗರಿಕರು ನಡೆಸಿದ ಸಹಿ ಸಂಗ್ರಹ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇಲ್ಲಿ ತನಕ ಸುಮಾರು 42 ಸಾವಿರ ಜನರಿಂದ ಸಹಿ ಬಿದ್ದಿದೆ.

ಉಕ್ಕಿನ ಸೇತುವೆ ಬೇಡ ಎಂದು ಅಂದಾಜು 42 ಸಾವಿರಕ್ಕೂ ಅಧಿಕ ಮಂದಿ ಮತ ಹಾಕಿದ್ದಾರೆ. ಮೇಕ್ರಿ ವೃತ್ತ ಹಾಗೂ ಉತ್ತರ ಭಾಗದ 10,204 ಬೆಂಗಳೂರಿಗರು ಸೇತುವೆ ಬೇಡ ಎಂದಿದ್ದಾರೆ. ಮಿಕ್ಕಂತೆ ಸೇತುವೆ ವಿರೋಧಿಸಿ ಕೆಂಗೇರಿ, ಬನಶಂಕರಿ, ಜಯನಗರ, ಮಾರತ್‌ ಹಳ್ಳಿ ಸೇರಿದಂತೆ ನಗರದ ವಿವಿಧ ಭಾಗದ ಜನತೆ ಮತ ಹಾಕಿದ್ದಾರೆ.[SteelFlyoverBeku ಅಭಿಯಾನ ಆರಂಭ]

#SteelFlyoverBeda 42,000 people have “voted” their opposition

ಈ ಮತ ಸಂಗ್ರಹ ಹಾಗೂ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್‌ ಅವರಿಗೆ ಸಲ್ಲಿಸಿ, ನಾಗರಿಕ ಸಮಿತಿಯ ಮಾಡಲಾಗುತ್ತದೆ. ಅವರಿಗೆ ಈ ಕುರಿತು ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ. [ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

ಉಕ್ಕಿನ ಸೇತುವೆ ನಿರ್ಮಾಣದಿಂದ ಉಂಟಾಗುವ ಸಮಸ್ಯೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚು, ಹೆಚ್ಚು ಆಂದೋಲನವನ್ನು ಕೈಗೊಳ್ಳುತ್ತೇವೆ' ಎಂದು Citizens for Bengaluru (CfB) ಸ್ವಯಂ ಸೇವಕರು ತಿಳಿಸಿದರು.[KIAಗೆ 3 ಪರ್ಯಾಯ ಮಾರ್ಗಗಳು, 300 ಕೋಟಿ ರು ಅನುದಾನ]

'ಈ ಜನಾಭಿಪ್ರಾಯವನ್ನು ಯಾವುದೇ ಸದಸ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟು ಹಾಕಿಲ್ಲ, ಬದಲಾಗಿ ಜನರೇ ಸ್ವಯಂ ಪ್ರೇರಿತವಾಗಿ ಹುಟ್ಟಿಕೊಂಡ ಆಂದೋಲನವಾಗಿದೆ' ಎಂದು ನಾಗರಿಕ ಸಮಿತಿ ಪರವಾಗಿ ಎ ಶ್ರೀನಿವಾಸ್ ಹೇಳಿದ್ದಾರೆ.

6.7 ಕಿ.ಮೀ ವ್ಯಾಪ್ತಿಯ 1,800ಕ್ಕೂ ಅಧಿಕ ಕೋಟಿ ರು ವೆಚ್ಚದ ಈ ಯೋಜನೆಯಿಂದಾಗಿ 800ಕ್ಕೂ ಅಧಿಕ ಮರಗಳನ್ನು ಧರೆಗುಳಿಸಲು ಸರ್ಕಾರ ಮುಂದಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗಗಳನ್ನು ಸರ್ಕಾರವೇ ಸೂಚಿಸಿದೆ. ಇದಕ್ಕೆ ಇಲ್ಲಿನ ನಾಗರಿಕರ ಬೆಂಬಲವೂ ಇದೆ ಎಂದು ನಾಗರಿಕ ಸಮಿತಿಯ ಹೋರಾಟಗಾರರು ಹೇಳಿದ್ದಾರೆ.

English summary
Nearly 42,000 people have “voted” their opposition to the ambitious Rs. 1,791-crore steel flyover project, claimed the Citizens for Bengaluru (CfB), an organisation spearheading the protest movement, after a “referendum” conducted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X