ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಸಿಗೆ ಮುಂಚೆಯೇ ಕಾಡುವುದೇ ವಿದ್ಯುತ್ ಅಭಾವ?

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 16: ರಾಜ್ಯದಲ್ಲಿ ಮಳೆಯ ಅಭಾವವಿದ್ದು ಚಳಿಗಾಲ ಪ್ರಾರಂಭವಾದರೂ ಉಷ್ಣಾಂಶವೂ ಹೆಚ್ಚಿದೆ. ಇನ್ನು ಬೇಸಿಗೆಗೆ ಮುನ್ನವೇ ವಿದ್ಯುತ್ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದೆ.

ನವೆಂಬರ್‌ ಮಧ್ಯಭಾಗ ಮುಗಿಯುತ್ತಾ ಬಂದರು ಚಳಿಯ ಸುಳಿವೇ ಸಿಗುತ್ತಿಲ್ಲ. ಇನ್ನು ಎಲ್ಲೆಡೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿದ್ದು ಇದೇ ರೀತಿ ಮುಂದುವರೆದರೆ ಜನವರಿ, ಫೆಬ್ರವರಿ ವೇಳೆಗೆ ವಿದ್ಯುತ್ ಅಭಾವ ಕಾಡಲಿದೆ.

ರಾಜ್ಯದಲ್ಲಿ ಪ್ರಸ್ತುತ ಜಲ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ರಾಜ್ಯಕ್ಕೆ ಸ್ಟೇಷನ್ ಗಳಿಂದ 200 ಮಿಲಿಯನ್ ಯುನಿಟ್ಸ್ ವಿದ್ಯುತ್ ಪೂರೈಸುತ್ತಿದೆ ಅದರೆ ಇನ್ನು ಕಲೆವೊಮ್ಮೆ ಹತ್ತು ಮಿಲಿಯನ್ ಯುನಿಟ್ಸ್ ಬೇಡಿಕೆ ಹೆಚ್ಚಾಗಲಿದ್ದು ಅದನ್ನು ರಾಜ್ಯ ಪೂರೈಸುತ್ತಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.[ಬಲ್ಬ್ ಗಳನ್ನು ಬದಲಿಸಿ ಸಿಎಫ್ಎಲ್ ಕೊಳ್ಳಿ]

State have power problem next january, and february

ಇಡೀ ಕರ್ನಾಟಕದಲ್ಲಿ ಪ್ರತಿದಿನ 190 ಮಿಲಿಯನ್ ಯುನಿಟ್ ವಿದ್ಯುತ್ ಬಳಸಲಾಗುತ್ತಿದೆ. ಪೀಕ್ ಅವರ್ಸ್ ನಲ್ಲಿ 9,800 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ. ಬೇಸಿಗೆಯಲ್ಲಿ ಪ್ರತಿದಿನ ಸರಾಸರಿ 210 ಮಿಲಿಯನ್ ಯುನಿಟ್ ವಿದ್ಯುತ್ ಬಳಕೆಯಾಗುತ್ತದೆ. ಕಳೆದ 7 ವರ್ಷಗಳಿಂದ 50,148 ಮಿಲಿಯನ್ ಯುನಿಟ್ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ಸುಮಾರು 24,694 ಕೋಟಿ ರು ಹಣ ಖರ್ಚು ಮಾಡಿದೆ.

ಮಳೆ ಕೊರತೆಯಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿದೆ. ಅಲ್ಲದೆ ಮನೆಯಲ್ಲಿ ಲೈಟಿನಿಂದ ಹಿಡಿದೂ ಪ್ರತಿಯೊಂದಕ್ಕೂ ವಿದ್ಯುತ್ ಬಳಕೆಯಾಗುತ್ತದೆ. ತಾಪಮಾನ ಏರಿಕೆಯಾದಾಗ ಬಳಕೆಯೂ ಹೆಚ್ಚಾಗುತ್ತದೆ ಹೀಗಾಗಿ ವಿದ್ಯುತ್ ಬಳಕೆ ಹೆಚ್ಚಾಗಲಿದೆ.

ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯ ಹೆಚ್ಚಾಗಲಿದ್ದು ನಗರ ಮತ್ತು ಹಳ್ಳಿಗಳಲ್ಲಿ ಸಮಸ್ಯೆ ತಲೆದೋರಲಿದೆ. ಹೀಗಾಗಿ ಈಗಿನಿಂದಲೇ ವಿದ್ಯುತ್ ರಕ್ಷಣಾ ಸಪ್ತಾಹ ಇತ್ಯಾದಿ ಕ್ರಮಗಳನ್ನು ವಹಿಸಬೇಕಿದೆ.

ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಹಾಗೆಯೇ ಅವರು ಉಳಿಸಿದರೆ ಎಲ್ಲರಿಗೂ ಅನುಕೂಲ.

English summary
State have power problem next january, and february to thinking to solve the problem Karnataka Power Transmission Corporation officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X