ಕೃಷ್ಣಾ ಎನಬಾರದೆ.. ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ...

Subscribe to Oneindia Kannada

ಬೆಂಗಳೂರು, ಆಗಸ್ಟ್, 25: ನಗರದೆಲ್ಲೆಡೆ ಕೃಷ್ಣಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ವಿದ್ಯಾಪೀಠ ಮತ್ತು ಬಸವನಗುಡಿಯ ಶ್ರೀಗೋವರ್ಧನಗಿರಿಯಲ್ಲಿ ಅದ್ದೂರಿ ಶ್ರೀಕೃಷ್ಣಲೀಲೋತ್ಸವ ನಡೆಯುತ್ತಿದೆ.

ಮುಂಜಾನೆಯೇ ಮಡಿಯಲ್ಲಿ ಆಗಮಮಿಸಿದ ಭಕ್ತರು ಕೃಷ್ಣ ನಾಮ ಸ್ಮರಣೆಯಲ್ಲಿ ತೊಡಗಿಕೊಂಡಿದ್ದರು. ವಿದ್ಯಾಪೀಠದಲ್ಲಿ ಶ್ರೀ ಕೃಷ್ಣನ ನಾಮಸ್ಮರಣೆ ನಿರಂತರಗಾಗಿ ನಡೆದಿತ್ತು.[ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ]

ಬೆಂಗಳೂರಲ್ಲಿ ಕೃಷ್ಣಜನ್ಮಾಷ್ಟಮಿ ಸಂಭ್ರಮ

ಬಸವನಗುಡಿಯ ಶ್ರೀಗೋವರ್ಧನಗಿರಿಯಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ. ಗೋವರ್ಧನಗಿರಿಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಭಜನೆ ಮತ್ತು ಕೃಷ್ಣ ನಾಮ ಸ್ಮರಣೆ ಗೋವರ್ಧನ ಗಿರಿಯಲ್ಲಿ ನಡೆದೇ ಇತ್ತು. ಶ್ರೀಗೋವರ್ಧನಗಿರಿಯಲ್ಲಿ ಶ್ರೀ ಶುಕ್ರವಾರ (ಆಗಸ್ಟ್ 26)ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮಾರುಕಟ್ಟೆಗಳಲ್ಲಿ ಸಂಪಿಗೆ ಹೂವಿನ ಘಮ ಮನೆ ಮಾಡಿತ್ತು.[ಚಿತ್ರಗಳು:ಕೃಷ್ಣ ಜನ್ಮಾಷ್ಟಮಿ ವಿಶೇಷ ದೇಶದ ವಿವಿಧೆಡೆಗಳಲ್ಲಿ ಸಂಭ್ರಮ]

ಸಹಸ್ರನಾಮ ಪಠಣ

ಬೆಂಗಳೂರಿನ ವಿದ್ಯಾಪೀಠದಲ್ಲಿ ಮುಂಜಾನೆಯಿಂದಲೇ ವಿಷ್ಣು ಸಹಸ್ರನಾಮ ಪಠಣ, ಕೋಟಿ ಅರ್ಚನೆ ಆರಂಭವಾಗಿತ್ತು.

ಪರಮಾತ್ಮನ ಧ್ಯಾನ

ವಿದ್ಯಾಪೀಠದಲ್ಲಿ ಸೇರಿದ್ದ ಭಕ್ತ ಗಣ ಶ್ರೀಕೃಷ್ಣನ ಆರಾಧನೆಯಲ್ಲಿ ನಿರತರಾಗಿತ್ತು.

ವಿಶೇಷ ಅಲಂಕಾರ

ಬಸವನಗುಡಿಯ ಶ್ರೀಗೋವರ್ಧನಗಿರಿಯಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ.

ಭಜನೆ - ಆರಾಧನೆ

ಮಹಿಳೆಯರಿಂದ ಶ್ರೀಗೋವರ್ಧನಗಿರಿಯಲ್ಲಿ ಶ್ರೀ ಕೃಷ್ಣ ನಾಮ ಸ್ಮರಣೆ- ಭಜನೆ.

ಹೂವಿನ ಅಲಂಕಾರ

ಬಸವನಗುಡಿಯ ಶ್ರೀಗೋವರ್ಧನಗಿರಿಯಲ್ಲಿ ಎರಡು ದಿನ ಕಾಲ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ನಡೆಯಲಿದ್ದು ಗಿರಿಯನ್ನು ಹೂಗಳಿಂದ ಅಲಂಕಾರ ಮಾಡಲಾಗಿದೆ.

ಕೃಷ್ಣನ ದರ್ಶನಕ್ಕೆ ಬಂದ ಬಸವ

ಬಸವನಗುಡಿಯ ಗೋವರ್ಧನ ಗಿರಿ ಎದುರಿನಲ್ಲಿ ದರ್ಶನ ನೀಡಿದ ಬಸವ.

ಗಿರಿನಗರ

ಬೆಂಗಳೂರಿನ ಗಿರಿನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಜನ್ಮಾಷ್ಟಮಿ ನಿಮಿತ್ತ ವಿವಿಧ ಸ್ಪರ್ಧೆಗಳು ನಡೆದವು.

ವ್ಯಾಪಾರ ಜೋರು

ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಹಣ್ಣಿನ ವ್ಯಾಪಾರ-ವಹಿವಾಟು.

English summary
Bengaluru: Hindus across the globe celebrate Krishna janmashtami by fasting, worshipping, offering special prayers till the midnight. In Bengaluru Vidyapitha and Basavanagudi Sri Govardhana Kshetra celebrating Krishna Janmashtami.
Please Wait while comments are loading...