ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ : ಶೀಘ್ರದಲ್ಲೇ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ

|
Google Oneindia Kannada News

ಬೆಂಗಳೂರು, ಜೂನ್ 7: ಉದ್ಯಾನ ನಗರಿ ಬೆಂಗಳೂರಿನ ಲಕ್ಷಾಂತರ ಜನರಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ನೀಡಿದ ನಮ್ಮ ಮೆಟ್ರೋ ಇನ್ನು ಕೆಲವೇ ತಿಂಗಳುಗಳಲ್ಲಿ ಮತ್ತಷ್ಟು ಜನರಿಗೆ ಉಪಕಾರಿಯಾಗಲಿದೆ.

ಈಗಾಗಲೇ ಇರುವ ಮೂರು ಮೆಟ್ರೋ ಬೋಗಿಗಳನ್ನು ಆರಕ್ಕೇರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು, ಈ ವರ್ಷದ ಡಿಸೆಂಬರ್ ಹೊತ್ತಿಗೆ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಜೂನ್ 6 ರಂದು, ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡುತ್ತಿದ್ದ ಅವರು ಈ ವಿಷಯ ತಿಳಿಸಿದರು.

Soon there will b a seperate coach for women in Namma Metro: K.J.George

ಇದರೊಂದಿಗೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿಯನ್ನು ಮೀಸಲಿಡುವ ಬಗ್ಗೆಯೂ ಯೋಚಿಸಲಾಗುತ್ತಿದೆ. ಬೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆಯೇ ಮಹಿಳೆಯರಿಗಾಗಿಯೇ ಒಂದು ಬೊಗಿಯನ್ನು ಮೀಸಲಿಡಲಾಗುವುದು ಎಂದು ಜಾರ್ಜ್ ಹೇಳಿದರು.[ಬೆಂಗಳೂರು ಉತ್ತರ-ದಕ್ಷಿಣ: ನಮ್ಮ ಮೆಟ್ರೋ 45 ನಿಮಿಷದ ಪ್ರಯಾಣ]

ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರು ಉತ್ತರ-ದಕ್ಷಿಣವನ್ನು ಬೆಸೆಯುವ ನಾಗಸಂದ್ರದಿಂದ ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಮೆಟ್ರೋ ಕಾರ್ಯಾರಂಭವಾಗಲಿದ್ದು, ಈಗಾಗಲೇ ಪರ್ಪಲ್ ಲೈನ್(ಮೈಸೂರು ರಸ್ತೆಯಿಂದ-ಬೈಯಪ್ಪನಹಳ್ಳಿವರೆಗೆ) ಮೆಟ್ರೊ ಉಪಯೋಗ ಪಡೆಯುತ್ತಿರುವ ಮೂರು ಪಟ್ಟು ಹೆಚ್ಚು ಜನ ಗ್ರೀನ್ ಲೈನ್ ಉಪಯೋಗ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

Soon there will b a seperate coach for women in Namma Metro: K.J.George

ಈ ಕಾರಣದಿಂದಾಗಿ ಮೆಟ್ರೋ ಬೋಗಿಯನ್ನು ಹೆಚ್ಚಿಸುವುದು ಅಗತ್ಯವಾದ ಕಾರಣ, 150 ಹೆಚ್ಚುವರಿ ಬೋಗಿ ಖರೀದಿಗೆ ಈಗಾಗಲೇ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿ.)ಗೆ ಆರ್ಡರ್ ನೀಡಲಾಗಿದ್ದು, ಡಿಸೆಂಬರ್ ಹೊತ್ತಿಗೆ ಈ ಬೋಗಿಗಳು ಸಿಗಲಿವೆ. ಹೊಸ ಸಬೋಗಿಗಳನ್ನು ಅಳವಡಿಸಿದ ನಂತರ ಇವುಗಳಲ್ಲಿ ಒಂದು ಬೋಗಿಯನ್ನು ಮಹಿಳೆಯರಿಗೇ ಮೀಸಲಿಡಲಾಗುತ್ತದೆ.

ಮೆಟ್ರೋ ರೈಲು ಸೇವೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ವಿಸ್ತರಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ಸಹ ಸಚಿವ ಜಾರ್ಜ್ ಇದೇ ಸಂದರ್ಭದಲ್ಲಿ ಹೇಳಿದರು.

English summary
A separate metro coach would be made available to women passengers once the BMRCL starts operating six-coach metro trains, K.J.George, minister for Bengaluru development and town planning, told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X