ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯ ಸೇವನೆ ಪ್ರಮಾಣ ಪತ್ತೆಗೆ ಬಾರ್ ಗಳಲ್ಲೇ ಯಂತ್ರ

ಕುಡಿದು ವಾಹನ ಚಲಾಯಿಸಿ ಪೊಲೀಸರಿಗೆ ಕೈಗೆ ಸಿಲುಕಿ ದಂಡ ಕಟ್ಟುವ ಮೊದಲೇ, ನೀವು ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ದೀರಿ ಎಂಬುದನ್ನು ಪತ್ತೆ ಮಾಡಲು ಬಾರ್ ಗಳಲ್ಲೇ ಇನ್ನುಮುಂದೆ ಯಂತ್ರಗಳು ಬರಲಿವೆ.

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 18: ರಾಜ್ಯದ ಸಾವಿರಕ್ಕೂ ಹೆಚ್ಚು ಪಬ್ ಮತ್ತು ಬಾರ್ ಗಳು ಇನ್ನು ಮುಂದೆ ಮದ್ಯ ಸೇವನೆ ಪ್ರಮಾಣವನ್ನು ಪತ್ತೆ ಮಾಡುವ ಕಿಯೋಸ್ಕ್ ಯಂತ್ರಗಳುನ್ನು ಅಳವಡಿಸಿಕೊಳ್ಳಲಿವೆ.

ಈ ಮೂಲಕ ಗ್ರಾಹಕರು ತಾವು ಎಷ್ಟು ಪ್ರಮಾಣದ ಮದ್ಯ ಸೇವಿಸಿದ್ದೇವೆ. ವಾಹನ ಚಲಾಯಿಸಬಹುದೇ ಇಲ್ಲವೆ ಎಂಬ ಮಾಹಿತಿಯನ್ನು ಬಾರ್ ಮತ್ತು ಪಬ್ ದ್ವಾರಗಳಲ್ಲೇ ಪಡೆದುಕೊಳ್ಳಬಹುದಾಗಿದೆ.

ಈ ಕ್ರಮದಿಂದ ಹೆಚ್ಚು ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿರುವವರು ಮನೆಗೆ ಹೋಗಲು ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದು.

Soon breathalysers at Karnataka bars and pubs

ರೋಡ್ ಸೇಫ್ಟಿ ಇನ್ಷಿಯೇಟೀವ್ ಫಾರ್ ಎ ಸೇಫ್ ಕರ್ನಾಟಕ (ರಿಸ್ಕ್, RISK) ಸಂಘಟನೆಯ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಜತೆಗೆ ಓಲಾ ಕ್ಯಾಬ್ ಸರ್ವಿಸ್ ಸಂಸ್ಥೆಯೊಂದಿಗೂ ಸಹ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಹೆಚ್ಚಾಗಿ ಮದ್ಯ ಪ್ರಮಾಣ ಸೇವಿಸಿರುವ ವ್ಯಕ್ತಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಓಲಾ ಮುಂದಾಗಿದೆ.

ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ಪಬ್ ವೊಂದರಲ್ಲಿ ಅಳವಡಿಸಲಾಗಿರುವ ಕಿಯೋಸ್ಕ್ ಯಂತ್ರವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಗುರುವಾರ ಉದ್ಘಾಟಿಸಿದರು.

ಈ ಕ್ರಮದಿಂದ ರಸ್ತೆ ಅಪಘಾತಗಳ ಪ್ರಮಾಣ ಸಾಕಷ್ಟು ತಪ್ಪುತ್ತದೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಮಾರುತಿ ಸಾಂಬ್ರಾಣಿ ಅವರು ಮಾಧ್ಯಮಗಳಿಗೆ ತಿಳಿಸಿದರು.

2014ರಲ್ಲಿ 55,138 ಜನ ಮತ್ತು 2015ರಲ್ಲಿ 62,576 ಮಂದಿ ಬೆಂಗಳೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣಗಳನ್ನು ಎದುರಿಸಿದ್ದಾರೆ.

English summary
Over a thousand pubs and bars across Karnataka will soon have breath analysers that will let customers know if the level of alcohol consumption is within the permissible limits for driving or not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X