ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಸಂತ ಶಿಶುನಾಳ ಶರೀಫರ ಸ್ಮರಣೆಗಾಗಿ ವಿಶಿಷ್ಟ ಕಾರ್ಯಕ್ರಮ

ಇದೇ ಮಾರ್ಚ್ 4 ರಂದು ಸಂಜೆ 5:30ಕ್ಕೆ ಬಸವನಗುಡಿಯ ಬ್ಯೂಗಲ್ ರಾಕ್ ಉದ್ಯಾನದಲ್ಲಿ ಕೊಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್‌(ರಿ.) "ಶರೀಫರ ತತ್ವಾನುಭವ" ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ.

By ತೃಪ್ತಿ ಹೆಗಡೆ
|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಜಾನಪದ ಶೈಲಿಯ ಹಾಡುಗಳ ಮೂಲಕ ಮೇರು ನೀತಿಯನ್ನು ಸಾರಿದ ಶಿಶುನಾಳ ಶರೀಫರ ಸ್ಮರಣೆಗಾಗಿ ವೇದಿಕೆಯೊಂದು ಸಿದ್ದವಾಗಿದೆ. ಇದೇ ಮಾರ್ಚ್ 4 ರಂದು ಸಂಜೆ 5:30ಕ್ಕೆ ಬಸವನಗುಡಿಯ ಬ್ಯೂಗಲ್ ರಾಕ್ ಉದ್ಯಾನದಲ್ಲಿ ಕೊಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್‌(ರಿ.) "ಶರೀಫರ ತತ್ವಾನುಭವ" ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ.

"ಶರೀಫರ ತತ್ವಾನುಭವ" ಹೆಸರಿನ ಈ ಕಾರ್ಯಕ್ರಮವನ್ನು ಮಾಜಿ ಉಪಮುಖ್ಯಮಂತ್ರಿ, ಶಾಸಕ ಆರ್.ಅಶೋಕ್ ಉದ್ಘಾಟಿಸಲಿದ್ದಾರೆ. ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಹಿರಿಯ ಸಂಗೀತ ಸಂಯೋಜಕ ಡಾ.ಜಯಶ್ರೀ ಅರವಿಂದ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ವಿಶ್ಲೇಷಣೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಏಜಾಸುದ್ದೀನ್ ನಡೆಸಿಕೊಡಲಿದ್ದಾರೆ.[ಇದು ಹವಾಮಾನ ಇಲಾಖೆಯಿಂದ ಬಂದ ತಂಪಾದ ಸುದ್ದಿ!]

Song Recital program in memory of Santa Shishunala Sharif

ಕೊಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್
ನಾಡಿನ ಹಿರಿಯ ಸುಗಮ ಸಂಗೀತಗಾರರು ಮತ್ತು ಹಿರಿಯ ಕವಿ-ಲೇಖಕರ ಸಹಕಾರದೊಂದಿಗೆ ಕಲಾತರಬೇತಿ ಮತ್ತು ಎಲೆಮರೆಯ ಕಲಾವಿದರಿಗೆ ಭೂಮಿಕೆ ಒದಗಿಸುವ ಉದ್ದೇಶದಿಂದ ಕೊಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್ ಪ್ರಾರಂಭಗೊಂಡಿತು. ಸುಗಮ ಸಂಗೀತ, ಯಕ್ಷಗಾನ ಮುಂತಾದ ಕಲೆಯ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡುವ ಮತ್ತು ಪ್ರತಿಭೆ ಇದ್ದೂ ಅವಕಾಶ ವಂಚಿತರಾಗಿರುವವರಿಗೆ ಅವಕಾಶ ನೀಡುವ ಉದ್ದೇಶ ಈ ಟ್ರಸ್ಟ್ ನದ್ದು.['ಆಲೂರು ವೆಂಕಟರಾವ್ ರಸ್ತೆಯ ಹೆಸರು ಬದಲಾಗಲ್ಲ']

ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಸೋರುತಿಹುದು ಮನೆಯ ಮಾಳಿಗೆ, ಅಳಬೇಡ ತಂಗಿ ಅಳಬೇಡ ಮುಂತಾದ ತತ್ವಜ್ಞಾನ ತುಂಬಿದ ಮಹೋನ್ನತ ಗೀತೆಗಳನ್ನು ನೀಡಿ ಕರ್ನಾಟಕದ ಕಬೀರ ಎಂದೇ ಪ್ರಸಿದ್ಧಿ ಪಡೆದ ಶಿಶುನಾಳರ ಹಾಡುಗಳು ಮತ್ತು ಅದರಲ್ಲಿನ ಹೂರಣವನ್ನು ವಿಶ್ಲೇಷಿಸುವುದೇ ಕಾರ್ಯಕ್ರಮದ ಆದ್ಯ ಉದ್ದೇಶ. ಕಾರ್ಯಕ್ರಮದಲ್ಲಿ ಗಾಯಕ ವೈಷ್ಣವ್ ರಾವ್ ಶರೀಫರ ಪದಗಳನ್ನು ಹಾಡಲಿದ್ದಾರೆ.

ಅಂದ ಹಾಗೆ, ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.

English summary
Kodlu Shyanubhoga Music Trust(Reg.) is organizing a program on veteran Kannada Poet Shishunala Sharif's works. The program will be held in Bugal Rock Park Basavanagudi Bangalore on March
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X