ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಸಿಗೆ ರಜೆ ಮುಗಿದಿಲ್ಲ, ಆದರೂ ಬೆಂಗಳೂರಿನಲ್ಲಿ ಶಾಲೆ ಶುರುವಾಗಿದೆ!

ಬೆಂಗಳೂರಿನ ಹಲವು ಶಾಲೆಗಳು ಮೇ ಮೊದಲ ವಾರದಲ್ಲೇ ಆರಂಭವಾಗಿಬಿಟ್ಟಿವೆ. ರಜೆಯ ಮೋಜಿನಲ್ಲಿದ್ದ ಮಕ್ಕಳು, ಮತ್ತದೇ ಮಣಬಾರದ ಬ್ಯಾಗು ಹೊತ್ತು ಶಾಲೆಯತ್ತ ಒಲ್ಲದ ಮನಸ್ಸಿನಿಂದ ಮುಖ ಮಾಡಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 18: ವಾರ್ಷಿಕ ಪರೀಕ್ಷೆ ಮುಗಿದು ರಜೆ ಆರಂಭವಾಗುತ್ತಿದ್ದಂತೆಯೇ ಮಕ್ಕಳ ಮುಖದಲ್ಲಿ ಎಲ್ಲಿಲ್ಲದ ಖುಷಿ ಎದ್ದುಕಾಣುತ್ತದೆ. ಇನ್ನೆರಡು ತಿಂಗಳು ಹಾಯಾಗಿರಬಹುದಪ್ಪ ಎಂದು ಸ್ಕೂಲ್ ಬ್ಯಾಗ್ ಗಳನ್ನು ಮೂಲೆಯಲ್ಲಿಟ್ಟು ಆಟದಲ್ಲಿ ಮೈಮರೆಯುತ್ತಾರೆ. ಆದರೆ ಈ ಭಾಗ್ಯ ಬೆಂಗಳೂರಿನ ಹಲವು ಶಾಲೆಯ ಮಕ್ಕಳಿಗಿಲ್ಲ ಎಂದರೆ ನಂಬುತ್ತೀರಾ?

ಹೌದು, ಬೆಂಗಳೂರಿನ ಹಲವು ಶಾಲೆಗಳು ಮೇ ಮೊದಲ ವಾರದಲ್ಲೇ ಆರಂಭವಾಗಿಬಿಟ್ಟಿವೆ. ರಜೆಯ ಮೋಜಿನಲ್ಲಿದ್ದ ಮಕ್ಕಳು, ಮತ್ತದೇ ಮಣಬಾರದ ಬ್ಯಾಗು ಹೊತ್ತು ಶಾಲೆಯತ್ತ ಒಲ್ಲದ ಮನಸ್ಸಿನಿಂದ ಮುಖ ಮಾಡಿದ್ದಾರೆ.[ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು]

Some Bengaluru schools re-open in summer vacation!

ಕರ್ನಾಟಕ ಶಿಕ್ಷಣ ಸಂಸ್ಥೆಗಳ ನೀತಿ -1995 ಮತ್ತು ಮಕ್ಕಳ ಹಕ್ಕಿನ ಬಗೆಗಿನ ವಿಶ್ವ ಸಂಸ್ಥೆ ನಿಬಂಧನೆಯ ಪ್ರಕಾರ ಮಕ್ಕಳ ಬೇಸಿಗೆ ರಜೆಯನ್ನು ಮೊಟುಕುಗೊಳಿಸುವಂತಿಲ್ಲ. ಈ ವಿಷಯ ತಿಳಿದಿದ್ದರೂ ಬೆಂಗಳೂರಿನ ಲಗ್ಗೇರೆ ಮತ್ತು ಸುಂಕದಕಟ್ಟೆ ಭಾಗದ ಕೆಲವು ಶಾಲೆಗಳು ಮೇ ಮೊದಲ ವಾರದಲ್ಲೇ ಆರಂಭವಾಗಿವೆ.

ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ವಿಚಾರಿಸಿದರೆ, ನಾವು ಕಳೆದ ವರ್ಷದ ಪಠ್ಯವನ್ನು ಮತ್ತೊಮ್ಮೆ ಮಕ್ಕಳಿಗೆ ರಿವೈಸ್ ಮಾಡಿಸುತ್ತಿದ್ದೇವೆ ಎನ್ನುತ್ತಾರೆ. ಮಕ್ಕಳ ಕ್ರಿಯಾಶೀಲತೆಗೆ ಚಿಗುರುವುದಕ್ಕೆ ಸ್ವಲ್ಪ ಸಮಯಾವಕಾಶ ಬೇಡವೇ? ಎಂದರೆ ಅವರ ಬಳಿ ಉತ್ತರವಿಲ್ಲ.

ಒಟ್ಟಿನಲ್ಲಿ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತಿರುವ ಮಕ್ಕಳಿಗೆಲ್ಲ ನೆಮ್ಮದಿಯಿಂದ ಕೆಲ ಕಾಲ ಕುಟುಂಬದವರೊಡನೆ ಇರುವುದಕ್ಕೂ ಬಿಡದ ಇಂಥ ಶಾಲೆಗಳ ಬಗ್ಗೆ ಪಾಲಕರೂ, ಮಕ್ಕಳೂ ಹಿಡಿಶಾಪ ಹಾಕುತ್ತಿರುವುದಂತೂ ಸುಳ್ಳಲ್ಲ.

English summary
Even though summer vacation has not completed yet, some schools in Bengaluru have already re-opened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X