ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆಯಲ್ಲಿ ಕಾರ್ಯಕ್ರಮ ಮಾಡುತ್ತೀರಾ? ಬಿಬಿಎಂಪಿಗೆ ಶುಲ್ಕ ಪಾವತಿಸಿ!

ನಿಮ್ಮ ಮನೆಯ ಎದುರಿನಲ್ಲಿರುವ ರಸ್ತೆಯಲ್ಲಿ ನೂರಕ್ಕಿಂತ ಹೆಚ್ಚು ಜನರನ್ನು ಕರೆಸಿ ನೀವೇನಾದರೂ ಕಾರ್ಯಕ್ರಮ ಮಾಡುವ ಯೋಚನೆಯಲ್ಲಿದ್ದರೆ ಕಡ್ಡಾಯವಾಗಿ ನೀವು ಬಿಬಿಎಂಪಿ ಯಿಂದ ಎನ್ ಒಸಿ ಪಡೆಯಲೇಬೇಕು.

|
Google Oneindia Kannada News

ಬೆಂಗಳೂರು, ಮೇ 17: ನೀವು ಉದ್ಯಾನನಗರದಲ್ಲಿ ವಾಸಿಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ, ನಿಮ್ಮ ಮನೆಯ ಎದುರಿನಲ್ಲಿರುವ ರಸ್ತೆಯಲ್ಲಿ ನೂರಕ್ಕಿಂತ ಹೆಚ್ಚು ಜನರನ್ನು ಕರೆಸಿ ನೀವೇನಾದರೂ ಕಾರ್ಯಕ್ರಮ ಮಾಡುವ ಯೋಚನೆಯಲ್ಲಿದ್ದರೆ ಕಡ್ಡಾಯವಾಗಿ ನೀವು ಬಿಬಿಎಂಪಿ ಯಿಂದ ಎನ್ ಒಸಿ (non objection certificate) ಪಡೆಯಲೇಬೇಕು.

ಅಷ್ಟೇ ಅಲ್ಲ, ಬಿಬಿಎಂಪಿ ಗೆ ಘನ ತ್ಯಾಜ್ಯ ವಿಲೇವಾರಿ ಶುಲ್ಕ 2000/- ರೂ.ಗಳನ್ನು ತುಂಬಬೇಕು. ಕಸ ಸಂಗ್ರಹ ಮಾಡುವವರಿಗೆ ಕಸವನ್ನು ನೀಡುವ ಮೊದಲೇ ಕಸವನ್ನು ಬೇರ್ಪಡಿಸುವ ಜವಾಬ್ದಾರಿ ಕಾರ್ಯಕ್ರಮದ ಆಯೋಜಕರದ್ದೇ ಆಗಿರುತ್ತದೆ ಎಂದು ಬಿಬಿಎಂಪಿಯ ಘನ ತ್ಯಾಜ್ಯ ನಿರ್ವಹಣ ಘಟಕದ ಜಂಟಿ ನಿರ್ದೇಶಕ ಸರ್ಫರಾಜ್ ಖಾನ್ ಹೇಳಿದ್ದಾರೆ.[ಬೆಂಗಳೂರಿನಲ್ಲಿ ಕಸ ಸುಡುವವರಿಗೂ ದಂಡ!]

ಇದು ಹೊಸ ನಿಯಮವೇನಲ್ಲ. 2016 ರ ಘನ ತ್ಯಾಜ್ಯ ನಿರ್ವಹಣ ನಿಯಮವನ್ನೇ ಮತ್ತೊಮ್ಮೆ ನೆನಪಿಸಲಾಗುತ್ತಿದೆ. ಕಳೆದ ವರ್ಷವೇ ಈ ನಿಯಮವನ್ನು ಜಾರಿಗೆ ತಂದಿದ್ದರೂ ಬಹುಪಾಲು ಬೆಂಗಳೂರಿಗರು ಇದನ್ನು ಪಾಲಿಸುತ್ತಿಲ್ಲ, ಆದ್ದರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿಸದೆ.[ಸ್ವಚ್ಛ ಬೆಂಗಳೂರಿಗಾಗಿ ನೀವು ಸಹಿ ಮಾಡಬಹುದು]

2016ರ ತ್ಯಾಜ್ಯ ನಿರ್ವಹಣ ನಿಯಮದಲ್ಲಿ ಏನಿದೆ ಎಂಬುದನ್ನು ನೀವೇ ನೋಡಿ.

ಮುಂಗಡ ಹಣ ನೀಡಬೇಕು

ಮುಂಗಡ ಹಣ ನೀಡಬೇಕು

5,000 ಕ್ಕಿಂತ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ನಡೆಸುವ ಮೊದಲು ಕಾರ್ಯಕ್ರಮದ ಆಯೋಜಕರು ಪಾಲಿಕೆಗೆ 50,000 ರೂ. ಮುಂಗಡ ಹಣ ನೀಡಬೇಕು. ಒಂದೊಮ್ಮೆ ಕಾರ್ಯಕ್ರಮಕ್ಕೆ ಐದರಿಂದ ಹತ್ತು ಸಾವಿರ ಜನ ಭಾಗವಹಿಸಿದರೆ, ಒಂದು ಲಕ್ಷ ರೂ. ಮುಂಗಡ, ಹತ್ತರಿಂದ ಇಪ್ಪತೈದು ಸಾವಿರದವರೆಗೆ ಜನ ಸೇರುವುದಾದರೆ 2 ಲಕ್ಷ, ಇಪ್ಪತ್ತೈದು ಸಾವಿರಕ್ಕಿಂತ ಹೆಚ್ಚು ಜನ ಸೇರುವುದಾದರೆ ಒಟ್ಟು 3 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ. ಈ ಹಣ ರೀಫಂಡೇಬಲ್ ಆಗಿರುತ್ತದೆ.[ಕಸ ವಿಂಗಡನೆ ಮಾಡುವಂತೆ ಪ್ರಚಾರ ಮಾಡ್ತಾರೆ ಪುನೀತ್]

ಸ್ಥಳ ಸ್ವಚ್ಛವಾಗಿದ್ದರಷ್ಟೇ ಹಣ ವಾಪಸ್!

ಸ್ಥಳ ಸ್ವಚ್ಛವಾಗಿದ್ದರಷ್ಟೇ ಹಣ ವಾಪಸ್!

[ಬೆಂಗಳೂರು : ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ][ಬೆಂಗಳೂರು : ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ]

ಎಲ್ಲಿ ಅನ್ವಯ?

ಎಲ್ಲಿ ಅನ್ವಯ?

ಅರಮನೆ ಮೈದಾನ, ಫ್ರೀಡಂ ಪಾರ್ಕ್, ಯಾವುದೇ ತೆರೆದ ಮೈದಾನ, ರಸ್ತೆ, ಸಾರ್ವಜನಿ,ಕ ಸ್ಥಳ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಾಗಕ್ಕೂ ಈ ನಿಯಮ ಅನ್ವಯವಾಗುತ್ತದೆ.

ಆಯೋಜಕರೇ ಹೊಣೆ

ಆಯೋಜಕರೇ ಹೊಣೆ

ಕಾರ್ಯಕ್ರಮದ ಆಯೋಜಕರೇ ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಕಸದ ಬುಟ್ಟಿಯನ್ನು ಇಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಕಾರ್ಯಕ್ರಮದ ನಂತರ ಆ ಸ್ಥಳ ಸ್ವಚ್ಛವಾಗಿದೆಯೇ ಎಂದು ನೋಡುವ ಮತ್ತು ಸ್ವಚ್ಛವಾಗಿಲ್ಲದಿದ್ದಲ್ಲಿ ಸ್ವಚ್ಛ ಮಾಡಿಸುವ ಜವಾಬ್ದಾರಿಯೂ ಅವರದೇ. ಅಕಸ್ಮಾತ್ ಸ್ಥಳ ಸ್ವಚ್ಛವಾಗಿಲ್ಲ ಎಂದಾದಲ್ಲಿ ಮುಂಗಡ ಹಣವನ್ನು ವಾಪಾಸ್ ನೀಡಲಾಗುವುದಿಲ್ಲ.

ಜನಗಜಾಗೃತಿ ಇಲ್ಲ

ಜನಗಜಾಗೃತಿ ಇಲ್ಲ

ಜುಲೈ 2015 ರಲ್ಲೇ ಮುಂಗಡ ಹಣದ ಕುರಿತು ಬಿಬಿಎಂಪಿ ನಿಯಮ ಜಾರಿಗೊಳಿಸಿದ್ದರೂ ಪಾಲಿಕೆ ಕಡೆಯಿಂದ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಿಲ್ಲ. ಅದಕ್ಕೆಂದೆ ಪಾಲಿಕೆಯ ನಿಯಮದ ಬಗ್ಗೆ ಹಲವರಿಗೆ ತಿಳಿದೇ ಇಲ್ಲ. ಈ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ.

{promotion-urls}

English summary
If u resides in Bengaluru, and wants to do some programmes in which more than 100 people will gather, then u have to pay fees to BBMP. BBMP has decided to implement Solid Waste Management Rules of 2016, soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X