ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರೀಶಣ್ಣ ರಿಸೈನ್ ಮಾಡಿದ್ರಂತೆ-ಏನೀವಾಗ?

By Mahesh
|
Google Oneindia Kannada News

ಬೆಂಗಳೂರು, ಜೂನ್ 21: 'ಅಂಬರೀಶಣ್ಣ ರಿಸೈನ್ ಮಾಡಿದ್ರಂತೆ'-ಏನೀವಾಗ? 'ಏನ್ ನಿನ್ ಪ್ರಾಬ್ಲಮು' ಎಂದು 'ತಿಥಿ' ಚಿತ್ರದ ಗಡ್ಡಪ್ಪ ಸ್ಟೈಲಲ್ಲಿ ಪ್ರಶ್ನೆ ಕೇಳಿದ ಮಂದಿ ಇದ್ದಾರೆ. ಅಯ್ಯೋ ಇದು ಚಿತ್ರರಂಗಕ್ಕೆ, ಒಕ್ಕಲಿಗ ಸಮುದಾಯಕ್ಕೆ, ಮಂಡ್ಯ ಜಿಲ್ಲೆಗೆ ಆದ ದೊಡ್ಡ ಅವಮಾನ ಎಂದು ಗೋಳಿಟ್ಟವರಿದ್ದಾರೆ, ಅಂಬಿಗಾಗಿ ಪ್ರಾಣ ನೀಡಲು ಮುಂದಾದ ಹುಚ್ಚು ಅಭಿಮಾನಿಗಳಿದ್ದಾರೆ.[ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

ಇವೆರಲ್ಲರ ಆಟೋಟ, ಪ್ರತಿಕ್ರಿಯೆ, ಅನಿಸಿಕೆ, ಕುಚೋದ್ಯ, ಸಲಹೆಗಳನ್ನು ಸಾಮಾಜಿಕ ಜಾಲ ತಾಣಗಳು ದಾಖಲಿಸುತ್ತಾ ಸಾಗಿವೆ. ಅಂಬರೀಶ್ ಬಗ್ಗೆ ಅಭಿಪ್ರಾಯ ಸರಣಿಯ ಕೆಲ ಸ್ಯಾಂಪಲ್ ಇಲ್ಲಿವೆ. [ರಮ್ಯಾ ಏನು ಸಂಚು ಮಾಡಿಲ್ಲ, ಅವಳನ್ನು ದೂಷಿಸಬೇಡಿ: ಅಂಬರೀಶ್]

ಮಂಡ್ಯದಲ್ಲಿ ಅಂಬರೀಶ್ ಎಂದರೆ ದೊಡ್ಡ ಹೆಸರು ನಿಜ, ವಸತಿ ಸಚಿವರಾಗಿ ಅಂಬರೀಶ್ ಫೇಲ್ ಆಗಿರಬಹುದು ನಿಜ, ಆದರೆ, ಚಿತ್ರರಂಗಕ್ಕೆ, ಹಲವಾರು ಅಭಿಮಾನಿಗಳಿಗೆ ಅಂಬರೀಶ್ ಎಂದೆಂದಿಗೂ 'ಅಣ್ಣ' ಕಲಿಯುಗ ಕರ್ಣ, ಕೊಡುಗೈ ದಾನಿ, ಆಪ್ತಮಿತ್ರ. ಒಕ್ಕಲಿಗ ಸಮುದಾಯಕ್ಕೆ ಸೇರಿದರೂ ಅಂಬಿ ಎಂದಿಗೂ ನಾನು ಗೌಡ ಎಂದು ಹೇಳಿಕೊಂಡು ಮತ ಯಾಚಿಸಿಲ್ಲ. ರಾಜಕೀಯವಾಗಿ ಅಂಬರೀಶ್ ಸಾಕಷ್ಟು ಏಳು ಬೀಳೂ ಕಂಡಿದ್ದಾರೆ. [ಆಕೆಯೊಬ್ಬಳನ್ನೇ ಗುರಿಯಾಗಿಸುವುದು ಕುತರ್ಕ!]

Social Media react to Ambareesh resignation as Mandya MLA

ಆದರೆ, ಈ ಬಾರಿ ಅವರಿಗೆ ಆಗಿದ್ದು ಅನ್ಯಾಯ ಎಂದು ಹೆಚ್ಚಿನವರ ಅಭಿಪ್ರಾಯ. ಇಂದಲ್ಲ ನಾಳೆ ಆಗಬೇಕಾಗಿತ್ತು, ಅಂಬರೀಶ್ ಅವರು ತಮಗಿರುವ ಜನಬಲದಿಂದ ಹೊಸ ಪಕ್ಷ ಕಟ್ಟಲಿ, ತಾವೊಬ್ಬ 'ಒಂಟಿ ಸಲಗ' ಎಂಬುದನ್ನು ಸಾಬೀತು ಮಾಡಲಿ ಎಂದು ಸಲಹೆ ನೀಡಿದವರು ಇದ್ದಾರೆ. [ಜನಮತ : ರಮ್ಯಾ ಮತ್ತೆ ರಾಜಕೀಯಕ್ಕೆ ಬರುವುದೇ ಬೇಡ!]

ಒಟ್ಟಾರೆ, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಅಂಬರೀಶ್ ಬಗ್ಗೆ ಬಂದಿರುವ ಸುದ್ದಿಗೆ ಹೆಚ್ಚಿನ ಬಲ ತಂದಿದ್ದು ಜಗ್ಗೇಶ್ ಹಾಗೂ ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಟ್ವೀಟ್ ಗಳಿಂದ ಎಂದರೆ ತಪ್ಪಾಗಲಾರದು. [ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?]

ಅಂಬರೀಶಣ್ಣ ರಿಸೈನ್ ಮಾಡಿದ್ರಂತೆ-ಏನೀವಾಗ?

'ಸತ್ಯವಂತರಿಗಿದು ಕಾಲವಲ್ಲ' ಎಂಬಂತೆ ಸುಮಲತಾ ಅವರು ಟ್ವೀಟ್ ಮಾಡಿದ್ದರೆ, ಜಗ್ಗೇಶ್ ಅವರು ಅಂಬರೀಶ್ ಬೆಂಬಲಿಸಿ, 'ಯಾವುದೋ ಒಂದು ಹೆಂಗಸಿನ ಬಗ್ಗೆ 'ಟ್ವೀಟ್ ಮಾಡಿ ಎಲ್ಲರ ಹುಬ್ಬೇರಿಸಿದ್ದರು. ಆ ಹೆಂಗಸು ರಮ್ಯಾ ಅವರೇ ಇರಬೇಕು ಎಂದು ಊಹಿಸಿದ ಕೆಲ ಅಭಿಮಾನಿಗಳು ರಮ್ಯಾರನ್ನು ದೂಷಿಸತೊಡಗಿದ್ದರು.['ಅಂಬರೀಷ್- ಮೀರ್ ಸಾದಿಕ್, ಹೆಣ್ಣು ವಿರೋಧಿ']

ಇದೆಕ್ಕಲ್ಲ ಉತ್ತರವನ್ನು ಮಂಗಳವಾರ ಬೆಳಗ್ಗೆ ಬೆಂಗಳೂರಿನ ಜೆಪಿ ನಗರ ನಿವಾಸದಲ್ಲಿ ಅಂಬರೀಶ್ ನೀಡಿದ್ದಾರೆ. ಆದರೆ,ಅಂಬರೀಶ್ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಇದ್ದೇ ಇದೆ. ಸದ್ಯಕ್ಕೆ ಅಂಬರೀಶ್ ತೆಗೆದುಕೊಂಡ ನಿರ್ಣಯದ ಬಗ್ಗೆ ಬಂದಿರುವ ಪರ -ವಿರೋಧ ಪ್ರತಿಕ್ರಿಯೆಗಳನ್ನು ನೋಡಿ..[ವಿಷ ಕುಡಿದ ಅಂಬಿ ಅಭಿಮಾನಿ, ರಮ್ಯಾ ಮನೆಗೆ ಸುಣ್ಣಬಣ್ಣ!]

English summary
Social Media divide over in reacting to MH Ambareesh who tendered his resignation as Mandya MLA after being dropped from Siddaramaiah's cabinet. 'Mandyada Gandu', 'Rebel Star' Ambareesh a Vokkaliga leader from Mandya was serving as housing minister. Social media erupted with mixed response to his move, Here are collection of responses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X