ಆಟೋದಲ್ಲಿ ಪ್ರಯಾಣಿಸುವವರಿಗೆ 'ಬಿ-ಸೇಫ್' ಅಪ್ಲಿಕೇಶನ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 19 : ಬೆಂಗಳೂರು ಸಂಚಾರಿ ಪೊಲೀಸರು ಆಟೋದಲ್ಲಿ ಸಂಚರಿಸುವ ಜನರಿಗಾಗಿ ಮೊಬೈಲ್ ಅಪ್ಲಿಕೇಷನ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ. ಆಟೋ ಚಾಲಕರ ವರ್ತನೆ ಬಗ್ಗೆ ಜನರು ಈ ಅಪ್ಲಿಕೇಷನ್ ಮೂಲಕ ದೂರು ನೀಡಬಹುದಾಗಿದೆ.

ಶನಿವಾರ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ.ಸಲೀಂ ಮತ್ತು ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರು, 'ಬಿ-ಸೇಫ್' ಎಂಬ ಮೊಬೈಲ್ ಅಪ್ಲಿಕೇಷನ್‌ ಬಿಡುಗಡೆ ಮಾಡಿದ್ದಾರೆ. [ಆಟೋ ಹತ್ತಿದ ಯುವತಿ ಕೊಂಚದರಲ್ಲಿ ಬಚಾವ್]

ma saleem

ಈ ಅಪ್ಲಿಕೇಷನ್ ಮೂಲಕ ಜನರು ತಾವು ಪ್ರಯಾಣ ಮಾಡುವ ಮಾರ್ಗದ ಆಟೋ ದರ ಎಷ್ಟಾಗುತ್ತದೆ? ಎಂದು ಮೊದಲೇ ಅಂದಾಜಿಸಬಹುದು. ಜಿಪಿಎಸ್ ವ್ಯವಸ್ಥೆ ಮೂಲಕ ಮಾರ್ಗವನ್ನು ತಿಳಿದುಕೊಳ್ಳಬಹುದು. ಆಟೋ ಚಾಲಕರ ವರ್ತನೆ ಕುರಿತು ಆಟೋದಿಂದಲೇ ದೂರು ನೀಡಬಹುದು. [ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮೈಸೂರಿನ ಆಟೋ ಚಾಲಕ!]

ಆಟೋ ಚಾಲಕರ ಕಿರುಕುಳವನ್ನು ತಪ್ಪಿಸಲು ಈ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಪೊಲೀಸರು. ಈ ಅಪ್ಲಿಕೇಶನ್‌ನಲ್ಲಿ ಎಸ್‌ಓಎಸ್ ಎಂಬ ಆಯ್ಕೆ ಇದೆ. ಇದರ ಮೂಲಕ ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ನೇರವಾಗಿ ಮಾಹಿತಿ ರವಾನೆಯಾಗುತ್ತದೆ.

traffic police

ನೋಂದಣಿ ಮಾಡಿಕೊಳ್ಳಬೇಕು : 'ಬಿ-ಸೇಫ್' ಅಪ್ಲಿಕೇಷನ್ ಬಳಸಲು ಗ್ರಾಹಕರು ನೋಂದಣಿ ಮಾಡಿಕೊಳ್ಳಬೇಕು. ಅಪ್ಲಿಕೇಷನ್ ಇನ್‌ಸ್ಟಾಲ್ ಆದ ಬಳಿಕ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ರೂಪದಲ್ಲಿ ನೋಂದಣಿ ಸಂಖ್ಯೆ ಬರುತ್ತದೆ. ಅದನ್ನು ನಮೂದಿಸಿ ಅಪ್ಲಿಕೇಶಷನ್ ಬಳಸಬಹುದಾಗಿದೆ. [ಆಟೋ ನೆಚ್ಚಿಕೊಂಡ ಬೆಂಗ್ಳೂರು ಮಹಿಳೆಯರೇ ಹುಷಾರ್!]

Autorikshaw Passenger safety app launched. Kindly use the following link to downloadFor IOS usersbSafe App by Appobile...

Posted by Bengaluru Traffic Police onSaturday, March 19, 2016

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru city traffic police on Saturday launched smartphone application for the safety of auto passengers especially, women. bSafe application was created after a survey by the traffic police, who studied the ground realities faced by commuters.
Please Wait while comments are loading...