ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನಕ್ಕೆ ಚಾಲನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03 : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅಶ್ವಥನಾರಾಯಣ್ ಅವರ ನಾಯಕತ್ವದಲ್ಲಿ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನಕ್ಕೆ ಗಾಂಧಿ ಜಯಂತಿಯಂದು ಚಾಲನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ದೂರದೃಷ್ಟಿಯ 'ಸ್ವಚ್ಛ ಭಾರತ' ಅಭಿಯಾನದಡಿ ಈ ಕಾರ್ಯಕ್ರಮ ಆರಂಭಿಸಲಾಗಿದೆ.

ಅಕ್ಟೋಬರ್ 2ರ ಶುಕ್ರವಾರ ಡಾ.ಸಿ.ಎನ್. ಅಶ್ವಥನಾರಾಯಣ್, ನಟ ಯಶ್ ಮುಂತಾದವರು 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನದ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಬಿಬಿಎಂಪಿ, ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿ ಮನೆಯಲ್ಲಿಯೂ ಈ ಕುರಿತು ಅರಿವು ಮೂಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. [ಡಿಜಿಟಲ್ ಇಂಡಿಯಾದಿಂದ ರಾಜ್ಯಕ್ಕಾಗುವ ಲಾಭಗಳೇನು?]

malleshwaram

ಸ್ವಚ್ಛ ಭಾರತ ಹಾಗೂ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಮುಂದಿಟ್ಟುಕೊಂಡು ತ್ಯಾಜ್ಯ ನಿರ್ವಹಣೆ, ವಿಲೇವಾರಿಗಾಗಿ android app ಹಾಗೂ ನಾಗರಿಕ ದೂರುಗಳ ನಿರ್ವಹಣೆಗಾಗಿ ಕಾಲ್ ಸೆಂಟರ್‌ಗಳನ್ನು ಆರಂಭಿಸುವುದು ಸೇರಿದಂತೆ ಅಭಿಯಾನದ ಯಶಸ್ಸಿಗಾಗಿ ತಂತ್ರಜ್ಞಾನಗಳನ್ನು ಸದ್ಭಳಕೆ ಮಾಡಿಕೊಳ್ಳಲಾಗುತ್ತದೆ. [ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಸಂದರ್ಶನ]

ಮಲ್ಲೇಶ್ವರಂ ಕ್ಷೇತ್ರವನ್ನು ಉದ್ಯಾನ ನಗರಿ ಬೆಂಗಳೂರಿನ ಇತರ ಭಾಗಗಳಿಗೆ ಹಾಗೂ ಭಾರತಕ್ಕೆ ಮಾದರಿಯನ್ನಾಗಿಸುವ ದೂರದೃಷ್ಠಿಯಿಂದ ಈ ಅಭಿಯಾನವನ್ನು ಆರಂಭಿಸಲಾಗಿದ್ದು, ಶುಕ್ರವಾರ ಇದಕ್ಕೆ ಚಾಲನೆ ಸಿಕ್ಕಿದೆ.

ಅರಿವು ಮೂಡಿಸುವುದು ಹೇಗೆ? : ಪ್ರಮುಖ ಸ್ಥಳಗಳಲ್ಲಿ ಅರ್ಥಪೂರ್ಣವಾದ ಸಂದೇಶಗಳನ್ನು ಪ್ರದರ್ಶಿಸುವುದು, ನಾಗರೀಕರು/ಸಂಸ್ಥೆಗಳು/ದೇವಾಲಯಗಳು/ಸಮುದಾಯಗಳು ಸ್ವಯಂ ಸೇವಕರು ಭಾಗವಹಿಸುವಂತೆ ಮಾಡುವುದು, ತರಬೇತಿ ನೀಡುವ ಮೂಲಕ ಅರಿವು ಮೂಡಿಸುವುದು ಮುಂತಾದ ಕಾರ್ಯಕ್ರಮಗಳ ಮೂಲಕ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನದ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ.

English summary
The journey of 'Smart, Swachh Malleshwaram' started in 2008 under the leadership of Dr CN Ashwathnarayan. On Friday October 2 , 2015, Kannada film actor Yash along with many corporators joined hand together for a campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X