ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಸುಳ್ಳು ಮಾಹಿತಿ ಕೊಟ್ಟು ಆಸ್ತಿ ನೋಂದಣಿ ಮಾಡಿಸಿದ್ರಂತೆ

|
Google Oneindia Kannada News

ಬೆಂಗಳೂರು, ಜೂ. 01 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಮಾಹಿತಿ ನೀಡಿ ಆಸ್ತಿ ನೋಂದಣಿ ಮಾಡಿಸಿಕೊಂಡಿದ್ದಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಧೈರ್ಯವಿದ್ದರೆ ಅವರೇ ಈ ಕುರಿತು ವಿವರಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಕುಮಾರಸ್ವಾಮಿ ಅವರು, 'ಬೆಂಗಳೂರಿನ ಕೆಂಗೇರಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸುಳ್ಳು ಮಾಹಿತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ತಿ ನೋಂದಾಯಿಸಿಕೊಂಡಿದ್ದಾರೆ' ಎಂದು ಆರೋಪಿಸಿದರು. [ಕರ್ನಾಟಕದಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪ ಯಾರ ಮೇಲಿದೆ?]

hd kumaraswamy

'2003ರ ಮೇ 8ರಂದು ಈ ಆಸ್ತಿಯನ್ನು ನೋಂದಾಯಿಸಿಕೊಳ್ಳಲಾಗಿದೆ. ಸುಳ್ಳು ಮಾಹಿತಿ ನೀಡಿ ಇದನ್ನು ನೋಂದಾಯಿಸಲಾಗಿದೆ. ಈ ಕುರಿತು ದಾಖಲೆ ಲಭಿಸಿದೆ. ಧೈರ್ಯವಿದ್ದರೆ ಸಿದ್ದರಾಮಯ್ಯ ಅವರೇ ವಿವರಗಳನ್ನು ಬಹಿರಂಗಪಡಿಸಲಿ' ಎಂದರು. [ಲಾಟರಿ ಹಗರಣ : ಕುಮಾರಸ್ವಾಮಿ ಹೇಳುವುದೇನು?]

'ಎಚ್.ಡಿ. ದೇವೇಗೌಡ ಮತ್ತು ಅವರ ಕುಟುಂಬದವರು ಸುಳ್ಳುಗಾರರು ಎಂದು ಹೇಳುವ ಸಿದ್ದರಾಮಯ್ಯ ಅವರು ನೋಂದಣಿ ವೇಳೆ ನೀಡಿರುವ ಮಾಹಿತಿ ಸುಳ್ಳು ಎಂಬುದು ಸತ್ಯ. ಬೇಕಿದ್ದರೆ ನೀವು ಪ್ರಯತ್ನಿಸಿ ಕಚೇರಿಯಲ್ಲಿರುವ ದಾಖಲೆ ನಿಮಗೂ ಸಿಗಬಹುದು' ಎಂದು ಮಾಧ್ಯಮಗಳಿಗೆ ತಿಳಿಸಿದರು.

ಸಿಬಿಐ ತನಿಖೆ ಮಾಡಿ ಅಂದಿದ್ರು : ಶನಿವಾರ ಎಚ್.ಡಿ.ದೇವೇಗೌಡರು ತಮ್ಮ ಕುಟುಂಬದ ಆಸ್ತಿ ಬಗ್ಗೆ ಬೇಕಿದ್ದರೆ ಸಿಬಿಐ ತನಿಖೆ ಮಾಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದರು. 'ನಾವು ಪಾಳೇಗಾರರಲ್ಲ, ನಮ್ಮ ಕುಟುಂಬದ ಆಸ್ತಿ-ಪಾಸ್ತಿ ಬಗ್ಗೆ ಸಿಬಿಐ ತನಿಖೆ ಮಾಡುವುದಾದರೆ ಆನಂದವಾಗಿ ಮಾಡಿಕೊಳ್ಳಲಿ. ನಮ್ಮದೇನೂ ಅಭ್ಯಂತರವಿಲ್ಲ' ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿದ್ದರು.

ದೇವೇಗೌಡ ಕುಟುಂಬದ ಆಸ್ತಿಗಳ ಕುರಿತು ಸಿಬಿಐ ತನಿಖೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಗೌಡರು 'ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸಿಬಿಐ ತನಿಖೆ ನಡೆಸಿ' ಎಂದು ವ್ಯಂಗ್ಯವಾಡಿದ್ದರು.

English summary
Former Chief Minister H.D.Kumaraswamy said, Chief Minister Siddaramaiah registered a property by providing false information in 2003.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X