ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ರಕರ್ತ ಡಾ ಚಪ್ಪಲ್ಲಿ ಸೀತಾರಾಂ ನಿಧನಕ್ಕೆ ಸಿಎಂ ಸಂತಾಪ

By Mahesh
|
Google Oneindia Kannada News

ಬೆಂಗಳೂರು, ಸೆ. 16: ಹಿರಿಯ ಪತ್ರಕರ್ತ ಹಾಗೂ ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ದಿಗ್ಗಜ ಡಾ. ಚಪ್ಪಲ್ಲಿ ಸೀತಾರಾಂ(74) ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕನ್ನಡದ ಸಿನಿ ಸಾಪ್ತಾಹಿಕ ಮೇನಕ' ಪತ್ರಿಕೆಯಿಂದ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ 'ಕನ್ನಡಪ್ರಭ' ಪತ್ರಿಕೆಯ ಸಿನಿಮಾ ಪುರವಣಿಗೆ ಕಾಯಕಲ್ಪ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ ಡಾ ಸೀತಾರಾಂ ಅವರು ತಮ್ಮ ನೇರ ಮತ್ತು ನಿಷ್ಠೂರ ಬರವಣಿಗೆಗೆ ಮತ್ತೊಂದು ಹೆಸರಾಗಿದ್ದರು.

ಆ ಕಾಲದಲ್ಲಿ ಕನ್ನಡ ಪ್ರಭ ಪತ್ರಿಕೆಯಲ್ಲಿನ ಡಾ ಸೀತಾರಾಂ ಅವರ ಚಿತ್ರ ವಿಮರ್ಶೆಯ ಅಂಕಣವನ್ನು ಇಡೀ ಗಾಂಧೀನಗರವೇ ಎದುರು ನೋಡುತ್ತಿತ್ತು! ಮೇಲ್ನೋಟಕ್ಕೆ ಗಂಭೀರ ಸ್ವಭಾವದಂತೆ ಕಂಡರೂ, ಡಾ ಸೀತಾರಾಂ ಅವರು ಹಲವು ಹಾಸ್ಯ ಲೇಖನಗಳನ್ನು ಬರೆದಿದ್ದಾರೆ ಎಂಬುದು ಸೋಜಿಗದ ಸಂಗತಿ.

CM Siddaramaiah Condoles sad demise veteran Journalist Dr.Chappalli Sitaram

ಕನ್ನಡ ಚಲನಚಿತ್ರ ರಂಗದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಅಪಾರ ಮಾಹಿತಿ ಹೊಂದಿ ನಡೆದಾಡುವ ವಿಶ್ವಕೋಶ ಎಂದೆನಿಸಿದ್ದ ಡಾ ಸೀತಾರಾಂ ಅವರು ಚಲನಚಿತ್ರ ಸಂಬಂಧಿ ಹಲವು ಮೌಲಿಕ ಪುಸ್ತಕಗಳನ್ನೂ ಹೊರತಂದಿದ್ದಾರೆ.

ಚಿತ್ರ ನಿರ್ದೇಶಕ ಎನ್.ಲಕ್ಷ್ಮೀ ನಾರಾಯಣ್ ಅವರ ಸಿನೆಮಾಗಳ ಕುರಿತು ಸೀತಾರಾಮ್ ಅವರು ಬರೆದ ವಿಶ್ಲೇಷಣಾತ್ಮಕ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪ್ರದಾನಿಸಿ ಗೌರವಿಸಿದೆ ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಪತ್ರಕರ್ತರ ಪರಿಷತ್‌ನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದ ಡಾ ಸೀತಾರಾಂ ಅವರು ಮಲ್ಲೇಶ್ವರಂ ಬಡಾವಣೆಯಲ್ಲಿ ಶತಮಾನ ಕಂಡ ತಮ್ಮ ಮನೆಯನ್ನು ತಾವು ಬದುಕಿರುವವರೆಗೂ ಉಳಿಸಿಕೊಳ್ಳುತ್ತೇನೆ ಎಂದು ತಮ್ಮ ಆಪ್ತ ವಲಯದಲ್ಲಿ ಸದಾ ಹೇಳುತ್ತಿದ್ದರು. ಅಂತೆಯೇ, ನುಡಿದಂತೆ ನಡೆದರು ಎಂದು ಸಿದ್ದರಾಮಯ್ಯ ಅವರು ಸ್ಮರಿಸಿದ್ದಾರೆ.

ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಸೀತಾರಾಮ್ ಅವರು ಮಂಗಳವಾರ (ಸೆಪ್ಟೆಂಬರ್ 15) ನಗರದ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಇವರ ಅಂತ್ಯ ಸಂಸ್ಕಾರವು ಸಂಜೆ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು.

English summary
CM Siddaramaiah Condoles sad demise of veteran Journalist, kannada writer Dr.Chappalli Sitaram(74). Sitaram expired on Sept .15 after a brief illness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X