ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಲಕಿ ರೇಪ್ : ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿ

By Prasad
|
Google Oneindia Kannada News

ಬೆಂಗಳೂರು, ಅ. 24 : ಶಿಕ್ಷಣ ಕಾಯ್ದೆಯನ್ನು ಗಾಳಿಗೆ ತೂರಿ ತರಗತಿಗಳನ್ನು ನಡೆಸುತ್ತಿರುವ ಮತ್ತು ಮಕ್ಕಳಿಗೆ ರಕ್ಷಣೆ ನೀಡಲು ವಿಫಲವಾದ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ನೀಡಿದ್ದಾರೆ.

ಮೂರುವರೆ ವರ್ಷದ ಪುಟ್ಟ ಬಾಲಕಿಯ ಮೇಲೆ ಶಿಕ್ಷಕೇತರ ಸಿಬ್ಬಂದಿ ಅತ್ಯಾಚಾರ ನಡೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಯಾವ ಶಾಲೆಯನ್ನು ನಂಬುವುದು, ಬಿಡುವುದು ಎಂಬ ದ್ವಂದ್ವದಲ್ಲಿ ಪೋಷಕರು ಮುಳುಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆಯಾದರೂ, ಆತನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವಂತೆ ಇಂಥ ಘಟನೆ ನಡೆದಾಗ ಮಾತ್ರ ಶಾಲೆಗಳ ಅನುಮತಿ ಪತ್ರಗಳನ್ನು ಪರಿಶೀಲಿಸಲಾಗುತ್ತಿರುವುದು ನಿಜಕ್ಕೂ ದುರಾದೃಷ್ಟದ ಸಂಗತಿ. ಬೆಂಗಳೂರಿನಾದ್ಯಂತ ಹಲವಾರು ಖಾತೆಗಳನ್ನು ಕೂಡ ಆರ್ಕಿಡ್ಸ್ ಶಾಲೆ ಹೊಂದಿದೆ. ಗುಂಡಣ್ಣ ಎಂಬ ವ್ಯಕ್ತಿಯ ಫೋಟೋವನ್ನು ಬಾಲಕಿ ಗುರುತಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. [ಆರ್ಕಿಡ್ಸ್ ವಿರುದ್ಧ ಕ್ರಿಮಿನಲ್ ಕೇಸ್]

Siddaramaiah calls for action against Orchids school

ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆಯ ಒಂದು ತಂಡವನ್ನು ರಚಿಸಿ ಬೆಂಗಳೂರಿನಲ್ಲಿ ಇರುವ ಎಲ್ಲ ಶಾಲೆಗಳ ಅನುಮತಿ ಪತ್ರಗಳನ್ನು ಪರಿಶೀಲಿಸಲು ಏಕೆ ಸೂಚಿಸಬಾರದು. ಸ್ವತಃ ಶಿಕ್ಷಣ ಸಚಿವರೇ ಹಠಾತ್ತನೆ ಅನುನಾಸ್ಪದ ಶಾಲೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು, ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸುವುದು ಒಳಿತು.

ಕೆಲ ತಿಂಗಳ ಹಿಂದೆ ಮಾರತ್‌ಹಳ್ಳಿಯಲ್ಲಿರುವ ವಿಬ್ ಗಯಾರ್ ಶಾಲೆಯಲ್ಲಿ ಆರು ವರ್ಷದ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಗ ಕೂಡ ಶಾಲಾ ಆಡಳಿತ ಮಂಡಳಿ, ಈ ಘಟನೆ ಶಾಲೆಯಲ್ಲಿ ನಡೆದೇ ಇಲ್ಲ ಎಂದು ಕೈತೊಳೆದುಕೊಳ್ಳಲು ಯತ್ನಿಸಿತ್ತು. ಆ ಶಾಲೆ ಕೂಡ ಹಲವಾರು ಸೂಚನೆಗಳನ್ನು, ಶಿಕ್ಷಣ ಕಾಯ್ದೆಗಳನ್ನು ಗಾಳಿಗೆ ತೂರಿತ್ತು. [ವಿಬ್ ಗಯಾರ್ ಅತ್ಯಾಚಾರ ಪ್ರಕರಣ]

ಶಿಕ್ಷಣ ಕಾಯ್ದೆಗಳನ್ನು ಗಾಳಿಗೆ ತೂರಿರುವ ಆರ್ಕಿಡ್ಸ್ ಶಾಲೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆಯಾದರೂ, ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಇಂಥ ಹಲವಾರು ಶಾಲೆಗಳ ಮೇಲೆ ದಾಳಿ ಮಾಡಿ ಯಾಕೆ ತಪಾಸಣೆ ನಡೆಸುತ್ತಿಲ್ಲ ಎಂಬುದು ಬಗೆಹರಿಯಲಾಗದ ಪ್ರಶ್ನೆ.


ಅಲ್ಲದೆ, ಹೀಗೆ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡುತ್ತಿರುವ ಶಿಕ್ಷಣ ಇಲಾಖೆಯ ಮೇಲೆಯೂ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು ಕ್ರಮ ಜರುಗಿಸಲಿ. ಶಾಲೆ ನಡೆಸಲು ಪಾಲಿಸಬೇಕಾಗಿರುವ ನಿಮಯಗಳನ್ನು ಸರಕಾರ ಮರುಪರಿಶೀಲಿಸಲಿ. ಶಾಲೆಗಳು ಮಕ್ಕಳ ರಕ್ಷಣೆಗಾಗಿ ವಿಧಿಸಲಾಗಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಿ. [ಮಕ್ಕಳ ರಕ್ಷಣೆಗೆ ಮಾರ್ಗಸೂಚಿ]

ಕೆಂಗೇರಿ ಉಪನಗರದಲ್ಲಿರುವ ಒಂದು ಕ್ರಿಶ್ಚಿಯನ್ ಶಾಲೆಯಲ್ಲಿ ಕಾಟಾಚಾರಕ್ಕೆ ಮಾತ್ರ ಕನ್ನಡ ಶಾಲೆಗಳನ್ನು ನಡೆಸಲಾಗುತ್ತಿದೆ. ಒಂದರಿಂದ ಹತ್ತನೇ ತರಗತಿವರೆಗೆ ಇರುವ ಮಕ್ಕಳ ಸಂಖ್ಯೆ ಯಾವುದೇ ಆಂಗ್ಲ ಭಾಷೆಯ ಒಂದು ತರಗತಿಯ ಮಕ್ಕಳ ಸಂಖ್ಯೆಯನ್ನು ದಾಟುವುದಿಲ್ಲ. ಹೀಗಿದ್ದರೂ, ರಾಜಾರೋಶವಾಗಿ ಕರ್ನಾಟಕ ಸರಕಾರದಿಂದ ಅನುದಾನವನ್ನು ಪಡೆಯುತ್ತಿದೆ.

English summary
Chief minister Siddaramaiah has directed the police to expedite the action against the Orchids international school in Bangalore, where 3 and half year of old girl was allegedly raped by staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X