ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದೇನಿದು! ಬೆಂಗಳೂರಿನಲ್ಲಿ 'ದೇಶದ್ರೋಹದ' ಪ್ರತಿಭಟನೆ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 15: ಎಂಥಾ ಕಾಲ ಬಂತಪ್ಪಾ? ಎಂದು ಹೇಳುವ ಪರಿಸ್ಥಿತಿ ಈಗ ಬಂದಿದೆ. ಭಾರತದ ಸೇನೆಯನ್ನೇ ವಿರೋಧಿಸಿ ಪ್ರತಿಭಟನೆಯೊಂದು ನಡೆಯಲಿದೆ. ಅದು ರಾಜಧಾನಿ ಬೆಂಗಳೂರಿನ ಹೃದಯ ಭಾಗ ಮೈಸೂರು ಬ್ಯಾಂಕ್ ವೃತ್ತದಲ್ಲಿ.

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಭಯೋತ್ಪಾದಕ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಖಂಡಿಸಿ 'ವಿ ಸ್ಟಾಂಡ್ ವಿತ್ ಕಾಶ್ಮೀರ' ಎಂಬ ಸಂಘಟನೆ ಜುಲೈ 16 ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಇದಕ್ಕೆ ಬೆಂಗಳೂರಿನ ಕೆಲವು ಸಂಘಟನೆಗಳು ಬೆಂಬಲ ನೀಡಿವೆ.[ಕಾಶ್ಮೀರದಲ್ಲಿ 21 ವರ್ಷದ ಹಿಜ್ಬುಲ್‌ ಮುಜಾಹಿದ್ದಿನ್‌ ಕಮಾಂಡರ್ ಹತ್ಯೆ]

bengaluru

ಪ್ರತಿಭಟನೆ ನಡೆಸಲು ಮುಂದಾದವರ ಬೇಡಿಕೆಗಳನ್ನು ಕೇಳಿದರೆ ಏನು ಹೇಳುವುದು ತಿಳಯದಾಗಿದೆ. ಸುಮ್ಮನೆ ಬೇಡಿಕೆ ಪಟ್ಟಿಯನ್ನು ಒಮ್ಮೆ ನೋಡಿಕೊಂಡು ಬನ್ನಿ...
* ಕಾಶ್ಮೀರದಲ್ಲಿ ಗಲಭೆ ನಡೆಯುತ್ತಿರುವ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು
* ಭಾರತ ಆಕ್ರಮಿಸಿಕೊಂಡಿರುವ ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಬೇಕು!
* ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾತಂತ್ರ್ಯವನ್ನು ನೀಡಿ
* ಗಡಿ ಭಾಗದಲ್ಲಿ ಮೂಲ ಸೌಕರ್ಯ ನೀಡಿ, ವೈದ್ಯಕೀಯ ಸೇವೆಗಳನ್ನು ಮರುಸ್ಥಾಪಿಸಿ [ಕಾಶ್ಮೀರದಲ್ಲಿ ಹಿಂಸಾಚಾರ: ಗುಪ್ತಚರ ಇಲಾಖೆಯ ಸ್ಪೋಟಕ ಮಾಹಿತಿ]

ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಸಂಘಟನೆ ಪ್ರತಿಭಟನೆ ಬಗ್ಗೆ ಬರೆದುಕೊಂಡಿದೆ. ಜಾಲತಾಣಗಳಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಪ್ರತಿಭಟನೆ ನಡೆಸಲು ಅವಕಾಶ ನೀಡಬಾರದು ಎಂದು ಬೆಂಗಳೂರು ಪೊಲೀಸರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.

ಪ್ರತ್ಯೇಕತಾವಾದಿಗಳ ಪ್ರತಿಭಟನೆ ದೇಶದ್ರೋಹದ ಕೆಲಸ ಎಂದಿರುವ ಉತ್ತಿಷ್ಠ ಭಾರತ ಪ್ರತಿಭಟನೆ ನಡೆಸಲು ಅವಕಾಶ ನೀಡಬಾರದು ಎಂದು ಒತ್ತಾಯ ಮಾಡಿದೆ.

English summary
This is the real shocking news for all Indian citizens. A group of people called for a protest at Mysuru Bank Circle Bengaluru on 16 July 2016 against Indian Army. The group is supporting secession of Kashmir and is expressing its solidarity and support to terrorists organisations working in Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X