ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಕ್ರೀದ್‌ ಹಬ್ಬ, ಕುರಿಗಳಿಗೆ ಸಖತ್ ಡಿಮಾಂಡ್

|
Google Oneindia Kannada News

ಬೆಂಗಳೂರು, ಸೆ. 29 : ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕುರಿ ಮತ್ತು ಮೇಕೆಗಳ ವ್ಯಾಪಾರ ಬಿರುಸಿನಿಂದ ಆರಂಭವಾಗಿದ್ದು, ಅವುಗಳ ಬೆಲೆಗಳು ಹೆಚ್ಚಾಗುತ್ತಿದೆ. ಕುರಿಗಳ ಬೆಲೆ 30 ಸಾವಿರವಾಗಿದ್ದರೆ ಮೇಕೆಗಳ ಬೆಲೆ 50 ಸಾವಿರದ ಗಡಿ ದಾಟಿದೆ.

ಬೆಂಗಳೂರು ನಗರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಕುರಿ ವ್ಯಾಪಾರಿಗಳು ಆಗಮಿಸಿದ್ದು, ವ್ಯಾಪಾರ ಭರ್ಜರಿಯಾಗಿ ಆರಂಭವಾಗಿದೆ. ಅ.3 ಮತ್ತು 4 ರಂದು ಬಕ್ರೀದ್ ಹಬ್ಬವಿದ್ದು ಕುರಿ ಮತ್ತು ಮೇಕೆಯ ವ್ಯಾಪಾರ ಭರ್ಜರಿಯಾಗಿ ಆರಂಭವಾಗಿದೆ.

Bakrid

ಭಾನುವಾರ ಕುರಿಯೊಂದಕ್ಕೆ 30 ಸಾವಿರವಾದರೆ ಮೇಕೆ ಬೆಲೆ 50 ಸಾವಿರವಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ. ಚಾಮರಾಜಪೇಟೆಯ ಮೈದಾನದಲ್ಲಿ ಹಲವು ಕುರಿ ವ್ಯಾಪಾರಸ್ಥರು ಬೀಡು ಬಿಟ್ಟಿದ್ದು, ಮಾರಾಟ ಆರಂಭಿಸಿದ್ದಾರೆ. ಅದರಲ್ಲಿ ಪ್ರಸಿದ್ಧಿ ಪಡೆದಿರುವ ಬನ್ನೂರು ಕುರಿಯ ಬೆಲೆ ಹಬ್ಬ ಹತ್ತಿರವಾದಂತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. [ಬೆಂಗ್ಳೂರಲ್ಲಿ ಶಾರುಖ್, ಸಲ್ಮಾನ್ ಬಕ್ರಾಗೆ ಬೇಡಿಕೆ ಹೆಚ್ಚು]

ಬೆಲೆ ಏರುವ ಮೊದಲೇ ಕುರಿ ಕೊಂಡುಕೊಳ್ಳುವ ಉತ್ಸಾಹದಲ್ಲಿದ್ದ ಜನರು ದರ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಮದನಪಲ್ಲಿ, ಪುಂಗನೂರು, ಚಿತ್ತೂರು, ಭಾಗಗಳಿಂದ ರೈತರು ಮತ್ತು ಕೆಲವು ವ್ಯಾಪಾರಿಗಳು ಕುರಿ, ಮೇಕೆಗಳೊಂದಿಗೆ ಬೆಂಗಳೂರಿಗೆ ಬಂದಿದ್ದು ವ್ಯಾಪಾರ ಆರಂಭಿಸಿದ್ದಾರೆ. [ಜಾನುವಾರುಗಳ ಜೀವ ಕಾಪಾಡಿ]

ಬಕ್ರೀದ್ ಹಬ್ಬದಲ್ಲಿ ಗೋವುಗಳನ್ನು ಬಲಿಕೊಡಲಾಗುತ್ತದೆ ಆದ್ದರಿಂದ ಅವುಗಳ ಹತ್ಯೆಯನ್ನು ತಡೆಯಬೇಕು ಗೋ ಜ್ಞಾನ ಪೌಂಢೇಷನ್‌ ಬಿಬಿಎಂಪಿ, ಲೋಕಾಯುಕ್ತರಿಗೆ ಕಳೆದ ವಾರ ದೂರು ಸಲ್ಲಿಸಿದ್ದಾರೆ. ಬೆಂಗಳೂರು ಮಹಾನಗರಕ್ಕೆ ಒಂದು ಲಕ್ಷಕ್ಕೂ ಅಧಿಕ ಜಾನುವಾರುಗಳನ್ನು ತರಿಸಿಕೊಳ್ಳಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

English summary
Sheep become expensive in Bangaloe ahead of the Bakrid celebration on October 3 and 4. Bannur sheep are in great demand across city. Sheep sellers for various parts of Karnataka arrived for city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X