ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣರಾಜ್ಯೋತ್ಸವ : ಬೆಂಗಳೂರಿನಲ್ಲಿ ಭದ್ರತೆ ಹೇಗಿದೆ?

|
Google Oneindia Kannada News

ಬೆಂಗಳೂರು, ಜ.24 : ಮಾಣಿಕ್ ಷಾ ಮೈದಾನದ ಸುತ್ತ 36 ಸಿಸಿ ಕ್ಯಾಮೆರಾ, 9 ಡಿಸಿಪಿ, 22 ಎಸಿಪಿ, 96 ಇನ್ಸ್‌ಪೆಕ್ಟರ್‌ಗಳ ನಿಯೋಜನೆ, 150 ಮಂದಿ ಮಫ್ತಿ ಪೊಲೀಸರ ಕಾವಲು ಮುಂತಾದವು ಗಣರಾಜ್ಯೋತ್ಸವ ಭದ್ರತೆಗಾಗಿ ಬೆಂಗಳೂರಿನಲ್ಲಿ ಪೊಲೀಸರು ತೆಗೆದುಕೊಂಡಿರುವ ಕ್ರಮಗಳು.

ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಗರದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಕುರಿತು ಮಾಹಿತಿ ನೀಡಲು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದರು. ಗಣರಾಜ್ಯೋತ್ಸವದ ಸಮಾರಂಭ ನಡೆಯುವ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದರು. [ಮಾಣಿಕ್ ಷಾ ಬಗ್ಗೆ ಓದಿ]

mn reddi

ಮೈದಾನದ ಸುತ್ತ 36 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. 15 ದಿನಗಳಿಂದ ಮೈದಾನ ಬಳಿ ಶಸ್ತ್ರ ಸಜ್ಜಿತ ಪೊಲೀಸರು ಕಾವಲಿದ್ದು, ಅಗತ್ಯ ಮೆನ್ನೆಚ್ಚರಿಕೆಗಳನ್ನು ಕೈಗೊಂಡಿದ್ದಾರೆ. ಗೇಟ್ ಸಂಖ್ಯೆ-4ರಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳಿದರು. [ಗಣರಾಜ್ಯೋತ್ಸವಕ್ಕೆ ಒಬಾಮಾ ಬರ್ತಾರೆ]

ಇವುಗಳನ್ನು ತರಬೇಡಿ : ಗಣರಾಜ್ಯೋತ್ಸವ ಸಮಾರಂಭ ನೋಡಲು ಆಗಮಿಸುವ ಸಾರ್ವಜನಿಕರು ಸಿಗರೇಟ್, ಬೆಂಕಿ ಪೊಟ್ಟಣ, ಪಟಾಕಿ, ಕ್ಯಾಮೆರಾ, ಮೊಬೈಲ್, ಹೆಲ್ಮೆಟ್, ನೀರಿನ ಬಾಟಲ್, ತಿಂಡಿ-ತಿನಿಸು, ಬಣ್ಣದ ದ್ರಾವಣಗಳು, ಕರಪತ್ರ, ಬಾವುಟ ತರುವುದನ್ನು ನಿಷೇಧಿಸಲಾಗಿದೆ ಎಂದರು. [ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ]

9 ಡಿಸಿಪಿ, 22 ಎಸಿಪಿ, 96 ಇನ್ಸ್‌ಪೆಕ್ಟರ್‌, 7 ಸಿಎಆರ್ ತುಕಡಿ, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 327 ಎಎಸ್‌ಐ, 850 ಹೆಡ್‌ಕಾನ್ಸ್‌ಟೆಬಲ್, 1882 ಪೊಲೀಸ್ ಕಾನ್ಸ್‌ಟೆಬಲ್, 128 ಮಹಿಳಾ ಕಾನ್ಸ್‌ಟೆಬಲ್, 150 ಮಂದಿ ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗುರುತಿನ ಚೀಟಿ ಕಡ್ಡಾಯ : ಕಾರ್ಯಕ್ರಮಕ್ಕೆ ಆಗಮಿಸುವವರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿರಬೇಕು. ಅನುಚಿತ ವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು. ಡಿಸೆಂಬರ್ 28ರಂದು ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಂಡಿರುವುದರಿಂದ ಹೊಟೇಲ್‌, ಲಾಡ್ಜ್‌ಗಳ ಮೇಲೆ ನಿಗಾ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೂ ನಿಗಾ ಇರಿಸಲಾಗಿದೆ ಎಂದರು.

English summary
Bangalore Police enhanced security and stepped up vigil to ensure peaceful celebrations of the Republic Day on Monday in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X