ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ಕಿನ ಸೇತುವೆ ನಿರ್ಮಿಸಿದರೆ ಆಗಸದಲ್ಲಿ ನಕ್ಷತ್ರ ಕಾಣಿಸಲ್ಲ :ಪ್ರೊ ರಾವ್

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೂ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ನಿಂದಾಗಿ ನೆಹರು ತಾರಾಲಯಕ್ಕೆ ಧಕ್ಕೆಯಾಲಿದ್ದು, ವಿನ್ಯಾಸ ಬದಲಾವಣೆ ಮಾಡುವಂತೆ ಹಿರಿಯ ವಿಜ್ಞಾನಿ, ನೆಹರು ತಾರಾಲಯದ ಅಧ್ಯಕ್ಷ ಪ್ರೊ . ಯು.ಆರ್.ರಾವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸಂಜೆ ಮುಖ್ಯಮಂತ್ರಿಯವರನ್ನು ಯು.ಆರ್.ರಾವ್ ಭೇಟಿ ಮಾಡಿದರು. ನೆಹರು ತಾರಾಲಯಕ್ಕೆ ಇತಿಹಾಸವಿದೆ. ಇಲ್ಲಿ ಅತ್ಯಮೂಲ್ಯ ಮತ್ತು ದುಬಾರಿ ಯಂತ್ರೋಪಕರಣಗಳಿವೆ. ಪ್ರತಿ ದಿನ ಸಾವಿರಾರು ಮಂದಿ ಇಲ್ಲಿಗೆ ಬಂದು ನಕ್ಷತ್ರ ವೀಕ್ಷಣೆ ಮಾಡುತ್ತಾರೆ. ನೆಹರು ತಾರಾಲಯದ ಮೇಲೆ ಸ್ಟೀಲ್ ಬ್ರಿಡ್ಜ್ ನಿರ್ಮಿಸುವುದರಿಂದ ನಕ್ಷತ್ರಗಳ ವೀಕ್ಷಣೆಗೆ ಅಡ್ಡಿಯಾಗಲಿದೆ ಎಂದರು.

Space scientist and Former ISRO Chairman U R Rao met Chief Minister Siddaramaiah

ಉಕ್ಕಿನ ಸೇತುವೆಯಿಂದ ತರಂಗಾಂತರ ಸಂದೇಶಗಳನ್ನು ಸ್ವೀಕರಿಸಲು ಅಡ್ಡಿಯಾಗುತ್ತದೆ. ಹೀಗಾಗಿ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ವಿನ್ಯಾಸವನ್ನು ಬದಲಾವಣೆ ಮಾಡುವಂತೆ ಯುಆರ್ ರಾವ್ ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಡಿಎ ಇಂಜಿನಿಯರಿಂಗ್ ವಿಭಾಗದ ಸದಸ್ಯ ಪಿಎನ್ ನಾಯ್ದ್, ರಾಜಭವನ ರಸ್ತೆಯಿಂದ ಆರಂಭವಾಗುವ ಸೇತುವೆಯ ಭಾಗದಲ್ಲಿ 10 ಮೀಟರ್ Ramp ಮಾತ್ರ ನಿರ್ಮಿಸಲಾಗುತ್ತದೆ. ಇದರಿಂದ ನೆಹರು ತಾರಾಲಯಕ್ಕೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ.

English summary
Planetarium President and senior scientist Professor U.R. Rao immediately met Chief Minister Siddaramaiah. “We have suggested shifting the up and down ramps such that the view of the sky from the planetarium is not affected,” Prof. Rao said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X