ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಪ್ರೀಂ ಆದೇಶದಿಂದ ಆಘಾತ, ಮಹತ್ವದ ಸರ್ವಪಕ್ಷಗಳ ಸಭೆ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 01: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶುಕ್ರವಾರ ನೀಡಿದ ಆದೇಶವನ್ನು ಪಾಲಿಸುವುದರ ಬಗ್ಗೆ ಚರ್ಚಿಸಲು ಶನಿವಾರದಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಕಾವೇರಿ ಜಲವಿವಾದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ(ಅ.1) ಸರ್ವಪಕ್ಷ ಸಭೆ ಕರೆದಿದ್ದಾರೆ.

ವಿಪಕ್ಷ ಮುಖಂಡರು, ರಾಜ್ಯ ಸಚಿವರು, ಶಾಸಕರು, ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಉಭಯ ಸದನಗಳ ಸದಸ್ಯರು, ಕೇಂದ್ರ ಸಚಿವರು, ಕಾವೇರಿ ಕೊಳ್ಳದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಧಾನಸೌಧದದಲ್ಲಿ ಶನಿವಾರ ಸಂಜೆ 2ಗಂಟೆಗೆ ಸಭೆ ನಡೆಯಲಿದೆ. [ನೀರು ಬಿಡಿ, ಇಲ್ಲ ಪರಿಣಾಮ ಎದುರಿಸಿ : ಸುಪ್ರೀಂ]

SC verdict on Cauvery Dispute : CM Siddaramaiah convenes All Party Meeting

ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿ ಎಂದಿದ್ದ ಸುಪ್ರೀಂಕೋರ್ಟ್ ತನ್ನ ಆದೇಶ ಬದಲಿಸಿ ತ್ವರಿತವಾಗಿ ಮಂಡಳಿ ರಚನೆಗೆ ಆದೇಶಿಸಿದೆ. ಸುಪ್ರೀಂ ಆದೇಶಕ್ಕೆ ಕೇಂದ್ರ ಸರ್ಕಾರ ಕೂಡಾ ತಲೆ ಬಾಗಿದೆ. [ಆದೇಶ ವಿರುದ್ಧ ನಿಂತರೆ, ಕರ್ನಾಟಕದ ಗತಿ ಏನು?]

ಚರ್ಚೆ 1: ಕಾವೇರಿ ನಿರ್ವಹಣಾ ಮಂಡಳಿ(ಸಿಎಂಬಿ) ರಚನೆ: ಈ ಮಂಡಳಿಯಲ್ಲಿ ನಾಲ್ಕು ರಾಜ್ಯಗಳ ಸದಸ್ಯರು, ಕೃಷಿ ಮತ್ತು ನೀರಾವರಿ ತಜ್ಞರು, ಜಲ ಆಯೋಗದ ಅಧಿಕಾರಿಗಳು ಇರಲಿದ್ದಾರೆ. ಎಲ್ಲರನ್ನು ಕೇಂದ್ರ ಸರ್ಕಾರ ನೇಮಿಸಲಿದೆ.[ಸುಪ್ರೀಂಕೋರ್ಟ್ ಆದೇಶಕ್ಕೆ ಕರ್ನಾಟಕ ಬಗ್ಗಲೇಬೇಕು ಏಕೆ?]

ಅಕ್ಟೋಬರ್ 4 ರೊಳಗೆ ಈ ಸಮಿತಿಯಲ್ಲಿರುವ ಸದಸ್ಯರ ಪಟ್ಟಿಯನ್ನು ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರ ಸಲ್ಲಿಸಬೇಕಿದೆ. ಇದಕ್ಕಾಗಿ ರಾಜ್ಯದ ಪ್ರತಿನಿಧಿಗಳ ಹೆಸರುಗಳನ್ನು ಸಿದ್ದರಾಮಯ್ಯ ಅವರು ಸೂಚಿಸಬೇಕಿದೆ.[ನಿರ್ವಹಣಾ ಮಂಡಳೀ ರಚನೆ, ಕರ್ನಾಟಕಕ್ಕೆ ಮಾರಕ]

ಸಾಧ್ಯತೆ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ವಿರೋಧ. ಈ ಬಗ್ಗೆ ಮುಂದಿನ ವಿಚಾರಣೆಗೂ ಮುನ್ನ ಅರ್ಜಿ ಸಲ್ಲಿಸುವ ಬಗ್ಗೆ ಚರ್ಚೆ. ಜೆಡಿಎಸ್ ಈಗಾಗಲೇ ಸೂಚನೆ ನೀಡಿದೆ.

ಚರ್ಚೆ 2: ಸುಪ್ರೀಂ ಆದೇಶ : ಅಕ್ಟೋಬರ್ 01ರಿಂದ ಅಕ್ಟೋಬರ್ 06ರ ತನಕ ಪ್ರತಿ ದಿನ 6,000 ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆಸೂಚಿಸಿದೆ. ಅಂದರೆ ಸುಮಾರು 3.13 ಟಿಎಂಸಿ ನೀರು ಬಿಡಬೇಕಾಗುತ್ತದೆ.

ನಿರ್ಣಯ ಸಾಧ್ಯತೆ: ಕುಡಿಯುವುದಕ್ಕೂ ನೀರು ಇಲ್ಲದಿರುವುದರಿಂದ ಆದೇಶ ವಿಳಂಬ ಮಾಡಿ, ಅಕ್ಟೋಬರ್ 06ರಂದು ವಿಚಾರಣೆ ಎದುರಿಸಿ ಮನವಿ ಮಾಡುವುದು. ಸುಪ್ರೀಂಗೆ ಮನವರಿಕೆ ಸಾಧ್ಯವಾಗದಿದ್ದರೆ, ಮತ್ತೊಂದು ನ್ಯಾಯಪೀಠಕ್ಕೆ ಅರ್ಜಿ ವರ್ಗಾವಣೆಗೆ ಕೋರುವುದು.

English summary
Chief Minister Siidaramaiah has convened an All-party meeting of floor Leaders of both houses of State Legislature, Members of Parliament (both Rajya Sabha and Lok Sabha including central ministers representing the state) and concerned ministers of Cauvery basin and district in-charge ministers to discuss the "Cauvery Water's Issue" on Saturday(Oct 01).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X