ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರು ಪೂಲಿಂಗ್ ಬಗ್ಗೆ ಮಾಹಿತಿ ಬೇಕೆ? ವೆಬ್‌ಸೈಟ್‌ ನೋಡಿ

|
Google Oneindia Kannada News

ಬೆಂಗಳೂರು, ಜ. 27 : ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಸಿಲುಕಿದ ಜನರು ಕಾರ್ ಪೂಲಿಂಗ್ ಬಗ್ಗೆ ಕೇಳಿರುತ್ತಾರೆ. ಸದ್ಯ, ಇದಕ್ಕಾಗಿ ವೆಬ್‌ಸೈಟ್‌ವೊಂದು ಆರಂಭವಾಗಿದೆ. ಇದರ ನೆರವು ಪಡೆದು ಜನರು ಕಾರು ಪೂಲಿಂಗ್ ಮಾದರಿಯಲ್ಲಿಯೇ ಪ್ರಯಾಣ ಮಾಡಬಹುದು.

letsride.in. ಎಂಬ ವೆಬ್‌ಸೈಟ್ ಆರಂಭಗೊಂಡಿದ್ದು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಜನರು ತಮ್ಮ ಮಾರ್ಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಹುಡುಕಿ­ಕೊಳ್ಳಬಹುದು, ಅವರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಬಹುದು ನಂತರ ಇಬ್ಬರು ಒಪ್ಪಿಗೆ ನೀಡಿದರೆ ಪ್ರಯಾಣ ಮಾಡಬಹುದಾಗಿದೆ. [ಕಾರ್ ಪೂಲಿಂಗ್ ಬಗ್ಗೆ ನೀವೇನಂತೀರಿ?]

Car

ಪುಣೆ, ಮುಂಬೈ, ಹೈದರಾಬಾದ್ ಮುಂತಾದ ನಗರಗಳಲ್ಲಿ ಈ ತಾಣ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ ಸುಮಾರು 3 ಸಾವಿರ ಜನರು ಈಗಾಗಲೇ ಈ ತಾಣಕ್ಕೆ ಸೇರಿದ್ದಾರೆ. ಜನರಿಗೆ ಮತ್ತಷ್ಟು ಹತ್ತಿರವಾಗಲು ಈ ವೆಬ್‌ಸೈಟ್‌ ಶೀಘ್ರದಲ್ಲೇ ಮೊಬೈಲ್ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಲಿದೆ. [ಕಾರ್ ಪೂಲಿಂಗ್ ಮಾಡಿ ಇಂಧನ ಉಳಿಸಿ]

ಈ ವೆಬ್‌ಸೈಟ್ ಸಂಸ್ಥಾಪಕರಲ್ಲಿ ಒಬ್ಬರಾದ ರಾಜ್‌ ಕುಮಾರ್‌ ಮುಂಡೇಲ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಜನರು ಸಂಚಾರ ದಟ್ಟಣೆಯಲ್ಲಿ ಗಂಟೆಗಟ್ಟಲೆ ಸಿಲುಕುತ್ತಾರೆ.

ಇಂತಹ ಜನರಿಗೆ ನೆರವಾಗಲು ಈ ವೆಬ್‌ಸೈಟ್ ಆರಂಭಿಸಲಾಗಿದೆ. ಈ ಸೈಟ್‌ಗೆ ಭೇಟಿ ನೀಡಿ ಜನರು ಕಾರು, ಬೈಕ್‌ ಅಥವಾ ಆಟೋದಲ್ಲಿ ಜತೆಯಲ್ಲಿ ಪ್ರಯಾಣಿಸಬಹುದು. ಶೀಘ್ರದಲ್ಲೇ ನಾವು ಮೊಬೈಲ್ ಅಪ್ಲಿಕೇಶನ್ ಆರಂಭಿಸಲಿದ್ದೇವೆ ಎಂದು ಮಂಡೇಲ್ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9049351066 ನಂಬರ್‌ಗೆ ಕರೆ ಮಾಡಬಹುದಾಗಿದೆ.

English summary
Bengaluru : Say goodbye to your traffic woes with Letsride.in. Lets-ride website will connect people from same area to improve your commute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X