ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕೆರೆ ಸಂರಕ್ಷಣೆ ಬಗ್ಗೆ ಸಿದ್ದುಗೆ ಎಳ್ಳಷ್ಟೂ ಕಾಳಜಿಯಿಲ್ಲ'!

By Prasad
|
Google Oneindia Kannada News

ಬೆಂಗಳೂರು, ಜೂನ್ 24 : ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಿಯಲ್ ಎಸ್ಟೇಟ್ ಕುಳಗಳನ್ನು ರಕ್ಷಿಸಲು ಏನು ಬೇಕೆಲ್ಲಾ ಮಾಡುತ್ತಾರೆ. ಆದರೆ, ಇಂಥವರಿಂದಲೇ ಸರ್ವನಾಶವಾಗುತ್ತಿರುವ ಕೆರೆಗಳ ಸಂರಕ್ಷಣೆಯ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ ಎಂದು ಕೆರೆಗಳನ್ನು ಉಳಿಸಲು ಹೋರಾಡುತ್ತಿರುವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆ ರಕ್ಷಣೆ ಕಾರ್ಯಕ್ಕೆ ಯುನೈಟೆಡ್ ಬೆಂಗಳೂರು ಜತೆಗೆ ರಾಜೀವ್ ಚಂದ್ರಶೇಖರ್ಕೆರೆ ರಕ್ಷಣೆ ಕಾರ್ಯಕ್ಕೆ ಯುನೈಟೆಡ್ ಬೆಂಗಳೂರು ಜತೆಗೆ ರಾಜೀವ್ ಚಂದ್ರಶೇಖರ್

ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆಂದು ಸಾಕಷ್ಟು ಪ್ರಯತ್ನ ನಡೆಸಿರುವ ಯುನೈಟೆಡ್ ಬೆಂಗಳೂರು ಸಂಸ್ಥೆಯ ಆಶ್ರಯದಲ್ಲಿ ಶನಿವಾರ ಅಬ್ಬಿಗೆರೆ ಕೆರೆಯಂಗಳದಲ್ಲಿ, ಮಕ್ಕಳು, ಹೆಂಗಸರು ಸೇರಿದಂತೆ ಹಲವಾರು ಪರಿಸರ ಪ್ರೇಮಿಗಳು ಭಾಗವಹಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

Save lake campaign by United Bengaluru

2018ರ ಏಪ್ರಿಲ್ 10ರಂದು ನೂರನೇ ಹುಟ್ಟುಹಬ್ಬ ಆಚರಿಸಲಿರುವ ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿಯವರು ಈ ಅಭಿಯಾನದಲ್ಲಿ ಭಾಗವಹಿಸಿ, ಸಾವಿನಂಚಿನಲ್ಲಿರುವ ಕೆರೆಗಳನ್ನು ಉಳಿಸಲು ನಡೆಯುತ್ತಿರುವ ಹೋರಾಟದಲ್ಲಿ ಧುಮುಕಿದ್ದು ಹಲವರಲ್ಲಿ ಉತ್ಸಾಹ ಇಮ್ಮಡಿಯಾಗುವಂತೆ ಮಾಡಿತು.

ಯುನೈಟೆಡ್ ಬೆಂಗಳೂರಿನಿಂದ ಶನಿವಾರ ಕೆರೆಗಳ ಪರಿಶೀಲನೆಯುನೈಟೆಡ್ ಬೆಂಗಳೂರಿನಿಂದ ಶನಿವಾರ ಕೆರೆಗಳ ಪರಿಶೀಲನೆ

ಈ ಸಂದರ್ಭದಲ್ಲಿ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಕೆರೆಗಳನ್ನು ಆಕ್ರಮಿಸಿಕೊಂಡು ಬಡಾವಣೆ ನಿರ್ಮಿಸುತ್ತ, ಕೆರೆಯನ್ನು ಕೊಲ್ಲುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಬೇಕು, 5 ಲಕ್ಷ ರುಪಾಯಿ ದಂಡ ವಿಧಿಸಬೇಕು ಎಂದು ಭಾಗವಹಿಸಿದವರು ಆಕ್ರೋಶ ವ್ಯಕ್ತಪಡಿಸಿದರು.

105 ಎಕರೆಯಷ್ಟಿರುವ ಚಿಕ್ಕಬಾಣಾವರ ಕೆರೆ, ಭೂಗಳ್ಳರಿಂದಾಗಿ ಸರ್ವನಾಶವಾಗುತ್ತಿದೆ, ಕಸಕಡ್ಡಿ ತಂದು ಹಾಕಲಾಗುತ್ತಿದೆ, ಹೊಲಸು ನೀರು ಬಂದು ಕೆರೆಯನ್ನು ಸೇರಿ ವಿಷಕಾರಿಯನ್ನಾಗಿ ಮಾಡುತ್ತಿದೆ, ಹತ್ತಿರದ ವೈದ್ಯಕೀಯ ಕಾಲೇಜಿನಿಂದ ತ್ಯಾಜ್ಯ ಬಂದು ಕೆರೆಯನ್ನು ಸೇರುತ್ತಿದೆ ಎಂದು ಆರೋಪಿಸಲಾಯಿತು.

ಕಾಮಗೆರೆಯಲ್ಲಿ ಮಳೆ ಬಂದರೂ ಕೆರೆ ತುಂಬಿಲ್ಲ!ಕಾಮಗೆರೆಯಲ್ಲಿ ಮಳೆ ಬಂದರೂ ಕೆರೆ ತುಂಬಿಲ್ಲ!

ಶೆಟ್ಟಿಹಳ್ಳಿ ಕಾರ್ಪೊರೇಟರ್ ಆಗಿರುವ ನಾಗಭೂಷಣ್ ಅವರು ಸ್ಥಳಕ್ಕೆ ಆಗಮಿಸಿ, ಅಬ್ಬಿಗೆರೆ ಕೆರೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು, ಭೂಒತ್ತುವರಿಯನ್ನು ತಡೆಗಟ್ಟಲಾಗುವುದು ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.

ಇನ್ನು, 70 ಎಕರೆಯಷ್ಟಿರುವ ಸಿಂಗಾಪುರ ಕೆರೆಗೆ ಹಾಳುಮೂಳು ಕಸಕಡ್ಡಿಯನ್ನು ತಂದು ತುಂಬಲಾಗುತ್ತಿದೆ. ಯುನೈಟೆಡ್ ಬೆಂಗಳೂರು ಸಂಸ್ಥೆ ನೇತೃತ್ವದಲ್ಲಿ ಎಲ್ಲರೂ ಹೋರಾಟ ನಡೆಸಿದರೆ ಮೊದಲಿನ ಕೆರೆಯ ಸೌಂದರ್ಯವನ್ನು ಮರಳಿ ತರಬಹುದು ಎಂದು ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

English summary
Several residents under the leadership of freedom fighter, nonagenarian HS Doreswamy participated in Save Lake campaign organized by United Bengaluru organization in Chikka Banavara, Abbigere and Singapura lake on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X