ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆ ಶುದ್ಧಿಗೆ ನಮ್ಮ 'ಬೆಂಗಳೂರು ಫೌಂಡೇಷನ್ ' ಸೂತ್ರ

|
Google Oneindia Kannada News

ಬೆಂಗಳೂರು, ಏಪ್ರಿಲ್, 14 : ನಮ್ಮ ಸ್ವಯಂಕೃತ ತಪ್ಪಿನಿಂದ ಕಲುಷಿತಗೊಂಡು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಬೆಳ್ಳಂದೂರು ಕೆರೆ ಶುದ್ಧಿಗೆ "ನಮ್ಮ ಬೆಂಗಳೂರು ಫೌಂಡೇಷನ್" ವರದಿಯೊಂದನ್ನು ಸಿದ್ಧ ಮಾಡಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ನೀಡಿದೆ.

ವರದಿ ಸ್ವೀಕರಿಸಿದ ಜಾರ್ಜ್, ಕೆರೆ ನೀರನ್ನು ಸಂಪೂರ್ಣ ಖಾಲಿ ಮಾಡಿ ಶುದ್ಧೀಕರಿಸುವುದೋ ಅಥವಾ ಹಾಗೆಯೇ ಶುದ್ಧೀಕರಿಸಬೇಕೇ ಎಂಬ ಬಗ್ಗೆ ಕಾರ್ಯಾಗಾರ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.[ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ]

lake

ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಸುಮಾರು 2 ವರ್ಷಗಳಾದರೂ ಬೇಕು. ಹಾಗಾಗಿ ಸದ್ಯದ ಮಟ್ಟಿಗೆ ಕರೆಯ ನೀರಿನಲ್ಲಿರುವ ರಾಸಾಯನಿಕ ಅಂಶ ಮುಕ್ತಗೊಳಿಸಲು ತಾತ್ಕಾಲಿಕ ಪರಿಹಾರ ಹುಡುಕಿಕೊಳ್ಳಬೇಕಿದೆ. ಇದಕ್ಕೆ 15 ಕೋಟಿ ರೂ. ಅಗತ್ಯವಿದ್ದು ಸರ್ಕಾರ ನೀಡಲು ಸಿದ್ಧವಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.[ಬೆಂಗಳೂರು ಬೆಳ್ಳಂದೂರು ಕೆರೆ ಬಿಳಿನೊರೆಯ ರಹಸ್ಯ ಲೀಕ್]

ಸ್ಥಳೀಯರ ಮತ್ತು ಸಂಘ ಸಂಸ್ಥೆಗಳ ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲದೇ ವಿದೇಶಿ ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದ್ದಾರೆ.

ನಮ್ಮ ಬೆಂಗಳೂರು ಫೌಂಡೇಷನ್‌ ಸಲಹೆಗಳೇನು?
* ಸುಮಾರು 40ಕ್ಕೂ ಹೆಚ್ಚು ಕೆರೆಗಳ ನೀರು ಬಂದು ಸೇರುವ ಈ ಕೆರೆಯ ನವೀಕರಣಕ್ಕೆ 400 ಕೋಟಿ ರು. ಬೇಕು
* ಥಸ್ಟ್‌ ಬೋರಿಂಗ್‌ ವಿಧಾನ ಬಳಸಿ 2 ಕಡೆ ನಿಯಂತ್ರಿತವಾಗಿ ಕೆರೆಯ ನೀರನ್ನು ಖಾಲಿ ಮಾಡುವುದು. ಆ ನೀರನ್ನು ಹರಿಸಲು ಬೆಳ್ಳಂದೂರು ಹೊರಹರಿವಿನ ಕಾಲುವೆಗೆ ಚರಂಡಿ ಸಂಪರ್ಕ ಕಲ್ಪಿಸುವುದು[ಬೆಳ್ಳಂದೂರು ಕೆರೆ ಸ್ವಚ್ಛ ಮಾಡಲು ಎಷ್ಟು ವರ್ಷ ಬೇಕು?]
* ಕೆರೆಯಲ್ಲಿ ತುಂಬಿರುವ ಗಿಡಗಂಟಿ ತೆಗೆದು ಕೆರೆಯ ಪ್ರಮುಖ ಒಳಹರಿವು ಕಾಲುವೆ ಬಳಿ ಪೂರ್ವಸಿದ್ಧತಾ ಕೆಲಸ, ಕೆರೆಯ ಮೇಲ್ಪದರದ ಮಣ್ಣು ತೆಗೆಯುವುದು,
ಕೆರೆಯ ಒಳಗೆ ತಾತ್ಕಾಲಿಕ ತಿರುವು ಚರಂಡಿ ನಿರ್ಮಾಣ ಮತ್ತು ಕೆರೆಯಂಗಳದ ರಸಾಯನಿಕ ಮಾನದಂಡಗಳನ್ನು ಅಧ್ಯಯನ ಮಾಡುವುದು
* „ಹೂಳೆತ್ತುವುದು, ತಿರುವು ಒಡ್ಡುಗಳ ನಿರ್ಮಾಣ, ಬಳಕೆಯಾಗದ ವಸ್ತುಗಳು ಸೇರುವುದನ್ನು ತಪ್ಪಿಸಲು ಸ್ಕ್ರೀನ್‌ಗಳ ಅಳವಡಿಕೆ, ಚಲ್ಲಘಟ್ಟ
ಕಾಲುವೆಯಿಂದ ಮತ್ತು ಕೋರಮಂಗಲ, ಮಡಿವಾಳ ಮತ್ತು ಇಬ್ಬಲೂರು ಕಾಲುವೆಗಳಿಂದ ಕಾಂಕ್ರೀಟ್‌ ಕಾಲುವೆ ನಿರ್ಮಾಣ, ನೈಸರ್ಗಿಕ ಸಂಸ್ಕರಣೆ ವ್ಯವಸ್ಥೆ ರೂಪಿಸುವುದು
* ಮಳೆಗಾಲದಲ್ಲಿ ಕೆರೆಗೆ ಸರಿಯಾದ ಶುದ್ಧ ನೀರು ಮಾತ್ರ ಹರಿದು ಬರುವಂತೆ ವ್ಯವಸ್ಥೆ ಮಾಡುವುದು.

ಬೆಳ್ಳಂದೂರು ಕೆರೆ ಉಳಿಸಿ

English summary
The Karnataka government may not have come up with a plan to save a foaming Bellandur Lake, but people living nearby, who are bearing the brunt of the pollution caused, have. Like other Bengalureans, who are taking the "self-help" philosophy seriously in the face of official apathy to their problems, the people here too have come up with a ‘Save Bellandur' action plan in collaboration with Namma Bengaluru Foundation. The report was handed over to Bengaluru Development Minister K. J. George.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X