ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಶಿಕಲಾ ಜೈಲ್ ಫ್ರೆಂಡ್ ಸೈನೈಡ್ ಮಲ್ಲಿಕಾ ಹಿಂಡಲಗಾ ಜೈಲಿಗೆ ಶಿಫ್ಟ್

ಶಶಿಕಲಾ ಪಕ್ಕದ ಸೆಲ್ ನಲ್ಲಿದ್ದ ಸರಣಿ ಕೊಲೆ ಪಾತಕಿ ಸೈನೈಡ್ ಮಲ್ಲಿಕಾಳನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಶಶಿಕಲಾ ಪಕ್ಕದ ಸೆಲ್ ನಲ್ಲಿದ್ದ ಸರಣಿ ಕೊಲೆ ಪಾತಕಿ ಸೈನೈಡ್ ಮಲ್ಲಿಕಾಳನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೈನೈಡ್ ಮಲ್ಲಿಕಾ ಅಲಿಯಾಸ್ ಕೆ.ಡಿ ಕೆಂಪಮ್ಮ ಶಶಿಕಲಾ ಸೆಲ್ ಪಕ್ಕದಲ್ಲೇ ಇದ್ದಾರೆ ಎಂಬುದು ಈ ಹಿಂದೆ ಸುದ್ದಿಯಾಗಿತ್ತು. ಇದೇ ವೇಳೆಗೆ ಶಶಿಕಲಾ ಜೀವಕ್ಕೆ ಅಪಾಯವಿದೆ ಎಂಬ ಸುದ್ದಿಯೂ ಓಡಾಡುತ್ತಿತ್ತು.[ಶಶಿಕಲಾ ಬರುವ ದಾರಿಯಲ್ಲಿ.. ಗಲಭೆ ಸೃಷ್ಟಿಸಲು ಸುಪಾರಿ ಕೊಟ್ಟಿದ್ರಂತೆ!]

Sasikala’s prison mate 'Cyanide' Mallika shifted to Hindalaga Jail

ಯಾರು ಈ ಸೈನೈಡ್ ಮಲ್ಲಿಕಾ?

ದೇಶದಲ್ಲಿ ಆರು ಮಹಿಳೆಯರನ್ನು ಕೊಂದ ಕಾರಣಕ್ಕೆ ಜೈಲಿಗೆ ಹೋದ ಹಂತಕಿಯರಲ್ಲಿ ಸೈನೈಡ್ ಮಲ್ಲಿಕಾ ಪ್ರಮುಖವಾದವಳು. ಬೆಂಗಳೂರಿನ ದೇವಸ್ಥಾನಗಳಿಗೆ ಬರುತ್ತಿದ್ದ ಶ್ರೀಮಂತ ಕುಟುಂಬದ ಮಹಿಳೆಯರ ಮೇಲೆ ಕಣ್ಣು ಹಾಕಿ ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಪರಿಚಯ ಆಪ್ತವಾಗುತ್ತಿದ್ದಂತೆ ಮಹಿಳೆಯರ ಚಿನ್ನಾಭರಣ ದೋಚಿ ಸೈನೈಡ್ ನೀಡಿ ಕೊಲೆ ಮಾಡುತ್ತಿದ್ದಳು. 2008ರಲ್ಲಿ ಈಕೆಯನ್ನು ಬಂಧಿಸಲಾಗಿತ್ತು.[ಪರಪ್ಪನ ಅಗ್ರಹಾರ ಮುಖ್ಯದ್ವಾರದಿಂದಲೇ ಖೈದಿ ಎಸ್ಕೇಪ್!]

ಜೈಲಿನ ಅಧಿಕಾರಿಗಳ ಪ್ರಕಾರ ಭದ್ರತಾ ದೃಷ್ಟಿಯಿಂದ ಮಲ್ಲಿಕಾಳನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಹಾಗೆ ನೋಡಿದರೆ ಮಲ್ಲಿಕಾ ಮತ್ತು ಶಶಿಕಲಾ ಮಧ್ಯೆ ಉತ್ತಮ ಬಾಂಧವ್ಯ ಇತ್ತು ಎಂದು ಜೈಲಿನ ಮೂಲಗಳು ತಿಳಿಸುತ್ತವೆ. ಊಟದ ಸಮಯದಲ್ಲಿಯೂ ಶಶಿಕಲಾ ಕ್ಯೂನಲ್ಲಿ ನಿಲ್ಲುವ ಬದಲು ಆಕೆಗೆ ಮಲ್ಲಿಕಾ ಊಟ ತಂದು ನೀಡುತ್ತಿದ್ದರು ಎಂದು ಜೈಲಿನ ಮೂಲಗಳು ತಿಳಿಸುತ್ತವೆ.[ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಳ ಪಕ್ಕ ಸೈನೈಡ್ ಮಲ್ಲಿಕಾ]

ಶಶಿಕಲಾರನ್ನು ತಮಿಳುನಾಡಿಗೆ ಶಿಫ್ಟ್ ಮಾಡಲು ಆಕೆಯ ವಕೀಲರು ಅಖಾಡಕ್ಕೆ ಇಳಿದಿರುವ ಸಮಯದಲ್ಲೇ ಮಲ್ಲಿಕಾರನ್ನು ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಶಶಿಕಲಾ ಜೀವಕ್ಕೆ ಅಪಾಯವಿದೆ ಎಂದು ಸಬೂಬು ಹೇಳಿದ್ದ ಆಕೆಯ ವಕೀಲರು ಈಗ ಯಾವ ಕಾರಣ ನೀಡುತ್ತಾರೋ ಗೊತ್ತಿಲ್ಲ.

English summary
A serial killer 'Cyanide' Mallika was shifted to Hindalaga prison in Belagavi. Earlier the notorious killer was housed next to the cell of AIADMK leader Sasikala Natarajan in Parappana Agrahara central prison Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X