ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಶಿಕಲಾ ಅವರ ವಾಹನಗಳ ಮೇಲೆ ದಾಳಿ, ಪರಿಸ್ಥಿತಿ ಉದ್ವಿಗ್ನ

ಜಯಲಲಿತಾ ಅವರ ಸಮಾಧಿ ಮುಟ್ಟಿ ಶಪಥಗೈದು, ಎಂಜಿ ರಾಮಚಂದ್ರನ್ ಸ್ಮಾರಕದ ಬಳಿ ಧ್ಯಾನ ಮಾಡಿದ ಬಳಿಕ ಚೆನ್ನೈನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದತ್ತ ಶಶಿಕಲಾ ನಟರಾಜನ್ ಅವರಿರುವ ಕಾರು ಹೊರಟಿದೆ

By Mahesh
|
Google Oneindia Kannada News

ಚೆನ್ನೈ, ಫೆಬ್ರವರಿ 15 : ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡಿರುವ ಶಶಿಕಲಾ ನಟರಾಜನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಇದೀಗ ಆಗಮಿಸಿದ್ದಾರೆ. ಜಯಲಲಿತಾ ಈ ಹಿಂದೆ ಇಲ್ಲಿಗೆ ಬಂದು ಜೈಲು ಸೇರಿದ್ದ ಕಾರಿನಲ್ಲಿಯೇ ಶಶಿಕಲಾ ಕೂಡ ಬಂದಿದ್ದಾರೆ.

ಮರೀನಾ ಬೀಚಿನ ಬಳಿ ಇರುವ ದಿವಂಗತ ಜೆ ಜಯಲಲಿತಾ ಅವರ ಸಮಾಧಿ ಮುಟ್ಟಿ ಶಪಥಗೈದರು. ನಂತರ ಟಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ ಸ್ಮಾರಕದ ಬಳಿ ಕೆಲ ಕಾಲ ಧ್ಯಾನ ಮಾಡಿದ ಬಳಿಕ ಚೆನ್ನೈನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದತ್ತ ಶಶಿಕಲಾ ನಟರಾಜನ್ ಅವರಿರುವ ಕಾರು ಹೊರಟಿದೆ.. ಲೈವ್ ಅಪ್ಡೇಟ್ಸ್ ಓದಿ...[ಜಯಲಲಿತಾ 100 ಕೋಟಿ ದಂಡವನ್ನು ಕೊರ್ಟ್ ಹೀಗೆ ವಸೂಲಿ ಮಾಡುತ್ತೆ!]

Sasikala Natarajan to appear before Special court in Parappana Agrahara Updates


5:50 : ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಆವರಣದಲ್ಲಿರುವ ವಿಶೇಷ ನ್ಯಾಯಾಲಯದ ಜಡ್ಜ್ ಅಶ್ವಥನಾರಾಯಣ ಅವರ ಮುಂದೆ ಶಶಿಕಲಾ, ಇಳವರಸಿ, ಸುಧಾಕರನ್ ಅವರು ಶರಣಾಗಿದ್ದಾರೆ.
5.45: ಜಯಲಲಿತಾ ಬೆಂಬಲಿಗರಿಂದ ಶಶಿಕಲಾ ವಿರುದ್ಧ ಆಕ್ರೋಶ, ಜೈಲಿನ ಆವರಣದಲ್ಲಿದ್ದ ಶಶಿಕಲಾ ಬೆಂಬಲಿಗರ ಕಾರಿನ ಮೇಲೆ ಕಲ್ಲು ತೂರಾಟ. ಪರಿಸ್ಥಿತಿ ಉದ್ವಿಗ್ನ


5.30: ಪರಪ್ಪನ ಅಗ್ರಹಾರ ಜೈಲಿಗೆ ಶಶಿಕಲಾ ಹಾಗೂ ಸಂಗಡಿಗರು ಹಾಜರ್.
4.45: ಹೊಸೂರು ದಾಟಿ, ಕರ್ನಾಟಕ ಗಡಿ ಪ್ರವೇಶಿಸಿದ ಶಶಿಕಲಾ ನಟರಾಜನ್.
4.35: ಕೃಷ್ಣಗಿರಿ ಟೋಲ್ ದಾಟಿ ಬರುತ್ತಿರುವ ಶಶಿಕಲಾ ನಟರಾಜನ್, ಜಯಲಲಿತಾ ಅವರ ಕಾರಿನಲ್ಲೇ ಪಯಣ.
4.15: ಶಶಿಕಲಾ ಆಗಮನಕ್ಕೆ ಮುಂಚಿತವಾಗಿ ಕೋರ್ಟಿಗೆ ಬಂದಿರುವ ಶಶಿಕಲಾ ಅವರ ಪತಿ ನಟರಾಜನ್.

4.00: ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಜಡ್ಜ್ ಅಶ್ವಥನಾರಾಯಣ ಆಗಮನ.
3.45: ಲೋಕಸಭೆ ಡೆಪ್ಯುಟಿ ಸ್ಪೀಕರ್ ತಂಬಿದೊರೈ ಹಾಗೂ ಶಶಿಕಲಾ ಬೆಂಬಲಿಗರ ದಂಡು ಜೈಲಿನ ಬಳಿ ನೆರೆದಿದೆ.

2.10: ಬೆಂಗಳೂರಿನ ವಿಶೇಷ ನ್ಯಾಯಾಲಯದ ಜಡ್ಜ್ ಮುಂದೆ ಶರಣಾಗತರಾದ ಮೇಲೆ ಮೂವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದು ನಂತರ ಜೈಲಿನಲ್ಲಿ ಸೆಲ್ ಮಂಜೂರು ಹಾಗೂ ಕೈದಿಗಳ ಸಂಖ್ಯೆ ನೀಡಲಾಗುತ್ತದೆ.[ಬೇಡಿಕೆಗಳ ಮೂಟೆ ಹೊತ್ತು ಜೈಲಿಗೆ ಬರುತ್ತಿರುವ ಶಶಿಕಲಾ]
2.05: 2014ರಲ್ಲಿ ಇದ್ದ ಕೈದಿ ನಂಬರ್ ಶಶಿಕಲಾ 7403, ಇಳವರಸಿ 7403, ಸುಧಾಕರನ್ 7405.
2.00: ಚೆನ್ನೈ, ಅಂಬೂರು, ಕೃಷ್ಣಗಿರಿ, ಹೊಸೂರು ಮಾರ್ಗವಾಗಿ ಬರುತ್ತಿರುವ ಶಶಿಕಲಾ ನಟರಾಜನ್.

1.30: ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಯ ವಸ್ತ್ರಗಳನ್ನೆ ನೀಡಲಾಗುತ್ತದೆ. ದಿನಕ್ಕೆ 50 ರು ಸಂಬಳ ನೀಡಲಾಗುತ್ತದೆ. ಒಂದು ತಟ್ಟೆ, ಲೋಟ, ಚೆಂಬು, ಬಿಳಿ ಬಟ್ಟೆ

LIVE: Sasikala Natarajan to appear before Special court in Parappana Agrahara Updates

1.15: ಶಶಿಕಲಾ, ಜೆ ಇಳವರಸಿ, ವಿಎನ್ ಸುಧಾಕರನ್ ಅವರಿರುವ ಕಾರನ್ನು ಹಿಂಬಾಲಿಸುತ್ತಿರುವ 10 ಕಾರುಗಳು.
1.10: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಬುಧವಾರ ಸಂಜೆಯೊಳಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಶರಣಾಗಲಿದ್ದಾರೆ.[ಕಟಕಟನೆ ಹಲ್ಲು ಕಡಿದು ಸಮಾಧಿಗೆ ರಪ್ಪನೆ ಬಾರಿಸಿದ ಶಶಿ]
1.00: ಭದ್ರತಾ ಹಿತದೃಷ್ಟಿಯಿಂದ ಬೆಂಗಳೂರಿನ ಸಿಟಿ ಸಿವಿಎಲ್ ಕೋರ್ಟ್ ಆವರಣದಲ್ಲಿದ್ದ ವಿಶೇಷ ನ್ಯಾಯಾಲಯವನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಕರ್ನಾಟಕದ ರಿಜಿಸ್ಟ್ರಾರ್ ಸ್ಪಷ್ಟಪಡಿಸಿದ್ದಾರೆ.[ತಮಿಳುನಾಡು ಸರ್ಕಾರಿ ಕಚೇರಿ, ಅಸೆಂಬ್ಲಿಯಿಂದ ಜಯಾ ಫೋಟೊ ಔಟ್!]


12.45: ವಿಶೇಷ ನ್ಯಾಯಾಲಯದ ಮುಂದೆ ಶರಣಾಗಲು ನಾಲ್ಕು ವಾರಗಳ ಕಾಲ ಕಾಲಾವಕಾಶ ಕೋರಿದ್ದ ಶಶಿಕಲಾ ಅವರಿಗೆ ಹಿನ್ನಡೆ.
12.40: ಸುಪ್ರೀಂ ಕೋರ್ಟಿನಲ್ಲಿ ಶಶಿಕಲಾ ಸಲ್ಲಿಸಿದ್ದ ಅರ್ಜಿ ಬುಧವಾರದಂದು ವಿಚಾರಣೆ ನಡೆಸಲಾಗಿದ್ದು, ಕಾಲಾವಕಾಶ ನೀಡಲು ನಿರಾಕರಿಸಿದು, ತಕ್ಷಣ ಶರಣಾಗುವಂತೆ ಸೂಚಿಸಲಾಯಿತು.[ಕಾರಿನಲ್ಲಿ ಚೆನ್ನೈನಿಂದ ಬೆಂಗಳೂರಿನತ್ತ ಹೊರಟ ಶಶಿಕಲಾ]
12.30: ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಇನ್ನೂ ಜಡ್ಜ್ ನೇಮಕವಾಗಿಲ್ಲ. ಸೆಷನ್ಸ್ ನ್ಯಾಯಾಲಯದ ಜಡ್ಜ್ ಅಶ್ವಥನಾರಾಯಣ ಅವರೇ ಉಸ್ತುವಾರಿ ವಹಿಸಿಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)

English summary
DA case convicted Sasikala Natarajan leaves Chennai and likely to reach Bengaluru by evening and she will appear before Special court in Parappana Agrahara today(Feb 15). Registrar of Karnataka HC ordered shifting of court to Central prison from city civil court arena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X