ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಕ್ಕಿ ಕೆರೆ ತೆರವು: ದಿಢೀರ್ ಕುಸಿದು ಬಿದ್ದ ಕಟ್ಟಡ

|
Google Oneindia Kannada News

ಬೆಂಗಳೂರು, ಏ. 17: ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ. ಡಿಸಿ ಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು 800 ಸಿಬ್ಬಂದಿ ಭಾಗಿಯಾಗಿದ್ದಾರೆ. ಮೂರು ತಂಡಗಳಾಗಿ ಕೆಲಸ ನಡೆಯುತ್ತಿದೆ.

ಶುಕ್ರವಾರ ಬೆಳಗ್ಗೆ 7.30 ಕ್ಕೆ ತರವು ಕೆಲಸ ಆರಂಭ ಮಾಡಲಾಗಿದ್ದು ಸಂಜೆಯವರೆಗೂ ನಡೆಯಲಿದೆ. ಶುಕ್ರವಾರ ಬೆಳಗ್ಗೆ 7 ಅಡಿ ಕಟ್ಟಡವೊಂದನ್ನು ಕೆಡವುತ್ತಿದ್ದಾಗ ಸಂಭವಿಸಬಹುದಾಗಿದ್ದ ಅಪಘಾತ ಕೊಂಚದರಲ್ಲಿ ತಪ್ಪಿದೆ. ಹಿಟಾಚಿ ಮೂಲಕ ಕಾರ್ಯಾಚರಣೆ ಮಾಡುತ್ತಿದ್ದಾಗ ಏಳು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಘಟನೆಯಲ್ಲಿಮ ಯಾರಿಗೂ ಅಪಾಯವಾಗಿಲ್ಲ.[ಡಿಸಿ ಶಂಕರ್ ದಿಟ್ಟ ನಡೆ: ಸಾರಕ್ಕಿ ಕೆರೆ ತೆರವು ಸರ್ಕಾರಕ್ಕೆಷ್ಟು ಲಾಭ?]

lake

ಕಟ್ಟಡ ಕುಸಿದು ಬಿದ್ದ ಪರಿಣಾಮ ಹಿಟಾಚಿ ಯಂತ್ರದ ಮೇಲೆ ಅವಶೇಷಗಳು ಬಿದ್ದವು. ಚಾಲಕ ಕೊಂಚದರಲ್ಲಿ ಪಾರಾಗಿದ್ದು ಯಂತ್ರವನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ಈ ರೀತಿಯ ಮೂರ್ನಾಲ್ಕು ಅಪಾರ್ಟ್ ಮೆಂಟ್ ಗಳನ್ನು ತೆರವು ಮಾಡಬೇಕಿದೆ. 8 ಜೆಸಿಬಿಗಳು ಕೆಲಸದಲ್ಲಿ ತೊಡಗಿಕೊಂಡಿದ್ದು ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗದೆ. ಪೂರ್ವಾಂಕರ ಅಪಾರ್ಟ್ ಮೆಂಟ್ ನಿಂದಲೂ ಜಾಗ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ.[ಸಾರಕ್ಕಿ ಕೆರೆ ತೆರವು: 2 ಸಾವಿರ ಕೋಟಿ ಮೌಲ್ಯದ ಜಾಗ ವಶ]

ಕಟ್ಟಡ ದೀಢಿರ್ ಎಂದು ಕುಸಿದುಬಿದ್ದ ಪರಿಣಾಮ ಕಾರ್ಯಾಚರಣೆಗೆ ಅರ್ಧ ಗಂಟೆ ಅಡ್ಡಿ ಉಂಟಾಗಿತ್ತು. 82 ಎಕರೆ ವಿಸ್ತಾರದ ಸಾರಕ್ಕಿ ಕೆರೆಯಲ್ಲಿ ಸುಮಾರು 32 ಎಕರೆ ಜಾಗವನ್ನು ಒತ್ತುವರಿ ಮಾಡಲಾಗಿತ್ತು. ಹೈ ಕೋರ್ಟ್ ಆದೇಶದಂತೆ ಜಿಲ್ಲಾರಧಿಕಾರಿ ಶಂಕರ್ ತೆರವು ಕಾರ್ಯಾಚರಣೆಯನ್ನು ಗುರುವಾರ ಆರಂಭಿಸಿದ್ದರು. ನಾಳೆ ಬಂದ್ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡುವ ಸಂಭವವಿದ್ದು ಮತ್ತೆ ಭಾನುವಾರ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

English summary
The biggest drives clearing Sarakki Lake of its encroachments continue on Friday. Multiple surveys of the lake area had shown that 32 acres of the 84 acres of the lake area, has been encroached by private layouts and other establishments. Thirty-four acres spread across three villages Sarakki, Puttenhalli and Jaraganahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X