ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂತ್ರಿ ಡೆವಲಪರ್ಸ್ ವಿರುದ್ಧ ತಿರುಗಿ ನಿಂತ ಸ್ಯಾಂಕಿ ಕೆರೆ 'ವಾಕರ್ಸ್'

By Mahesh
|
Google Oneindia Kannada News

ಬೆಂಗಳೂರು,ಮೇ.3: ಕೆರೆಗಳ ನಗರವಾಗಿದ್ದ ಬೆಂಗಳೂರು ಈಗ ಸಮಸ್ಯೆಗಳ ಆಗರವಾಗಿರುವುದು ದುರಂತ. ಸಾರಕ್ಕಿ,ಪುಟ್ಟೇನಹಳ್ಳಿ, ಬಾಣಸವಾಡಿ ಕೆರೆಗಳ ಒತ್ತುವರಿ, ವರ್ತೂರು, ಬೆಳ್ಳಂದೂರು ಕೆರೆಗಳ ಮಾಲಿನ್ಯದ ಸುದ್ದಿ ನಂತರ ಸ್ಯಾಂಕಿ ಕೆರೆ ಉಳಿಸಲು ಅಲ್ಲಿನ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಗಾರ್ಡನ್ ಸಿಟಿ ಬೆಂಗಳೂರಿನ ಕೆರೆಗಳ ಕಥೆ ಮುಗಿಯದ ವ್ಯಥೆಯಾಗುತ್ತಿದೆ. ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳು, ಕೈಗಾರಿಕಾ ಸಂಸ್ಥೆಗಳ ಕೈವಶವಾಗಿರುವ ಕೆರೆಗಳ ಸುತ್ತಮುತ್ತಲಿನ ಜಾಗವನ್ನು ಉಳಿಸಲು ನಾಗರಿಕರು ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದಾರೆ. [ಕೆರೆಯಿಂದ ಹಾರಿ ಬಂತು ನೊರೆ ನೊರೆ]

ಸ್ಯಾಂಕಿಯಲ್ಲಿ ಏನು ಸಮಸ್ಯೆ: ಸದಾಶಿವ ನಗರ, ವಯ್ಯಾಲಿಕಾವಲ್, ಮಲ್ಲೇಶ್ವರ ಆಸುಪಾಸಿನ ಜನರ ಪ್ರೀತಿಯ ತಾಣ ಸ್ಯಾಂಕಿ ಕೆರೆ ಹೊಸ ಸ್ವರೂಪ ಪಡೆದು ಸುಧಾರಿಸಿಕೊಳ್ಳುವಷ್ಟರಲ್ಲೇ ಕೆರೆ ಜಾಗ ಒತ್ತುವರಿಯಾಗಿ ಅಪಾರ್ಟ್ಮೆಂಟ್ ನಿರ್ಮಾಣವಾಗುವ ಭೀತಿ ಎದುರಾಗಿದೆ.

ಸುಮಾರು 7 ಎಕರೆ ಭೂಮಿ ಈ ಹಿಂದೆ ಐಟಿಪಿಎಲ್ ಎಂಬ ಹೆಸರಿನ ಕಂಪನಿ ಖರೀದಿಸಿತ್ತು ನಂತರ ಐಡಿಯಲ್ ಕಂಪನಿ ಆನಂತರ ಗಲ್ಫ್ ಕಂಪನಿ ಕೊನೆಗೆ ಮಂತ್ರಿ ಡೆವಲಪರ್ಸ್ ಗೆ ಹಸ್ತಾಂತರವಾಗಿದೆ. ಈಗ ಮಂತ್ರಿ ಡೆವಲಪರ್ಸ್ ಈ ಜಾಗದಲ್ಲಿ ಸುಮಾರು 40 ಮಹಡಿ ಇರುವ ಬೃಹತ್ ಅಪಾರ್ಟ್ಮೆಂಟ್ ನಿರ್ಮಿಸಲು ಮುಂದಾಗಿದೆ.[ಬಾಣಸವಾಡಿ ಕೆರೆ ಒತ್ತುವರಿ ತೆರವು]

Sankey Tank Walkers STWA protest against Mantri Developers

ಪ್ರತಿಭಟನೆ ಏಕೆ?: ಕೆರೆ ಸಮೀಪದ ಸಂಪೂರ್ಣ ಜಾಗ ಈಗ ರಿಯಲ್ ಎಸ್ಟೇಟ್ ಕಂಪನಿಗಳ ವಶವಾಗಿದೆ. ಇದರಿಂದ ಕೆರೆ ಪರಿಸರ ಸಂಪೂರ್ಣ ನಾಶವಾಗಲಿದೆ. ಸುತ್ತಮುತ್ತಲಿನ ಪರಿಸರ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ. ನಮ್ಮ ಮುಂದಿನ ಪೀಳಿಗೆಗೂ ಕೆರೆ ಉಳಿಸಬೇಕಿದೆ ಎಂದು ಆಗ್ರಹಿಸಿ ಸ್ಯಾಂಕಿ ಕೆರೆ ವಾಕರ್ಸ್ ಅಸೋಸಿಯೇಷನ್(ಎಸ್ ಟಿಡಬ್ಲ್ಯೂಎ) ಸದಸ್ಯರು ಹಾಗೂ ಸ್ಥಳೀಯರು ಭಾನುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. [ಹಲಸೂರು ಕೆರೆ ಅಭಿವೃದ್ಧಿಗೆ ಯೋಜನೆ ಸಿದ್ಧ]

ಈ ಹಿಂದೆ(ಸುಮಾರು 8 ವರ್ಷ) ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಈ ಕೆರೆ ಸುತ್ತಮುತ್ತ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ನಿರಾಕರಿಸಿತ್ತು.

ಆದರೆ, ಮಂತ್ರಿ ಡೆವಲಪರ್ಸ್ ಗೆ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಅನುಮತಿ ಹೇಗೆ ಸಿಕ್ಕಿತು. ಕೆರೆಗೆ ಹೊಂದಿಕೊಂಡಿರುವ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ. ಅದರೆ, ಅಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ. ಎಆರ್ ಆನಂದ್ ಹೇಳಿದರು. [ಯಡಿಯೂರು ಕೆರೆ, ಪಾರ್ಕ್‌ ಮೇಲೊಂದು ಪಕ್ಷಿ ನೋಟ]

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಇತ್ತೀಚಿಗೆ ಸ್ಯಾಂಕಿ ಕೆರೆಗೆ ಭೇಟಿ ನೀಡಿದ್ದಾಗ ಸ್ಥಳೀಯರೊಡನೆ ಸಂವಾದ ನಡೆಸಿದ್ದರು. ಕೆರೆ ಪರಿಸರ ಉಳಿಸಲು ಸರ್ಕಾರ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದರು. ಘನ ತ್ಯಾಜ್ಯ ನಿರ್ವಹಣೆ ಹಾಗೂ ಎಲ್ಲಾ ಕೆರೆಗಳ ಉಳಿವಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಯಾಂಕಿ ಕೆರೆ: ಕರ್ನಲ್ ರಿಚರ್ಡ್ ಎಚ್ ಸ್ಯಾಂಕಿ ಅವರು 1882ರಲ್ಲಿ ನಿರ್ಮಿಸಿದ ಈ ಕೆರೆಗೆ ಈ ಮುಂಚೆ ಗಂಗಾಧರಕೋಟಿ ಕೆರೆ ಎಂಬ ಹೆಸರಿತ್ತು. ಸುಮಾರು 37.1 ಎಕರೆ ವಿಸ್ತೀರ್ಣ ಹೊಂದಿದೆ.

English summary
Members of the Sankey Tank Walkers Association (STWA) protested against Mantri Developers today (May.3). The association alleged that a promotion given to Mantri Developers to build Apartment adjacent to lake is illegal and anti environmental move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X